

ಮಂಗಳೂರು ಸೆ.28: ನಗರದಲ್ಲಿ ಸೆ.25 ರಂದು ನಾಪತ್ತೆಯಾಗಿದ್ದ ಖಾಸಗಿ ಮೆಡಿಕಲ್ ಕಾಲೇಜಿನ ಡೀನ್ ಡಾ.ಅರ್ಬನ್ ಜೆ. ಅರ್ನಾಲ್ಡ್ ಡಿಸೋಜಾ ಅವರ ಸುಳಿವು ಇನ್ನೂ ಪತ್ತೆಯಾಗಿಲ್ಲ.
ಸೆ.25 ರರಾತ್ರಿ 7 ಗಂಟೆ ಸುಮಾರಿಗೆ ಡಾ ಡಿಸೋಜಾ ಅವರು ತಮ್ಮ ವೆಲೆನ್ಸಿಯಾದಲ್ಲಿನ ಅವರ ಮನೆಯಿಂದ ದ್ವಿಚಕ್ರ ವಾಹನದಲ್ಲಿ ಸಮೀಪದ ಅಂಗಡಿಗೆ ಹೋಗುವುದಾಗಿ ಪತ್ನಿಗೆ ತಿಳಿಸಿ ಮನೆಯಿಂದ ಹೊರಟಿದ್ದರು. ಆದರೆ, ರಾತ್ರಿಯಾದರೂ ಹಿಂತಿರುಗದ ಕಾರಣ ಪತ್ನಿ ಪೊಲೀಸರಿಗೆ ದೂರು ನೀಡಿದ್ದರು. ಆರಂಭದಲ್ಲಿ ಡಿಸೋಜಾ ಅವರ ಮೊಬೈಲ್ ಫೋನ್ ಸ್ವಿಜ್ ಆಫ್ ಆಗಿದ್ದು, ಬಳಿಕ ಉಳ್ಳಾಲ ಬೀಚ್ ಬಳಿ ಅವರ ಮೊಬೈಲ್ ಫೋನ್ ಸಿಗ್ನಲ್ ಅನ್ನು ಸ್ವಲ್ಪ ಸಮಯದಲ್ಲೇ ಪತ್ತೆಹಚ್ಚಿದ್ದರು. ನಂತರ
ಪೊಲೀಸರ ತಂಡ ಸ್ಥಳಕ್ಕೆ ದೌಡಾಯಿಸಿದರೂ ಪತ್ತೆಯಾಗಿರಲಿಲ್ಲ. ಡಾ ಡಿಸೋಜಾ ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಾ ಅರ್ಬನ್ ಡಿಸೋಜಾ, ಉದ್ಯಾವರ ಮೂಲದವರಾಗಿದ್ದು, ಅವರು ಮಂಗಳೂರಿನಲ್ಲಿ ಖಾಸಗಿ ಮೆಡಿಕಲ್ ಕಾಲೇಜಿನ ಡೀನ್ ಆಗಿ ಸೇವೆ ಸಲ್ಲಿಸುತಿದ್ದರು. ಅವರು ನಾಪತ್ತೆಯಾಗಿ 4 ದಿನ ಕಳೆದರೂ ಇನ್ನೂ ಅವರ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ ಆದ್ದರಿಂದ ಅವರ ಬಗ್ಗೆ ಮಾಹಿತಿ ಇರುವವರು ಮಂಗಳೂರು ದಕ್ಷಿಣ ಪೊಲೀಸ್ ಠಾಣೆ, 0824 222 0518 ಅನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.
