ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ ಜನವರಿ 10 ; ಕೋಲಾರ ಜಿಲ್ಲಾ ಅತಿಥಿ ಉಪನ್ಯಾಸಕರ ಪ್ರತಿಭಟನೆ 31 ನೆಯ ದಿನ ಮುಂದುವರೆದರೂ ಇದುವರೆಗೂ ಸರ್ಕಾರ ಹಾಗೂ ಸಂಬಂಧಪಟ್ಟ ಸಚಿವರು ಹಾಗೂ ಯಾವುದೇ ಪ್ರತಿನಿಧಿಗಳು ಚರ್ಚೆಗೆ ಬಾರದ ಕಾರಣ ಇದೊಂದು ದುಃಖ ಕರ ಸಂಗತಿ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ ನಾರಾಯಣಪ್ಪ ಅಭಿಪ್ರಾಯಪಟ್ಟರು
ಅವರು ನಗರದಲ್ಲಿ ನಿರಂತರವಾಗಿ ಮೂವತ್ತೊಂದನೆಯ ದಿನ ಜಿಲ್ಲೆಯ ಅತಿಥಿ ಉಪನ್ಯಾಸಕರು ಮಾಡುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತಾನಾಡಿದರು.
ನಿರಂತರವಾಗಿ ಅತಿಥಿ ಉಪನ್ಯಾಸಕರು ಶಾಂತಿಯುತ ಹೋರಾಟವನ್ನು ಮಾಡುತ್ತಿದ್ದು ಸರ್ಕಾರ ಇವರ ಬಗ್ಗೆ ಬೇಜವಾಬ್ದಾರಿ ತೋರಿಸುತ್ತಿರುವುದು ನಾಚಿಕೆ ಗೇಡಿನ ಸಂಗತಿ. ಪದವಿ ವಿದ್ಯಾರ್ಥಿಗಳಿಗೆ ಜ್ಞಾನ ಶಾಖೆಗಳನ್ನು ವಿಸ್ತರಿಸುವ ಅತಿಥಿ ಉಪನ್ಯಾಸಕರು ತಮ್ಮ ಬದುಕಿನ ಮಾರ್ಗವೇ ಮುಚ್ಚಿರುವ ಕಾರಣ ಸರ್ಕಾರ ಅತಿಥಿ ಉಪನ್ಯಾಸಕರಿಗೆ ಗೌರವ ತೋರಿಸಿ ಅವರಿಗೆ ಸರಿಯಾದ ಸೇವಾ ಭದ್ರತೆಯನ್ನು ಮತ್ತು ಸೇವಾ ವಿಲೀನತೆ ಮಾಡುವ ಮೂಲಕ ಆಡಳಿತ ಸರ್ಕಾರ ಜೀವ ರಕ್ಷಕಾ ವಾಗಿರಬೇಕಿತ್ತು.
ಮಾನಸಿಕವಾಗಿ ವಿದ್ವತ್ ಪ್ರಪಂಚದೊಳಗೆ ತಾತ್ವಿಕ ಚಿಂತನೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಹೊಸ ಬೆಳಕನ್ನು ತೋರಿಸುವ ನಿಟ್ಟಿನಲ್ಲಿ ಅತಿಥಿ ಉಪನ್ಯಾಸಕರ ಶ್ರಮ ಶ್ಲಾಘನೀಯವಾದುದು. ಆದರೆ ಇಂದು ಸರ್ಕಾರ ಮಾನ್ಯ ಮುಖ್ಯಮಂತ್ರಿಗಳು ಮಾನವೀಯತೆ ಮರೆಯಬೇಕಾಗಿದ್ದು ಬಹಳ ಜರೂರಿದೆ ಎಂದು ಹೇಳಿದರು.
ಕೋಲಾರ ಜಿಲ್ಲೆಯ ಅತಿಥಿ ಉಪನ್ಯಾಸಕ ಸಂಘದ ಅಧ್ಯಕ್ಷ ನೂರ್ ಅಹಮದ್ ಮಾತಾನಾಡಿ ನಮ್ಮ ಸಂಘದ ವತಿಯಿಂದ ಮೂವತ್ತು ದಿನಗಳ ನಿರಂತರ ಪ್ರತಿಭಟನೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಅತಿಥಿ ಉಪನ್ಯಾಸಕರಿಗೂ ಕೃತಜ್ಞತೆ ಸಲ್ಲಿಸುವ ಮೂಲಕ ಶಿಸ್ತು ಸಂಯಮ ಸ್ವಾಭಿಮಾನ ಮತ್ತು ಹೋರಾಟದ ಕೆಚ್ಚೆದೆಯ ತೋರಿಸಿದ ಪ್ರಮಾಣಿಕ ಅತಿಥಿ ಉಪನ್ಯಾಸಕರಿ ಜಯ ಲಭಿಸುವುದು ನಿಶ್ಚಿತವಾಗಿದೆ.
ಇದೇ ರೀತಿ ಸರ್ಕಾರ ರಾಜ್ಯದ 14568 ಜನ ಅತಿಥಿ ಉಪನ್ಯಾಸಕರಿಗೂ ಸಿಹಿ ಸುದ್ದಿಯನ್ನು ನೀಡುವ ತನಕ ಪ್ರಾಮಾಣಿಕತೆ ಬದ್ಧತೆ ಮತ್ತು ಮಾನವೀಯತೆ ತೋರಿಸುವ ತನಕ ನಿರಂತರ ಸರಣಿ ಪ್ರತಿಭಟನೆಯನ್ನು ಮಾಡುತ್ತಿರುತ್ತೇವೆ..
ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ನೂರ್ ಅಹಮದ್, ಉಪಾಧ್ಯಕ್ಷ ಕಾವೇರಪ್ಪ, ವೆಂಕಟೇಶ್ ಬಾಬು,, ಡಾ. ಶರಣಪ್ಪ ಗಬ್ಬೂರು, ಕಾರ್ಯದರ್ಶಿ ಮತ್ತು ಪತ್ರಿಕಾ ಸಲಹೆಗಾರ ಡಾ. ವಿ ಬಿ ಶಿವಣ್ಣ ಪ್ರಧಾನ ಕಾರ್ಯದರ್ಶಿ ಶಿವ, ಸೋಮಶೇಖರ್, ಶ್ರೀನಿವಾಸ್, ತ್ಯಾಗರಾಜ, ಚೇತನ, ಸುಮಿತ್ರಾ, ಪುμÁ್ಪ, ರವಿ ಎಸ್, ಶೋಭಾ, ರಾಮಾಂಜಿನಯ ಲಕ್ಷ್ಮೀದೇವಿ, ಕುಸುಮ, ರಾಜೇಶ್ವರಿ, ಕಾವ್ಯ, ಮಾಲತಿ, ಲಾವಣ್ಯ, ಮಮತಾ, ಸರಿತಾ, ಕುಸುಮ, ಜಲಜ, ಶಿಲ್ಪ, ಕವಿತಾ, ಗೌರಿ, ಡಾ. ರವೀಂದ್ರ, ಸಂದೀಪ್, ಪ್ರದೀಪ್, ಪ್ರಕಾಶ್, ಕಿಶೋರ್, ಬಾಲಾಜಿ, ರಮಾನಂದ, ಹರೀಶ್, ನಾಗರಾಜ್, ಚಾಣಕ್ಯ, ಅಶೋಕ್, ಶಂಕರ್, ನಾಗೇಶ್, ವೆಂಕಟೇಶ್ ಬಾಬು, ಸತೀಶ್, ಯಲ್ಲಪ್ಪ, ಮಂಜುಳ, ಮುನಿವೆಂಕಟಸ್ವಾಮಿ, ರಮೇಶ್, ಕಾರ್ಯದರ್ಶಿ ಹಾಗೂ ಪತ್ರಿಕಾ ಸಲಹೆಗಾರ ಡಾ. ವಿ.ಬಿ ಶಿವಣ್ಣ, ಗೌರಿಪೇಟೆಯ ಸಾಮಾಜಿಕ ಕಾರ್ಯಕರ್ತ ಕೆ.ಎನ್ ರವೀಂದ್ರನಾಥ್ ಇನ್ನೂ ಮುಂತಾದ ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು.