ಶ್ರೀನಿವಾಸಪುರ : 2023 ರಲ್ಲಿ ಅರಣ್ಯ ಇಲಾಖೆಯು ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ರೈತರ ಆಸ್ತಿ, ಪಾಸ್ತಿ ಬೆಳಗಳನ್ನು ನಾಶಪಡಿಸಿ, ರೈತರ ಭೂಮಿಯನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಂಡಿದೆ ಎಂದು ಆರೋಪಿಸಿದರು. ಅಲ್ಲದೆ ರೈತರನ್ನ ಭೂಗಳ್ಳರೆಂದು ಸಂಭೋದನೆ ಮಾಡಿದ್ದಾರೆ ಎಷ್ಟು ಸರಿ. ಅರಣ್ಯ ಇಲಾಖೆಯು ರೈತರಿಗೆ ಎಷ್ಟುನಷ್ಟ ವುಂಟು ಮಾಡಿದ್ದರೋ ಅಷ್ಟು ಪರಿಹಾರ ರೂಪದಲ್ಲಿ ಭರಿಸಬೇಕು ಎಂದು ಕೆಪಿಆರ್ಎಸ್ ನ ಪ್ರದಾನ ಕಾರ್ಯದರ್ಶಿ ಪಾತಕೋಟೆ ಪಿ.ಆರ್.ನವೀನ್ಕುಮಾರ್ ಒತ್ತಾಯಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಕೆಪಿಆರ್ಎಸ್ ಸಂಘದಿಂದ ಹಾಗು ಭೂ ಸಂತ್ರಸ್ಥರಿಂದ ಮಂಗಳವಾರ ಅರಣ್ಯ ಇಲಾಖೆಯ ಅಕ್ರಮ ಪ್ರವೇಶ ಹಾಗು ರೈತರ ಬೆಳೆಗಳನ್ನು ನಾಶ ಪಡಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಭಟಿಸಿ ಮಾತನಾಡಿದರು.
ಅರಣ್ಯ ಇಲಾಖೆಯವರು ರೈತರು ದೌರ್ಜನ್ಯ ವೆಸಗುತ್ತಿದ್ದು, ತಹಶೀಲ್ದಾರ್ ಮಧ್ಯ ಪ್ರವೇಶಿಸಿ ಅರಣ್ಯ ಇಲಾಖೆ, ರೈತರ ಸಂಘಟನೆಯಲ್ಲಿ ಜಂಟಿ ಸಭೆ ನಡೆಸಬೇಕು ಎಂದರು.
ಪ್ರತಿಭಟನಾ ಕಾರರ ಸಮಸ್ಯೆಗಳನ್ನು ಆಲಿಸಿ ತಹಶೀಲ್ದಾರ್ ಜಿ.ಎಸ್.ಸುದೀಂದ್ರ ಮಾತನಾಡಿ ಅರಣ್ಯ ಇಲಾಖೆ ನಮ್ಮ ಅದೀನದಲ್ಲಿ ಇಲ್ಲ. ಹೈಕೋರ್ಟ್, ಸುಪ್ರೀಂಕೋರ್ಟ್ನಲ್ಲಿ ದಾವೆ ಹಾಕಿ ನಿಮ್ಮ ಸಮಸ್ಯೆ ಪರಿಹರಿಸಿಕೊಳ್ಳಬಹುದು. ಅರಣ್ಯ ಇಲಾಖೆಗೆ ಸಂಬಂದಿಸದಂತೆಣ್ಯಾ ಇಲಾಖೆಯವರು ಅವರ ಕಾನೂನಿನಂತೆ ಆದೇಶ ಪಾಲಿಸುತ್ತಾರೆ. ಅತಿ ಶೀಘ್ರವಾಗಿ ನಿಮ್ಮ ಸಮಸ್ಯೆಯನ್ನು ಅರಣ್ಯ ಇಲಾಖೆ ಹಾಗು ಭೂ ಹೋರಾಟ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದರು. ಆ ಸಭೆಗೆ ನಿಮ್ಮ ಜಮೀನಿನ ದಾಖಲೆಗಳು ತರುವಂತೆ ಸೂಚಿಸಿದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್ ಮಾತನಾಡಿ ನಾವು ನಿಮ್ಮ ಹೋರಾಟಕ್ಕೆ ಬೆಂಬಲ ನೀಡುತ್ತೇವೆ. ನಮ್ಮ ಬ್ಯಾಂಕ್ ರೈತರ ಬ್ಯಾಂಕ್ ಅವರು ಕ್ಷೇಮವಾಗಿದ್ದರೆ ನಮ್ಮ ಬ್ಯಾಂಕ್ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯ.
ರೈತರಿಗೆ ಭೂಮಿ ನೀಡಬೇಕಾದರೆ ಭೂ ಸಾಗುವಳಿ ಸಮಿತಿಯಲ್ಲಿ ಅರಣ್ಯ ಇಲಾಖೆಯುವರು ಸಮಿತಿ ಸದಸ್ಯರು. ಅರಣ್ಯ ಇಲಾಖೆಯುವರು ಸಾಗುವಳಿ ಚೀಟಿ ನೀಡಬೇಕಾದರೆ ಅರಣ್ಯ ಇಲಾಖೆ ಸಹಿ ಮಾಡಿರುತ್ತಾರೆ ಆದರೆ ಇಂದು ವಾಪಸ್ಸು ಪಡೆಯುತ್ತಿದ್ದು ಇದು ಯಾವ ನ್ಯಾಯ. ಕೋರ್ಟ್ನಿಂದ ಆದೇಶ ತಂದರೂ ಸಹ ಅರಣ್ಯ ಇಲಾಖೆ ಕೇರ್ಮಾಡುತ್ತಿಲ್ಲ ದೂರಿದರು. ತಹಶೀಲ್ದಾರ್ ರವರು ಮಧ್ಯೆ ಪ್ರವೇಶಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದರು.
ಕೆಪಿಆರ್ಎಸ್ ಜಿಲ್ಲಾಧ್ಯಕ್ಷ ಟಿ.ಎಂ.ವೆಂಕಟೇಶ್ , ಉಪಾಧ್ಯಕ್ಷೆ ಗಂಗಮ್ಮ, ತಾಲೂಕು ಪ್ರದಾನ ಕಾರ್ಯದರ್ಶಿ ಬಿ.ಎ.ಸೈಯದ್ಫಾರೂಕ್, ಉಪಾಧ್ಯಕ್ಷ ಎನ್.ವೀರಪ್ಪರೆಡ್ಡಿ, ಪದಾಧಿಕಾರಿಗಳಾದ ಆರ್.ವೆಂಟಕಟೇಶ್, ಎಂ.ಎಸ್.ನಾಗರಾಜ್, ಜಿ.ಮಂಜುಳ, ರಾಯಲ್ಪಾಡು ಬಕ್ಷುಸಾಬ್,ಶಿವಾರೆಡ್ಡಿ, ಭೂ ಹೋರಾಟ ಸಮಿತಿ ಮುಖಂಡರಾದ ಉಪ್ಪರಪಲ್ಲಿ ಚಲಪತಿ, ನಾಗರಾಜ್, ಶಂಕರಪ್ಪ, ವೆಂಕಟಸ್ವಾಮಿ, ಆಂಜಪ್ಪ, ಶಿವಪ್ಪ, ಓಬನ್ನ, ಚೌಡರೆಡ್ಡಿ, ಕೇತುಗಾನಹಳ್ಳಿ ನಾಗರಾಜ್ ಇದ್ದರು.