ಮಾವ ಅದೂ ಕುರುಡ, ತನ್ನ ಸೊಸೆಯನ್ನು 80,000 ರೂಪಾಯಿಗೆ ಮಾರಿದ

JANANUDI.COM NETWORK

ಲಕ್ನೋ: ಉತ್ತರ ಪ್ರದೇಶದ ರಾಜಧಾನಿ ಲಕ್ನೋ ಸಮೀಪದ ಬರಾಬಂಕಿಯಲ್ಲಿ ಒಬ್ಬ ಮಾವ ಅದೂ ಕುರುಡ, ತನ್ನ ಸೊಸೆಯನ್ನು 80,000 ರೂಪಾಯಿಗೆ ಮಾರಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮಗನಿಗೆ ಇದು ತಿಳಿದು ಅವನು ಪೊಲೀಸರಿಗೆ ದೂರು ನೀಡಿದ್ದಾನೆ. ಇದೀಗ ಪೊಲೀಸರು ಎಫ್ಐಆರ್ ದಾಖಲಿಸಿ ಬಂದಿಸಿದ್ದಾರೆ

     ಪ್ರಕರಣ ಬರಾಬಂಕಿಯ ರಾಮನಗರ ತಹಸಿಲ್ ಸಮೀಪದಲ್ಲಿರುವ ಮಲ್ಲಾಪುರ ಗ್ರಾಮದಲ್ಲಾಗಿದೆ.. ಇಲ್ಲಿ ವಾಸವಾಗಿರುವ ಚಂದ್ರರಾಮ್ ವರ್ಮಾ ಅವರ ಪುತ್ರ ಪ್ರಿನ್ಸ್ 2019 ರಲ್ಲಿ ಅಸ್ಸಾಮಿ ಹುಡುಗಿಯನ್ನು ಮದುವೆಯಾದರು.ಇದು ಪ್ರೇಮ ವಿವಾಹವಿತ್ತು, ಅವರು ಆನ್‌ಲೈನ್ ಮೂಲಕ ಪರಿಚಯ ಆಗಿ ಮದುವೆಯಾದರು. ಮದುವೆಯ ನಂತರ ಇಬ್ಬರೂ ಸಂತೋಷದ ಜೀವನವನ್ನು ನಡೆಸುತ್ತಿದ್ದರು.

   ನಂತರ ಪ್ರಿನ್ಸ್ ತನ್ನ ಹೆಂಡತಿಯೊಂದಿಗೆ ಗಾಜಿಯಾಬಾದಿನಲ್ಲಿ ವಾಸಿಸಲು ಹೋಗಿದ್ದನು. ಅಲ್ಲಿ ಆತ ಟ್ಯಾಕ್ಸಿ ಓಡಿಸುತ್ತಿದ್ದ. ಇತನ್ಮಧ್ಯೆ, ಹಣದ ಆಮಿಷಕ್ಕೊಳಗಾದ ಅಂಧ ಮಾವ ಚಂದ್ರರಾಮ್ ತನ್ನ ಸೊಸೆಯನ್ನು 80,000 ಕ್ಕೆ ಮಾರಾಟ ಮಾಡಲು ಸಂಚು ಮಾಡಿದ. ಅದಕ್ಕಾಗಿ ಒಂದು ನೆಪ ಮಾಡಿ ಅವನು ಜೂನ್ 4 ರಂದು ಮಗನ ಹೆಂಡತಿಯನ್ನು ಮನೆಗೆ ಕರೆಸಿದ ಮತ್ತು ಯೋಜನೆಯಂತ್ತೆ ರಾಮು ಗೌತಮ್ ಎಂಬವನಿಂದ ಗುಜರಾತ್ ಯುವಕರಾದ ಸಾಹಿಲ್ ಮತ್ತು ಅವರ ಕುಟುಂಬವನ್ನು ಬರಾಬಂಕಿಗೆ ಕರೆಸಿ, ನಂತರ ಮಾರಟ ಮಾಡುವ ಒಪ್ಪಂದವನ್ನು  ಮಾಡಿ ಕೊಳ್ಳಲಾಯಿತು. ಇದೀಗ ಮಾವ ಮತ್ತು ಸಂಚು ರೂಪಿದವರನ್ನು ಪೊಲೀಸರು ಬಂದಿಸಿದ್ದಾರೆ