ವರದಿ : ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : ಕೆಳದ ಕೆಲವು ದಿನದಿಂದ ಸತತವಾಗಿ ಸುರಿದ ಭಾರಿ ಮಳೆಯಿಂದ ನಗರ ಸೇರಿದಂತೆ ಗ್ರಾಮೀಣ ಭಾಗದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು , ತೋಟದ ಬೆಳೆಗಳು ನಾಶವಾಗಿದ್ದು ಇದರಿಂದ ಸಾಕಷ್ಟು ತೊಂದರೆಗಳು ಆಗಿದ್ದು ಕೂಡಲೇ ಸರಕಾರ ಮತ್ತು ಜಿಲ್ಲಾಡಳಿತ ಇವರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಒತ್ತಾಯಿಸಿದರು . ನಗರದ ಕೆಲವು ವಾರ್ಡ್ ಗಳಿಗೆ ಶುಕ್ರವಾರ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು , ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮವಾಗಿ ಕೆಲವು ಮನೆಗಳಿಗೂ ನೀರು ನುಗ್ಗಿದ್ದು ವಾಸ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಅಂತಹ ಕುಟುಂಬಗಳಿಗೆ ತಾತ್ಕಾಲಿಕವಾಗಿ ಬೇರೆ ಜಾಗದ ವ್ಯವಸ್ಥೆ ಮಾಡಬೇಕು ಮನೆಯೊಳಗೆ ವಸ್ತುಗಳು , ಆಹಾರ ಪದಾರ್ಥಗಳು ನೀರು ಪಾಲಾಗಿದ್ದು ರಾತ್ರಿ ಸಂದರ್ಭದಲ್ಲಿ ಮಲಗಲು ಕೂಡ ಸ್ಥಳವಿಲ್ಲದೇ ತೊಂದರೆಗಳನ್ನು ಅನುಭವಿಸಬೇಕಾಯಿತು . ಮನೆಯೊಳಗಿನ ನೀರನ್ನು ಹೊರಗಡೆ ಹಾಕಲು ಜನ ಹರಸಾಹಸ ಪಟ್ಟಿದ್ದು ಮಳೆ ಅವಾಂತರದಿಂದ ಜನರು ರಾತ್ರಿಯಿಡಿ ಜಾಗರಣೆ ಮಾಡುವಂತಾಗಿದೆ ಕೂಡಲೇ ಸೂಕ್ತ ರೀತಿಯಲ್ಲಿ ವ್ಯವಸ್ಥೆ ಮಾಡಬೇಕಾಗಿದೆ ಎಂದು ಜಿಲ್ಲಾಡಳಿತ ಮತ್ತು ಸರಕಾರವನ್ನು ಒತ್ತಾಯಿಸಿದರು .
ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ದಿನಗಳ ಕಾಲ ಮಳೆ ಮುಂದುವರೆದಿದ್ದು , ವಿವಿಧ ಕಡೆಗಳ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಮುನ್ಸೂಚನೆ ಇದೆ ಅಲ್ಲದೇ ತಗ್ಗಿನಿಂದ ಕೂಡಿರುವ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಸಮಸ್ಯೆ ಅನುಭವಿಸುತ್ತಾ ಇದ್ದಾರೆ ಮಳೆಯ ಅಬ್ಬರದಿಂದ ಜನಜೀವನ ಅಸ್ತವ್ಯಸಗೊಂಡರೆ ಇನ್ನೂ ಸಾಕಷ್ಟು ಪ್ರಮಾಣದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಈ ಕೂಡಲೇ ಸಮಸ್ಯೆಗಳನ್ನು ಬಗೆಹರಿಸುವುದು ಉತ್ತಮ ಎಂದು ತಿಳಿಸಿದರು.
ಆನೇಕ ಕಷ್ಟಗಳ ನಡುವೆಯೂ ರೈತರು ಬೆಳೆದ ಬೆಳೆಗಳು ಕಟಾವು ಮಾಡುವ ಹಂತದಲ್ಲಿ ಕೈ ಸೇರುವ ಸ್ಥಿತಿಯಲ್ಲಿ ಇದ್ದವು ಆದರೆ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಸತತವಾಗಿ ಸುರಿಯುತ್ತಾ ಇರುವ ಮಳೆಯಿಂದ ಬೆಲೆಗಳು ನಾಶವಾಗಿ ಹಾನಿಯಾಗಿದ್ದಾವೆ ಇದರಿಂದ ಸಾಕಷ್ಟು ಪ್ರಮಾಣದಲ್ಲಿ ಬೆಳೆ ನಾಶವಾಗಿದ್ದು ಕೂಡಲೇ ಪರಿಹಾರ ನೀಡುವ ಮೂಲಕ ರೈತರ ಕಷ್ಟದಲ್ಲಿ ಸರಕಾರ ಮತ್ತು ಜಿಲ್ಲಾಡಳಿತ ಭಾಗಿಯಾಗುವಂತೆ ಒತ್ತಾಯಿಸಿದರು . ಜಿಲ್ಲೆಯ ಕೆಲವು ಬೆಟ್ಟದ ತಪ್ಪಲಿನಿಂದ ಕೆರೆಗೆ ಸರಾಗವಾಗಿ ನೀರು ಹರಿಯಲು ರಾಜಕಾಲುವೆಗಳನ್ನು ಹಿಂದಿನ ಕಾಲದಿಂದಲೂ ಮಾಡಿದ್ದರು ಆದರೆ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿದ್ದು ಕೆಲವು ರಾಜಕಾಲುವೆಗಳಲ್ಲಿ ಕಸ ಮತ್ತು ಗಿಡಗಳು ಬೆಳೆದಿದ್ದ ರಿಂದ ನೀರು ಸರಾಗವಾಗಿ ಹರಿಯುತ್ತಾ ಇಲ್ಲ ಇದರಿಂದ ಕೆಲವು ಪ್ರದೇಶಗಳಿಗೆ ನೀರು ನುಗ್ಗುತ್ತಾ ಇದ್ದು ಜಿಲ್ಲಾಡಳಿತ ರಾಜಕಾಲುವೆಗಳನ್ನು ಒತ್ತುವರಿ ತೆರವು ಮತ್ತು ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿದರು . ಜಿಲ್ಲೆಯಲ್ಲಿ ಕೆಲವು ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗುವುದು ಹಾನಿ ಸಂಭವಿಸುವುದು ಸಾಮಾನ್ಯವಾಗಿತ್ತು ಆದರೆ ಈ ಬಾರಿ ಮಳೆಯ ಪ್ರಮಾಣ ಹೆಚ್ಚಾಗಿದ್ದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆಯಿಂದ ಮುನ್ನೆಚ್ಚರಿಕೆ ನೀಡಿದ್ದಾರೆ ಇದರಿಂದ ರೈತರಿಗೆ ಹಾಗೂ ಮನೆ ಕಳೆದುಕೊಳ್ಳುವರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಸಿಎಂಆರ್ ಶ್ರೀನಾಥ್ ಎಂದು ಒತ್ತಾಯಿಸಿದರು .
