

ಶ್ರೀನಿವಾಸಪುರ 1 : ಸರ್ಕಾರವು ಪಟ್ಟಣಗಳ ಅಭಿವೃದ್ಧಿಗಾಗಿ ಕೋಟ್ಯಾಂತರ ರೂಗಳ ಅನುದಾನ ನೀಡುತ್ತಿದೆ ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಸಮಾಜ ಕಟ್ಟಕಡೆಯ ವ್ಯಕ್ತಿಗೂ ಮುಟ್ಟುವಂತೆ ಎಚ್ಚರವಹಿಸಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ಪುರಸಭೆಯಲ್ಲಿ ಗುರುವಾರ ಪುರಸಭಾ ಸಿಬ್ಬಂದಿ ಹಾಗೂ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.
ಚುನಾವಣಾ ಪ್ರಚಾರಕ್ಕಾಗಿ ಪಟ್ಟಣದ ಎಲ್ಲಾ ಬಡವಾಣೆಗಳಲ್ಲಿ ಪ್ರಚಾರ ಮಾಡಿದ ಸಮಯದಲ್ಲಿ ಸಾಮಾನ್ಯವಾಗಿ ಎಲ್ಲಾ ಬಡವಾಣೆಗಳಲ್ಲಿ ಶುದ್ದಕುಡಿಯುವ ನೀರು, ಬೀದಿಗಳು, ನೈರ್ಮಲ್ಯ ಸ್ವಚ್ಚತೆ, ಚರಂಡಿಗಳ ಸ್ವಚ್ಚತೆ ಇಲ್ಲದೆ ಗಬ್ಬುನಾರುತ್ತಿರುವ . ಬಗ್ಗೆ ಸಾರ್ವಜನಿಕರು ಮೌಖಿಕಾವಾಗಿ ಮಾಹಿತಿ ನೀಡಿದರು. ಅಲ್ಲದೆ, ನಾನು ಪ್ರಚಾರದ ಸಮಯದಲ್ಲಿ ನಾನು ಗಮನಿಸಿದಾಗಲೂ ಬೇಸರವಾಯಿತು ಎಂದು ತಿಳಿಸುತ್ತಾ, ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳಿಗೆ ತಕ್ಷಣ ಸ್ವಚ್ಚತಾ ಕಾರ್ಯವನ್ನು ಹಮ್ಮಿಕೊಳ್ಳುವಂತೆ ಸೂಚಿಸಿದರು.
ಸಾಮಾನ್ಯವಾಗಿ ಬಹುತೇಕ ಬಡಾವಣೆಗಳಲ್ಲಿ ಆಳವಡಿಸಿರುವ ಬೀದಿ ದೀಪಗಳು ಕಳಪೆ ಮಟ್ಟದ್ದಾಗಿದ್ದು, ದೀಪಗಳು ಬೆಳಕು ಬರುವುದಿಲ್ಲ ಎಂದು ಆರೋಪಿಸಿದರು. ತಕ್ಷಣ ಬೀದಿ ದೀಪಗಳ ಆಳವಡಿಸಲು ಗುತ್ತಿಗೆಯನ್ನು ಪಡೆದ ಗುತ್ತಿಗೆದಾರರನ್ನು ದೂರವಾಣಿ ಮುಖಾಂತರ ಮಾತನಾಡಿ ಅತೀ ಶೀಘ್ರವಾಗಿ ಬೀದಿ ದೀಪಗಳನ್ನು ಬದಲಿಸುವಂತೆ ಸೂಚನೆ ನೀಡಿದರು.
ಹಾಗು ಪುರಸಭೆಗೆ ವ್ಯಾಪ್ತಿಗೆ ಬರುವ ಇ –ಖಾತೆಗಳನ್ನು ಮಾಡಿಕೊಡುವ ಸಮಯದಲ್ಲಿ ಹಣಕ್ಕಾಗಿ ಪೀಡಿಸದೆ, ಕಾನೂನು ರೀತ್ಯ ಪಕ್ಷತೀತವಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಿಕೊಡುವಂತೆ ಸೂಚನೆ ನೀಡಿದರು. ಸಾರ್ವಜನಿಕರು ರಾಜಾಜೀ ರಸ್ತೆಯ ಕಾಮಗಾರಿ ಬಗ್ಗೆ ಶಾಸಕರ ಗಮನಕ್ಕೆ ತಂದ ಸಮಯದಲ್ಲಿ ರಸ್ತೆ ಕಾಮಗಾರಿಯು ವಿಳಂಬವಾಗುತ್ತಿರುವ ಅಧಿಕಾರಿಗಳ ಬಳಿ ಚರ್ಚೆ ನಡೆಸುತ್ತಿರುವ ಸಮಯದಲ್ಲಿ
ಪಿಡಬ್ಲ್ಯೂಡಿ ಇಂಜನೀಯರ್ ಹಾಗೂ ಪುರಸಭೆ ಅಧಿಕಾರಿಗಳಿಗೆ ತರಾಟೆ : ಪಟ್ಟಣದ ರಾಜಾಜಿರಸ್ತೆ ಕಾಮಗಾರಿ ನಿದಾನ ಗತಿಯಲ್ಲಿ ನಡೆಯಲು ನಿಮ್ಮಿಂದಲೇ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳನ್ನು ಶಾಸಕರು ತರಾಟೆಗೆ ತೆಗೆದುಕೊಂಡರು. ಅದರ ಬಗ್ಗೆ ಗುತ್ತಿಗೆದಾರರಿಂದ ಮಾಹಿತಿ ಪಡೆದು ಮಾತನಾಡಿ ಪುರಸಭೆ ಅಧಿಕಾರಿಗಳು ಅತಿ ಶೀಘ್ರವಾಗಿ ನೀರಿನ ಪೈಪ್‍ಲೈನ್ ಆಳವಡಿಸುವಂತೆ, ಪಿಡಬ್ಲ್ಯೂಡಿ ಇಂಜನೀಯರ್ ರವರು ರಸ್ತೆ ಅಗಲೀಕರಣಕ್ಕೆ ಮಾರ್ಕಿಂಗ್ ಮಾಡಿಸಿಕೊಡುವಂತೆ ಸೂಚಿಸಿದರು. ಗುತ್ತಿಗೆದಾರಿಗೆ ಗಣಮಟ್ಟದ ರಸ್ತೆ ಕಾಮಗಾರಿಯನ್ನು ಮಾಡುವಂತೆ ತಿಳಿಸಿದರು.
ಆಡಳಿತಾಧಿಕಾರಿ ಶರೀನ್‍ತಾಜ್, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ್ , ಕಚೇರಿ ವ್ಯವಸ್ಥಾಪಕ ನವೀನ್ ಚಂದ್ರ, ಕಂದಾಯ ಅಧಿಕಾರಿಗಳಾದ ವಿ.ನಾಗರಾಜ್, ಎನ್.ಶಂಕರ್,ಕಿರಿಯ ಅಭಿಯಂತರ ವಿ.ಶ್ರೀನಿವಾಸಪ್ಪ, ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್ ಇದ್ದರು.


