

ಬೈಂದೂರು: ಶಾಲೆಯಿಂದ ಮನೆಗೆ ಬರುತ್ತಿದ್ದಾಗ ಕಾಲ್ತೋಡು ಗ್ರಾಮದ ಬೀಜಮಕ್ಕಿ ಎಂಬಲ್ಲಿ ಕಾಲುಸಂಕದಿಂದ ಬಿದ್ದು ನೀರು ಪಾಲಾಗಿದ್ದ ಕಾಲ್ತೋಡು ಗ್ರಾಮದ ಮಕ್ಕಿಮನೆಯ 2ನೇ ತರಗತಿ ವಿದ್ಯಾರ್ಥಿನಿ ಸನ್ನಿಧಿ(7) ಮೃತದೇಹ 48 ಗಂಟೆಗಳ ಬಳಿಕ ಇಂದು ಸಂಜೆ ಪತ್ತೆಯಾಗಿದೆ.
ಕಾಲು ಜಾರಿ ಬಿದ್ದ ಸನ್ನಿಧಿ ಸಿಕ್ಕಿದ್ದು ಹೆಣವಾಗಿ ಶೌರ್ಯ ತಂಡದಿಂದ ಬಾಲಕಿಯ ಮೃತದೇಹ ಪತ್ತೆ ಧರ್ಮಸ್ಥಳದ ವಿಪತ್ತು ನಿರ್ವಹಣಾ ಘಟಕ – ಶೌರ್ಯ ತಂಡ 300 ಅಡಿ ದೂರದಲ್ಲಿ ಮೃತದೇಹ ಪತ್ತೆ ಬುಧವಾರ ಸಂಜೆ ಪತ್ತೆಯಾದಳು ಸನ್ನಿಧಿ
ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ಬಾಲಕಿಗಾಗಿ ನಿರಂತರವಾಗಿ ಶೋಧ ಕಾರ್ಯ ನಡೆಸಿದರೂ ಬುಧವಾರ ಸಂಜೆವರೆಗೂ ಸುಳಿವು ಇರಲಿಲ್ಲ. ಅಗ್ನಿ ಶಾಮಕ ದಳ ಸಿಬ್ಬಂದಿ, ಈಜುಪಟುಗಳಾದ ಮೀನುಗಾರ ನರೇಶ್ ಕೊಡೇರಿ ನೇತೃತ್ವದ 22 ಜನರ ತಂಡ, ಸಾರ್ವಜನಿಕರೂ ಸೇರಿ ನೂರಕ್ಕೂ ಅಧಿಕ ಮಂದಿ ಶೋಧ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
