

ಬೈಂದೂರು;ಬೈಂದೂರು ಹೋಲಿಕ್ರಾಸ್ ಚರ್ಚ್ನಲ್ಲಿ ಸಂಭ್ರಮದ ತೆರಾಲಿ ಹಬ್ಬ ಸಡಗರ, ಸಂಭ್ರಮದಿಂದ ಜರುಗಿತು, ಬಲಿದಾನದ ನೇತ್ರತ್ವವನ್ನು ವಹಿಸಿದ ಕುಂದಾಪುರ ವಲಯದ ಮುಖ್ಯ ಧರ್ಮಗುರು ರೆ. ಫಾ. ಪಾವ್ಲ್ ರೇಗೋ “ಭರವಸೆ ನಮಗೆ ಎಂದಿಗೂ ನಿರಾಶೆಗೊಳಿಸುದಿಲ್ಲಾ ಎಂಬ ಸಂದೇಶವನ್ನು ನೀಡಿದರು. ಇದೇ ಸಂದರ್ಭದಲ್ಲಿ ದಾನಿಗಳಿಗೆ ಹಾಗೂ ಸೆವಾಕರ್ತರಿಗೆ ಗೌರವಾರ್ಥಕವಾಗಿ ಮೇಣದ ಬತ್ತಿ ನೀಡಿ ಗೌರವಿಸಲಾಯಿತು. ಹಿಂದಿನ ದಿನದ ಹಬ್ಬದ ಧಾರ್ಮಿಕ ವಿಧಿವಿಧಾನಗಳನ್ನು ಜೆಜ್ವಿತ್ ಧರ್ಮಗುರು ರೆ. ಫಾ. ವಿಲ್ಸನ್ ಸಲ್ದಾನ, ಕೋಂಪ್ರಿ ಹಬ್ಬದ (ದೇವರ ವಾಕ್ಯದ) ಸಂಭ್ರವನ್ನು ಬಸ್ರೂರು ಚರ್ಚಿನ ರೆ. ಫಾ. ಮೆಲ್ವಿಲ್ ರೋಯ್ ಲೋಬೋರವರು ನೆರವೆರಸಿದರು, ಈ ಸಂದರ್ಭ ಉಡುಪಿ ಧರ್ಮಪ್ರಾಂತ್ಯದ ಸಹಸ್ರಾರು ಧರ್ಮಗುರುಗಳು, ಬೈಂದೂರಿನ ಸಹಾಯಕ ಧರ್ಮಗುರು ಜೊಸ್ವಿನ್ ಸಿಕ್ವೇರಾ,ಪ್ರಧಾನ ಪೋಷಕ ಸ್ಯಾಮುಯಲ್ ರೆಬೆರೋ, ಚರ್ಚಿನ ಪಾಲನ ಮಂಡಳಿಯ ಉಪಾಧ್ಯಕ್ಷ ಸ್ಟೇಪನ್ ಡಾಯಸ್, ಕಾರ್ಯದರ್ಶಿ ವೀಣಾ ಫೆರ್ನಾಂಡಿಸ್, ಆಯೋಗದ ಸಂಯೋಜಕಿ ಅನಿತಾ ನಜ್ರೆತ್ ಉಪಸ್ಥಿತರಿದ್ದರು.
ಚರ್ಚಿನ ಧರ್ಮಗುರುಗಳಾದ ರೆ.ಫಾ. ವಿನ್ಸೆಂಟ್ ಕುವೆಲ್ಲೊರವರು ಚರ್ಚಿನ ಮಹೋತ್ಸವಕ್ಕೆ ಮಾರ್ಗದರ್ಶಕರಾಗಿ, ಈ ಸಂಭ್ರವನ್ನು ನೆಡೆಸಿಕೊಟ್ಟು, ಸರ್ವರಿಗೂ ಧನ್ಯವಾದ ಸಲ್ಲಿಸಿದರು.

























































































