ಶ್ರೀನಿವಾಸಪುರದ ಕನ್ಯಕಾಪರಮೇಶ್ವರಿ ದೇವಾಲಯದ ಮುಂದೆ ಏರ್ಪಡಿಸಿದ್ದ ಗಂಗಾ ಹಾರತಿ ಕಾರ್ಯಕ್ರಮವನ್ನು ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ಮಹಮದ್ ಬಿ.ಗೊರವಿನಕೊಳ್ಳ ಹಾಗೂ ಪುರಸಭಾಧ್ಯಕ್ಷ ಬಿ.ಆರ್.ಭಾಸ್ಕರ್ ಉದ್ಘಾಟಿಸಿದರು. ಕನ್ಯಕಾ ಪರಮೇಶ್ವರಿ ಪುತ್ಥಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಮಾವಿನ ಪಟ್ಟಣದಲ್ಲಿ ಗಂಗಾ ಹಾರತಿ, ತೆಪ್ಪೋತ್ಸವ ಉದ್ಘಾಟನೆ
ಶ್ರೀನಿವಾಸಪುರ: ಪಟ್ಟಣದ ಕನ್ಯಕಾ ಪರಮೇಶ್ವರಿ ದೇವಾಲಯದಲ್ಲಿ ದಸರಾ ಪ್ರಯುಕ್ತ ಮಂಗಳವಾರ ಗಂಗಾ ಹಾರತಿ ಹಾಗೂ ತೆಪ್ಪೋತ್ಸವ ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ಮಹಮದ್ ಬಿ.ಗೊರವಿನಕೊಳ್ಳ ಹಾಗೂ ಪುರಸಭಾಧ್ಯಕ್ಷ ಬಿ.ಆರ್.ಭಾಸ್ಕರ್ ಉದ್ಘಾಟಿಸಿದರು.
ಬಿ.ಆರ್.ಭಾಸ್ಕರ್ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಗಂಗಾ ಹಾರತಿಗೆ ಹೆಚ್ಚಿನ ಮಹತ್ವವಿದೆ. ತೆಪ್ಪೋತ್ಸವ ಒಂದು ಪರಂಪರೆಯಾಗಿ ಮುಂದುವರಿದಿದೆ. ಲೋಕಕಲ್ಯಾಣಕ್ಕಾಗಿ ನಡೆಸುವ ಈ ಕಾರ್ಯಕ್ರಮಗಳಲ್ಲಿ ಆರ್ಯವೈಶ್ಯ ಸಮುದಾಯ ಸ್ವಯಂ ಪ್ರೇರಣೆಯಿಂದ ಭಾಗವಹಿಸಿರುವುದು ಸ್ತುತ್ಯಾರ್ಹ ಎಂದು ಹೇಳಿದರು.
ಆರ್ಯ ವೈಶ್ಯ ಟ್ರಸ್ಟ್‍ನ ಅಧ್ಯಕ್ಷ ವೈ.ಆರ್.ಶಿವಪ್ರಕಾಶ್, ಕಾರ್ಯದರ್ಶಿ ಕೆ.ವಿ.ಸೂರ್ಯನಾರಾಯಣ ಶೆಟ್ಟಿ, ನಿರ್ದೆಶಕ ಎಸ್.ಆರ್.ಅಮರನಾಥ್, ಮುಖಂಡ ಬಿ.ಆರ್.ನಾಗೇಂದ್ರ ಬಾಬು, ಮಾಗಡಿ ಯುವಕ ಸಂಘದ ಪದಾಧಿಕಾರಿಗಳಾದ ಎಸ್.ಆರ್.ರಜತ್, ಪಿ.ರಸವಂತ್, ಬಿ.ಎಸ್.ಕೃಷ್ಣ, ಬಿ.ಎಚ್.ಸುಹಾಸ್, ಎಸ್.ಬಿ.ಸಂಕೀರ್ತ್, ಸೇವಾಕರ್ತರಾದ ವೈ.ಆರ್.ನಾಗೇಂದ್ರಬಾಬು, ಎಸ್.ಕಿಶೋರ್ ಕುಮಾರ್ ಇದ್ದರು