ಕಸದ ತೊಟ್ಟಿಯಲ್ಲಿ ಬಿಸಾಕಿದ ಹೆಣ್ಣು ಇದೀಗ ಪ್ರತಿಷ್ಟಿತ ಕೆಫೆಯ ಮ್ಯಾನೇಜರ್

JANANUDI.COM NETWORK

ಬಿಹಾರ;ಪಾಟ್ನಾದಲ್ಲಿ ತಾಯಿಯೊಬ್ಬಳು ತನ್ನ ಮಗುವನ್ನು ಕಸದ ತೊಟ್ಟಿಗೆ ಎಸೆದು ಹೋಗಿದ್ದು ಓರ್ವ ಭಿಕ್ಷುಕಿ ಅವಳನ್ನು ಸಾಕಿದಳು ಇಂದು ಅವಳು ಬೆಳೆದು ದೊಡ್ಡವಳಾಗಿ ಕಷ್ಟವನ್ನು ಮೆಟ್ಟಿನಿಂತು ಪ್ರತಿಷ್ಟಿತ ಕೆಫೆಯ ಮ್ಯಾನೇಜರ್ ಆಗಿದ್ದಾಳೆ.
ಪಾಟ್ನಾದಲ್ಲಿ ತಾಯಿಯೊಬ್ಬಳು ತನ್ನ ಮಗುವನ್ನು ಕಸದ ತೊಟ್ಟಿಗೆ ಎಸೆದು ಹೋಗಿದ್ದಳು. ಈ ವೇಳೆ ಹಸುಗೂಸು ಅಳುತ್ತಾ ಕಸದ ತೊಟ್ಟಿಗೆಯೊಳಗೆ ಇದ್ದದನ್ನು ನೋಡಿ ಕರಿದೇವಿ ಎಂಬ ಭಿಕ್ಷುಕಿ ಮನೆಗೆ ಕೊಂಡು ಹೋಗಿ. ಮಗುವಿಗೆ ಜ್ಯೋತಿ ಎಂದು ಹೆಸರಿಡುತ್ತಾಳೆ. ಭಿಕ್ಷೆ ಬೇಡಿ, ಚಿಂದಿ ಆಯ್ದು ಅದರಿಂದ ಬಂದ ಹಣದಲ್ಲಿ ಮಗುವನ್ನು ಸಾಕುತ್ತಾಳೆ. ಜ್ಯೋತಿಯು ಸ್ವಲ್ಪ ಬೆಳೆದ ಮೇಲೆ ಭಿಕ್ಷೆ ಬೇಡುತ್ತಾ ಮತ್ತು ಚಿಂದಿ ಆಯುತ್ತಾ ಸಾಕು ತಾಯಿಗೆ ಸಹಾಯ ಮಾಡುತ್ತಿರುತ್ತಾಳೆ. ಆದರೆ, ಅನಾರೋಗ್ಯದಿಂದ ಕರಿದೇವಿ ಮೃತಪಡುತ್ತಾಳೆ. ಆ ಸಮಯದಲ್ಲಿ ಜ್ಯೋತಿಗೆ 12 ವರ್ಷ ವಯಸ್ಸಾಗಿರುತ್ತದೆ. ಇದಾದ ಬಳಿಕ ರಾಂಬೋ ಹೋಮ್ ಫೌಂಡೇಶನ್’ ಎಂಬ ಸಂಸ್ಥೆಯು ಜ್ಯೋತಿಯ ನೆರವಿಗೆ ಧಾವಿಸಿ ಆಕೆಗೆ ಶಿಕ್ಷಣವನ್ನು ಕೊಡಿಸುತ್ತಾರೆ.
ಜ್ಯೋತಿ 10ನೇ ತರಗತಿ ಪರೀಕ್ಷೆಯನ್ನು ಬರೆದು ಒಳ್ಳೆಯ ಅಂಕಗಳೊಂದಿಗೆ ಉತ್ತೀರ್ಣಳಾಗಿದ್ದಾಳೆ.ಇದರ ಬಳಿಕ ಬಿಹಾರದಲ್ಲಿ ಕಚೇರಿಯೊಂದರಲ್ಲಿ ಕೆಲಸಕ್ಕೆ ಸೇರಿ ಅದರ ಜೊತೆಗೆ ಮಾರ್ಕೆಟಿಂಗ್ ಕಲಿಯುತ್ತಾಳೆ. ಇದೀಗ ಜ್ಯೋತಿಗೆ 19 ವರ್ಷ ಈಕೆಯ ಪ್ರತಿಭೆಯನ್ನು ನೋಡಿ ಲೆಮನ್ ಕೆಫೆ ಎಂಬ ರೆಸ್ಟೊರೆಂಟ್ ಮ್ಯಾನೇಜರ್ ಹುದ್ದೆಗೆ ಆಯ್ಕೆಯಾಗಿದ್ದಾಳೆ