ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ;ತಾಲ್ಲೂಕಿನ ಹೊದಲಿ ಗ್ರಾಮ ಪಂಚಾಯಿತಿಯಾ ಅವುಲಕುಪ್ಪ ಗ್ರಾಮದ ಎ.ವಿ. ನಾರಾಯಣಸ್ವಾಮಿ ಮತ್ತು ಭಾಗ್ಯಮ್ಮ ರವರ ಕುಟುಂಬದಲ್ಲಿ ಇವರು ಸಾಕಿರುವ ನಾಟಿ ಗೂ ಮಾತೆ (ಹಸು) ಮೂರು ಗಂಡು ಕರುಗಳಿಗೆ ಜನ್ಮ ನೀಡಿ ಗ್ರಾಮಕ್ಕೆ ಸಂತಸ ಉಂಟಾಗಿದೆ.
ಅವುಲಕುಪ್ಪ ಗ್ರಾಮದ ಎ.ವಿ. ನಾರಾಯಣಸ್ವಾಮಿ ಮತ್ತು ಭಾಗ್ಯಮ್ಮ ಇವರು ಚೌಡೇಶ್ವರಿ ಅಮ್ಮನವರ ದೇವಾಲಯದ ಅರ್ಚಕರಾಗಿದ್ದು, ಜೊತೆಗೆ ಕೃಷಿಕರಾಗಿ ಪಶು ಸಂಗೋಪನೆಯಲ್ಲಿ ತೂಡಗಿದ್ದು, ಇವರ ಮನೆಯಲ್ಲಿ ಸಾಕಿಕೊಂಡಿರುವ ನಾಟಿ ಹಸು ನಾಲ್ಕನೇ ಫಲದಲ್ಲಿ ಮೂರು ಕರುಗಳಿಗೆ ಜನ್ಮ ನೀಡಿರುವುದರಿಂದ ಇವರ ಕುಟುಂಬ ಮತ್ತು ಗ್ರಾಮದಲ್ಲಿ ಸಂತಸ ಉಂಟಾಗಿ ಹಬ್ಬದ ವಾತವರಣ ನಲೆಯಾಗಿದೆ.
ಮತ್ತೊಂದು ಕಡೆ ಇವುಗಳ ಬಾವ ಚಿತ್ರಗಳು ಸಾಮಾಜೀಕ ಜಲಾತಣಗಳಲ್ಲಿ ಹೆಸರುವಾಸಿಯಾಗಿ ತಾಲ್ಲೂಕಿನಲ್ಲೆ ಹಬ್ಬರ ಪ್ರಚಾರವಾಗುತ್ತಿದೆ. ಅಲ್ಲದೆ ದಾರ್ಮಿಕ ಭಕ್ತಾಧಿಗಳು ಈ ಗೂಮಾತೆ ತ್ರಿಮೂರ್ತಿಗಳಿಗೆ ಜನ್ಮ ನೀಡಿದೆ ಇವುಗಳನ್ನು ಪೂಜಿಸಿ ಅಶೀರ್ವದಾದ ಪಡಿಯೋಣ ಎಂದು ಭಕ್ತರ ಮಾತಾಗಿದೆ. ಪಶುಪಾಲನೆ ಇಲಾಖೆಯ ವ್ಯದ್ಯ ವೆಂಕಟೇಶ್ ಗ್ರಾಮಕ್ಕೆ ಬೇಟಿ ನೀಡಿ ಹಸುವನ್ನು ಹಾರೈಸಿರುತ್ತಾರೆ.