ಕೊಲ್ಲೂರು ಗ್ರಾಮದ ಅರಶಿನಗುಂಡಿ ಜಲಪಾತದಲ್ಲಿ ಬಿದ್ದ ಶರತ್‌ ಕುಮಾರನ  ಮೃತದೇಹ ಒಂದು ವಾರದ ಬಳಿಕ  ಪತ್ತೆ

ಕೊಲ್ಲೂರು,ಜು.30: ಸ್ನೇಹಿತರೊಂದಿಗೆ ಕಳೆದ ಭಾನುವಾರ ಅರಶಿನಗುಂಡಿ ಜಲಪಾತಕ್ಕೆ ತೆರಳಿದ್ದ ಸಂದರ್ಭ ಕಾಲುಜಾರಿ ನೀರಿನಲ್ಲಿ ಬಿದ್ದು.ಕಾಣೆಯಾಗಿದ್ದ ಭದ್ರಾವತಿಯ ಯುವಕ ಶರತ್‌ ಕುಮಾರನ [23] ಮೃತದೇಹ ಜಲಪಾತದ ಸಮೀಪದಲ್ಲಿಯೆ ಪತ್ತೆಯಾಗಿದೆ.

ಶರತ್‌ ಹಾಗೂ ಸ್ನೇಹಿತ ಗುರುರಾಜ ಜೊತೆಗೂಡಿ ಜು.23ರ ಭಾನುವಾರದಂದು ಭದ್ರಾವತಿಯಿಂದ ಕೊಲ್ಲೂರು ಗ್ರಾಮದ ಅರಶಿನಗುಂಡಿ ಜಲಪಾತ ನೋಡಲು ತೆರಳಿದ್ದರು. ಮಧ್ಯಾಹ್ನ 3-30ರ ಹೊತ್ತಿಗೆ ಜಲಪಾತ ಬಳಿ ವೀಡೀಯೋ ಮಾಡಲು ಹೇಳಿ ಬಂಡೆಯ ಮೇಲೆ ನಿಂತಿದ್ದ ಶರತ್‌ ಕಾಲು ಜಾರಿ ಬಿದ್ದಿದ್ದರು ನೀರಿನ ಸೆಳತಕ್ಕೆ ಸಿಲುಕಿ ನಾಪತ್ತೆಯಾಗಿದ್ದನು. ಕಾಲು ಜಾರಿ ಬಿಳುವ ಈ ಈ ಘಟನೆ ಸ್ನೇಹಿತನ ಮೊಬೈಲಿನಲ್ಲಿಯೂ ಸೆರೆಯಾಗಿತ್ತು.

   ಘಟನೆಯ ಮಾಹಿತಿಯನ್ನು ಸ್ನೆಹಿತ ತಿಳಿಸಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳೆದೊಂದು ವಾರದಿಂದ ಕೊಲ್ಲೂರು ಠಾಣೆಯ ಪೊಲೀಸ್‌ ತಂಡ, ಅರಣ್ಯ ಇಲಾಖೆ ಸಿಬ್ಬಂದಿಗಳು, ಉಡುಪಿಯ ಎಸ್‌ಡಿಆರ್‌ಎಫ್‌ ತಂಡ, ಕುಂದಾಪುರ ಹಾಗೂ ಬೈಂದೂರು ಅಗ್ವಿಶಾಮಕ ದಳದ ಸಿಬ್ಬಂದಿಗಳು ಹುಡುಕಾಟ.ನಡೆಸಿದ್ದರು. ಇವರೊಂದಿಗೆ ಮೃತ ಶರತ್‌ನ ಸಂಬಂಧಿ ಹಾಗೂ ಸ್ನೇಹಿತರ ಜೊತೆಗೂಡಿ ಹುಡುಕಾಟ ನಡೆಸಿದ್ದರು.

    ಶರತ್‌ನ ತಂದೆ ತಾಯಿ ಹೇಗಾದರೂ ತಮ್ಮ ಮಗನನ್ನು ಹುಡುಕಿಕೊಡಿ ಎಂದು ಸರಕಾರಕ್ಕೆ ಬೇಡಿಕೆ ಇರಿಸಿದ್ದರು. ನಿನ್ನೆಯಿಂದ ಮಳೆ ಕೊಂಚ ಕಡಿಮೆಯಾದ. ಹಿನ್ನೆಲೆಯಲ್ಲಿ ಹುಡುಕಾಟ ಚುರುಕುಗೊಳಿಸಿದ್ದು, ಶರತ್‌ ಮೃತದೇಹ ಜಲಪಾತದ ಸಮೀಪದ ಕಲ್ಲಿನ ಪೊಟರೆಯಲ್ಲಿ ಸಿಲುಕಿಕೊಂಡ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ನಡುವೆ ಸಾಹಸಿ ಚಿತ್ರದುರ್ಗದ ಜ್ಯೋತಿರಾಜ್‌ ತಂಡ, ಈಶ್ವರ್‌ ಮಲ್ಪೆ ತಂಡವೂ ನೀರಿನ ರಭಸದ ಒತ್ತಡದ ನಡುವೆಯೂ ಹುಡುಕಾಟ ನಡೆಸಿ. ಹಿಂದಿರುಗಿದ್ದರು. ಡ್ರೋನ್‌ ಮೂಲಕವೂ ಪತ್ತೆ ಕಾರ್ಯಾಚರಣೆ ನಡೆಸಲಾಗಿತ್ತು. ಕೊಲ್ಲೂರು ಠಾಣೆಯ ಪಿಎಸ್‌ಐಗಳಾದ ಜಯಶ್ರೀ ಹಾಗೂ ಸುಧಾರಾಣಿ ಅವರ ನೇತೃತ್ವದಲ್ಲಿ ಬೆಳಿಗ್ಗೆಯಿಂದ ಸಂಜೆಯ ತನಕಪೂಹುಡುಕಾಟ ನಡೆಸಲಾಗಿತ್ತು.