ಹೆಣ್ಣಿನ ರಂಪಾಟಕ್ಕೆ ಆಕಾಶದ ಮಾರ್ಗ ಮಧ್ಯದಿಂದಲೇ ವಿಮಾನ ವಾಪಾಸ್..!! ಪ್ರಯಾಣಿಕೆ ಮೇಲೆ ಫೆಡರಲ್ ಆರೋಪ..!!!

JANANUDI.COM NETWORK


(ಅಮೆರಿಕ) ವಿಮಾನದಲ್ಲಿ ಏನಾದರೂ ತಾಂತ್ರಿಕ ದೋಷ ಕಂಡು ಬಂದರೆ ಅಥವಾ ಏನಾದರೂ ಪ್ರಮುಖ ಸಮಸ್ಯೆ ಉಂಟಾದರೆ ವಾಪಸ್ ಆಗುವುದನ್ನು ನೋಡಿದ್ದೇವೆ. ಆದರೆ, ಈ ಸಣ್ಣ ಕಾರಣಕ್ಕೂ ವಿಮಾನ ವಾಪಸ್ ಆಗಿರುವುದು ಇದೇ ಮೊದಲಬಾರಿಗೆ ಎಂದು ಭಾವಿಸಲಾಗುತ್ತದೆ.
ಟೋಕಿಯೋದಿಂದ ಡಲ್ಲಾಸ್ಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಯುವತಿಯೊಬ್ಬಳು ತನಗೆ ಕೊಟ್ಟ ಆಸನದ ವ್ಯವಸ್ಥೆಯಲ್ಲಿ ಮೊಬೈಲ್ ಫೋನ್ ಚಾರ್ಜ್ ಆಗೋದಿಲ್ಲ ಎಂದು ದೊಡ್ಡ ರಂಪ ಮಾಡಿದ್ದಾಳೆ. ಈ ರಂಪಾಟಕ್ಕೆ ಪೈಲೆಟ್ ವಿಮಾನವನ್ನ ಹಿಂದಿರುಗಿಸಿದ್ದಾನೆ. ಈ ಘಟನೆ ಕಳೆದ ವಾರ ನಡೆದಿದ್ದು, ಈಗ ಈ ಅಶಿಸ್ತಿನ ಪ್ರಯಾಣಿಕೆ ಇದೀಗ ಫೆಡರಲ್ ಆರೋಪ ಎದುರಿಸುತ್ತಿದ್ದಾಳೆ.
26 ವರ್ಷದ ವಾಲ್ಕಾ ಸುಜುಕಿ ಎಂಬಾಕೆ ತನ್ನ ಸೀಟಿನಲ್ಲಿ ಚಾರ್ಜರ್ ಕೆಲಸ ಮಾಡುತ್ತಿಲ್ಲ ಎಂಬ ಕಾರಣಕ್ಕೆ ರಂಪಾಟ ಮಾಡಿದ್ದಳು. ಈಕೆ ವಿಮಾನಯಾನ ಸಿಬ್ಬಂದಿ ಬಳಿ ತನ್ನ ಫೋನ್ ಚಾರ್ಜ್ ಆಗುತ್ತಿಲ್ಲ ಎಂದು ಹೇಳಿದ್ದಾಳೆ, ವಿಮಾನಯಾನ ಸಿಬ್ಬಂದಿ ಎಷ್ಟು ಸಮಾದಾನ ಮಾಡಲು ಪ್ರಯತ್ನಿಸಿದರೂ ಕೇಳದೆ, ವಿಮಾನದ ಮುಂಭಾಗದಲ್ಲಿ ಇರುವ ಪೈಲೆಟ್ ಎಂಜಿನಿಯರಗಳಿದ್ದ ಕಾಕ್ಪಿಟ್ ಹತ್ತಿರ ಹೋಗಿ ಕಾಕ್ ಪಿಟ್ ಬಾಗಿಲನ್ನು ಬಡಿದಿದ್ದಾಳೆ. ವಿಮಾನಯಾನ ಸಿಬ್ಬಂದಿಗೆ ಯುವತಿಯನ್ನ ಶಾಂತಗೊಳಿಸಲು ಯತ್ನಿಸಿದ್ರೂ ಸಹ ಆಕೆ ಮಾತ್ರ ಕಿರುಚಾಡೋದನ್ನ ಮುಂದುವರಿಸಿದ್ದಾಳೆ. ಇಷ್ಟಲ್ಲದೆ ಈ ಸುಜುಕಿ ವಿಮಾನದ ಇಬ್ಬರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಈ ಕಾರಣದಿಂದಾಗಿ ವಿಮಾನವನ್ನ ಹಿಂತಿರುಗಿಸಬೇಕಾದ ಅನಿವಾರ್ಯತೆಯಾಯಿತೆಂದು ವಿಮಾನ ಸಿಬ್ಬಂದಿ ಹೇಳಿದೆ.
ವಿಮಾನದಲ್ಲಿ ಹಲ್ಲೆ,ಗಲಾಟೆ, ವಿಮಾನದ ಗಗನ ಸಖಿಯರ ಮೇಲೆ ಅನುಚಿತ ವರ್ತನೆ ತೋರಿದರೆ, ಇಂತ್ವರನ್ನು ಮುಂದಿನ ವಿಮಾನ ನಿಲ್ದಾಣದಲ್ಲಿ, ವಿಮಾನ ನಿಲ್ದಾಣದ ಪೊಲೀಸರಿಗೆ ಒಪ್ಪಿಸಲಾಗುತ್ತದೆ,ಅವರ ಮೇಲೆ ಅಂತರಾಷ್ಟ್ರೀಯ ಮಟ್ಟದ ಕೇಸ್ ದಾಖಲಾಗುತ್ತದೆ. ಆದರೆ ಹೊರಟ ವಿಮಾನ ಹಿಂತಿರುಗಿ ಆರೋಪಿ ಪ್ರಯಾಣಿಕಳನ್ನು ಪೊಲೀಸರಿಗೆ ಒಪ್ಪಿಸಿದ್ದು ಅಪರೂಪದ ಘಟನೆಯಾಗಿದೆ
.