ಭಾರತದಲ್ಲಿ ತಾಂಡವಾಡುತ್ತಿರುವ ಕೊರೊನಾ 3 ನೇ ಅಲೆ ಬಹು ಬೇಗನೆ ಶಮನವಾಗುವುದು.

JANANUDI.COM NETWORK


ನ್ಯೂದೆಹಲಿ: ದೇಶದಲ್ಲಿ ಇದೀಗ ತಾಂಡವಾಡುತ್ತಿರುವ ಮೂರನೇ ಅಲೆ ಕೊರೋನಾದ ಓಮಿಕ್ರಾನ್ ರೂಪಾಂತರ ಶೀಘ್ರ ಅಂತ್ಯವಾಗಲಿದೆ ಎಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಅದಕ್ಕೆ ಆಫ್ರಿಕಾ ಉದಾರಣೆ ನೀಡುತಿದ್ದಾರೆ. ಆಫ್ರಿಕಾ ಮಾದರಿಯಲ್ಲೇ ನಮ್ಮ ಭಾರತದಲ್ಲೂ ಸೋಲಕು ಇಳಿಮುಖವಾಗುವ ಸಂಭಂವ ಇದೆಯೆಂದು ಅಭಿಪ್ರಾಯ ಪಟ್ಟಿದ್ದಾರೆ.
ಓಮಿಕ್ರಾನ್ ಮತ್ತು ಡೆಲ್ಮಾ ಅಬ್ಬರ ಈಗ ದೇಶದಲ್ಲಿ ಹೆಚ್ಚಾಗಿದೆ. ದಕ್ಷಿಣ ಆಫಿಕಾದಲ್ಲಿ ಕೆಲವು ವಾರಗಳ ಬಳಿಕ ಇಳಿಮುಖವಾದ0ತೆ ಸೋ0ಕಿನ ಪ್ರಕರಣಗಳು ಇಲ್ಲಿಯೂ ದಿಢೀರ್ ಇಳಿಮುಖವಾಗುವ ಸಾಧ್ಯತೆ ಇದೆ ಎ0ದು ಹೇಳುತ್ತಾರೆ.
ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಓಮಿಕ್ರಾನ್ ಕಳೆದ ಡಿಸೆಂಬರ್ ಮೊದಲವಾರದಲ್ಲಿ ಉತ್ತುಂಗಕ್ಕೆ ಹೋಗಿತ್ತು. ಪ್ರತಿನಿತ್ಯ 1.27 ಲಕ್ಷ ಪ್ರಕರಣಗಳು ದಾಖಲಾಗುವ ಮೂಲಕ ಗರಿಷ್ಠ ಮಟ್ಮಕ್ಕೆ ತಲುಪಿತ್ತು. ಬಳಿಕ ಇದೀಗ ಸೋ0ಕಿನ ಪ್ರಕರಣಗಳು ಸ್ವಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಈಗ ನಿತ್ಯ 80 ಸಾವಿರದ ಆಸುಪಾಸಿನಲ್ಲಿದೆ.
ಇದೇ ರೀತಿಯಯಲ್ಲಿ ನಮ್ಮ ದೇಶದಲ್ಲೂ ಸದ್ಯ ಸೋ0ಕುಗರಿಷ್ಮ ಮಟ್ಶ ತಲುಪಿದೆ. ಗುರುವಾರ ಭಾರತದಲ್ಲಿ ಒ0ದೇ ದಿನ 2,47,417 ಪ್ರಕರಣಗಳು ದಾಖಲಾಗಿವೆ. 620 ಮಂದಿಗೆ ಓಮಿಕ್ರಾನ್ ಬ0ದಿದ್ದು ಒಟ್ಟು ಓಮಿಕ್ರಾನ್ ಸೋ0ಕಿತರ ಸ0ಖ್ಯೆ 5,500 ಮುಟ್ಟಿದೆ.
ಮುಖ್ಯವಾಗಿ ಗಮನಿಸಬೇಕಾದ ವಿಚಾರವಂದರೆ ಎರಡನೇ ಅಲೆಗೆ ಹೋಲಿಸಿದರೆ ಭಾರತದಲ್ಲಿ ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಸಂಖ್ಯೆ ಕಡಿಮೆಯಿದೆ. ಎರಡನೇ ಅಲೆಯ ವೇಳ ದೇಶಾದ್ಯ0ತ ಆಮ್ಲಜನಕದ ಸಮಸ್ಯೆಯಾಗಿಬ್ದು, ಮೂರನೇ ಅಲೆಯಲ್ಲಿ ಐಸಿಯುಗೆ ದಾಖಲಾಗುವವರ ಸಂಖ್ಯೆ ಬಹಳ ಕಡಿಮೆ ಮಟ್ಟದಲ್ಲಿರುವುದು ಸಮಾಧಾನಕರ ವಿಷಯವಾಗಿದೆ.
ಈಗಾಗಲೇ ಗರಿಷ್ಠ ಪ್ರಮಾಣದಲ್ಲಿರುವ ಸೋಂಕು ಆಫ್ರಿಕಾ ರೀತಿಯಲ್ಲೇ ಮುಂದಿನ ವಾರದಿ0ದ ಇಳಿಕೆಯಾಗಬಹುದು ಎ0ದು ತಜ್ಞ ವೈದ್ಯರು ತಿಳಿಸಿದ್ದು, ಇದು ಎμÉ್ಟೀ ಹರಡಿದರೂ ಉಸಿರಾಟದ ತೊ0ದರೆ ಬಾಧಿಸುವುದಿಲ್ಲ ಎಂದು ಕೂಡ ಹೇಳಲಾಗುತಿದೆ
.