ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ರಾಯಲ್ಪಾಡು 1 : ಗಳಿಸಿದ ಧನ ಚಿರವಲ್ಲ ,ಪಡೆದ ಅಧಿಕಾರ ಸ್ಥಿರವಲ್ಲ, ಏರಿದ ಅಂತಸ್ತು ಶಾಶ್ವತವಲ್ಲ, ಸಂತಸ ಸಂಭ್ರಮ ಸಕಲವೂ ನಶ್ವರ . ಮಾಡಿದ ಸತ್ಕಾರ್ಯ , ಮರೆದ ಔದಾರ್ಯ , ಆನಂದಿಸಿ ಅನುಭವಿಸಿದ ನೆನಪುಗಳ ಮಾಧುರ್ಯ ಎಂದಿಗೂ ಅಜರಾಮರ ಎಂದು ಶಾಸಕ ಕೆ.ಆರ್.ರಮೇಶ್ಕುಮಾರ್ ತಿಳಿಸಿದರು.
ಗನಿಬಂಡೆಯ ಟಿಟಿಡಿ ಸಮುದಾಯ ಭವನದಲ್ಲಿ ತೆರದಿದ್ದ ಕೋವಿಡ್ ಕೇರ್ ಸೆಂಟರ್ಗೆ ಮಂಗಳವಾರ ಶ್ರೀನಿವಾಸಪುರ ರೋಟರಿಯಿಂದ 65ಸಾವಿರ ಮೌಲ್ಯದ 5 ಆಕ್ಸಿಜನ್ ಕಾನ್ಸನ್ಟ್ರೇಟರ್ಗಳನ್ನು ಹಸ್ತಾಂತರಿಸಿ ಮಾತನಾಡಿದರು.
ಕೊರೋನಾ ಎಂಬ ಸೋಂಕು ವಿಶ್ವದಲ್ಲೆಡೆ ಹಬ್ಬಿಕೊಂಡು ಹಲವಾರು ಜನರನ್ನು ಬಲಿ ಪಡೆದಿದೆ.ಬಡವರು,ನಿರ್ಗತಿಕರು,ಕೊರೋನಾದಿಂದ ಮೃತಪಟ್ಟ ಕುಟುಂಬದವರು ಸಂಕಷ್ಟದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಲವಾರು ಸಂಘಟನೆಗಳು,ಸಂಘ ಸಂಸ್ಥೆಗಳು ದಾನಿಗಳು ಸಮಾಜಸೇವಕರು ತಮ್ಮ ಕೈಲಾದ ಸೇವೆಯನ್ನು ಮಾಡುತ್ತಿದ್ದು ವಿಶ್ವದಿಂದಲೇ ಕೊರೋನಾ ಎಂಬ ಕಾಯಿಲೆಯು ದೂರವಾಗಲಿ ಎಂದು ಭಗವಂತನಲ್ಲಿ ಎಲ್ಲರೂ ಪ್ರಾರ್ಥಿಸೋಣ ಎಂದು ತಿಳಿಸಿದರು.
ಡಾ.ಕವಿತ,ಶ್ರೀನಿವಾಸಪುರ ರೋಟರಿ ಸೆಂಟ್ರಲ್ನ ಅಧ್ಯಕ್ಷ ಶಿವಮೂರ್ತಿ,ಕಾರ್ಯದರ್ಶಿ ನಾಗೇಶ್,ಗೌವರ್ನರ್ ಎಸ್.ವಿ.ಸುದಾಕರ್, ಸದಸ್ಯರಾದ ಡಾ.ವೆಂಕಟಾಚಲ,ಬೈರೇಗೌಡ,ವೇಣು ವಿದ್ಯಾಸಂಸ್ಥೆಯ ಅಧ್ಯಕ್ಷ ಎನ್.ಬಿ.ಗೋಪಾಲಗೌಡ,ಆವಲಕುಪ್ಪ ಮಂಜು, ಮುಖಂಡರಾದ ವೈ.ಆರ್.ರಾಮಾಜನೇಯ, ಶ್ರೀನಿವಾಸರಾವ್,ಶ್ರೀನಿವಾಸಪುರ ಮಂಜು, ಗ್ರಾ.ಪಂ.ಮಾಜಿ ಸದಸ್ಯ ಬೈರೆಡ್ಡಿ, ಶಂಕರ,ಮರಿಮಾಕಲಪಲ್ಲಿ ವೇಣು ಕೂರಿಗೇಪಲ್ಲಿ ಗ್ರಾ.ಪಂ.ಅಧ್ಯಕ್ಷ ವಿಶ್ವನಾಥರೆಡ್ಡಿ ಇದ್ದರು.