ಶ್ರೀನಿವಾಸಪುರ : ದೇಶದಲ್ಲಿನ ಯಾವುದೇ ನಾಗರೀಕರು ಊಟ, ವಸತಿ ಇಲ್ಲದೆ, ಮಾತನಾಡಲು ಸ್ವಾತಂತ್ರವಿಲ್ಲದೆ ಇರುಬಾರದು ಎಲ್ಲರಿಗೂ ಹಕ್ಕು ಮತ್ತು ಕರ್ತವ್ಯಗಳು ಇರಬೇಕು ಎನ್ನುವ ದೃಷ್ಟಿಯಲ್ಲಿ ಸಂವಿಧಾನವನ್ನು ರಚನೆ ಮಾಡಲಾಗಿದೆ. ವಿದ್ಯಾರ್ಥಿಗಳು ಹಾಗೂ ದೇಶದಲ್ಲಿನ ಪ್ರತಿಯೊಬ್ಬರು ಸಹ ಸಂವಿಧಾನ ಬಗ್ಗೆ ಅರಿತುಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ಎಂ.ಶ್ರೀನಿವಾಸನ್ ಹೇಳಿದರು.
ತಾಲೂಕಿನ ದಳಸನೂರು ಗ್ರಾ.ಪಂ ಸಮೀಪದ ಶನಿವಾರ ಜಿಲ್ಲಾ ಪಂಚಾಯಿತಿ ಹಾಗು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಂವಿಧಾನದ ಹಕ್ಕು ಮತ್ತು ಕರ್ತವ್ಯಗಳಿಗೆ ಯಾವುದೇ ಜಾತಿ , ಧರ್ಮಮ ವರ್ಗ, ಬೇದ ಇಲ್ಲ. ಎಲ್ಲಾ ಜಾತಿ ಮತ್ತು ಧರ್ಮಗಳು ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ ಬೇರೆ ಕೆಲ ದೇಶಗಳಲ್ಲಿ ಒಂದು ಒಂದು ಧರ್ಮವರು ವಾಸಮಾಡುತ್ತಾರೆ ಅಲ್ಲಿ ಜನಸಂಖ್ಯಾ ಆದಾರದ ಮೇಲೆ ಕಾನೂನು ಕಟ್ಟಲೆಗಳು ಕಾರ್ಯನಿರ್ವಹಿಸುತ್ತದೆ . ನಮ್ಮ ದೇಶದಲ್ಲಿ ಎಲ್ಲಾ ಜಾತಿ, ಧರ್ಮಗಗಳು ಇದ್ದು, ಎಲ್ಲಾ ಜಾತಿ , ದರ್ಮಗಳಿಗೂ ಒಂದೇ ಸಂವಿಧಾನ ಅನ್ವಿಯಿಸುತ್ತದೆ.
75ವರ್ಷಗಳ ಹಿಂದೆ ರಚನೆಯಾದ ಸಂವಿಧಾನವು ಇಂದು ಪ್ರಜೆಗಳಿಗೊಸ್ಕರ, ಪ್ರಜೆಗಳಿಗಾಗಿ ರಚನೆಯಾದ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ. ಸಂವಿಧಾನದ ಮೂರು ಅಂಗಗಳ ಅಡಿಯಲ್ಲಿ ಪ್ರತಿಯೊಬ್ಬರು ನಡೆಯಬೇಕು. ದೇಶದಲ್ಲಿನ ಪ್ರತಿಯೊಂದು ಕಾರ್ಯವು ಸಂವಿಧಾನದ ಅಡಿಯಲ್ಲಿಯೇ ನಡೆಯಬೇಕು ಎಂದು ಸಲಹೆ ನೀಡಿದರು.
ಇಒ ಎಸ್.ಶಿವಕುಮಾರಿ ಮಾತನಾಡಿ ಹಿಂದುಗಳಿಗೆ ಭಗವದ್ಗೀತೆ, ರಾಮಾಯಾಣ, ಮಹಭಾರತ , ಮುಸ್ಲೀಂರಿಗೆ ಖುರಾನ್, ಕ್ರಿಶ್ಚಿನ್ನರಿಗೆ ಬೈಬಲ್ ಮಾಹಾಗ್ರಂಥಗಳು ಆದರೆ ಎಲ್ಲಾ ಜನಾಂಗದವರಿಗೂ ಸಂವಿಧಾನವೇ ಮಹಾಗ್ರಂಥ. ಸಂವಿಧಾನ ಮಹಾಗ್ರಂಥವನ್ನು ನಾವೆಲ್ಲೂರು ಓದಿ, ಅದರಲ್ಲಿನ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿತುಕೊಳ್ಳಬೇಕು ಎಂದರು.
ಸಂವಿಧಾನವು ಕೇವಲ ಒಂದು ಜನಾಂಗಕ್ಕೆ ಸೀಮಿತ ಎನ್ನುವ ತಪ್ಪು ಕಲ್ಪನೆ ಬಿಡಬೇಕು .ನಮ್ಮ ದೇಶವು ಮುನ್ನೆಡಯಬೇಕಾದರೆ ಸಂವಿಧಾನವು ಮುಖ್ಯ . ಸಂವಿಧಾನದ ಅಡಿಯಲ್ಲಿ ನಾವೆಲ್ಲರೂ ಕಾರ್ಯನಿರ್ವಹಿಸಿದಾಗ ದೇಶವನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗುತ್ತದೆ ಎಂದರು.
ಗ್ರಾ.ಪಂ ಉಪಾಧ್ಯಕ್ಷೆ ಉಮಾದೇವಿ ಮಾತನಾಡಿ ಸಂವಿಧಾನವು ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ಕೊಟ್ಟಿದೆ. ಈ ಒಂದು ದೃಷ್ಟಿಯಿಂದ ಸಂವಿಧಾನದಲ್ಲಿನ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಓದಿಕೊಂಡು ಮಹಿಳೆಯರು ಜಾಗರೂಕರಾಗಬೇಕು ಎಂದರು.
ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್, ದಳಸನೂರು ಗ್ರಾ.ಪಂ ಅಧ್ಯಕ್ಷ ವೈ.ಎಂ. ಶ್ರೀನಿವಾಸ್, ಪಿಡಿಒ ಚಿನ್ನಪ್ಪ, ಗ್ರಾ.ಪಂ ಸದಸ್ಯರಾದ ಪಟೇಲ್, ಜಗದೀಶ್, ಗಂಗುಲಮ್ಮ, ಆರ್ಐ ಮುನಿರೆಡ್ಡಿ, ಮುಖ್ಯ ಶಿಕ್ಷಕಿ ದಿವ್ಯ ಶಿಕ್ಷಕ ಆನಂದ್, ಸಿಆರ್ಪಿ ಚನ್ನಪ್ಪ, ಮೇಲ್ವಿಚಾರಕ ಬೈರಾರೆಡ್ಡಿ, ಎಸ್ಡಿಎಂಸಿ ಅಧ್ಯಕ್ಷೆ ಆಯೀಷಾಬಾನು, ಮಾಸ್ತೇನಹಳ್ಳಿಯ ಪ್ರೌಡಶಾಲಾವರಣದಲ್ಲಿ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮವು ನಡೆಯಿತು. ಗ್ರಾ.ಪಂ.ಅಧ್ಯಕ್ಷ ಮಮತ ನಾರಾಯಣಸ್ವಾಮಿ, ಉಪಾಧ್ಯಕ್ಷೆ ಲಕ್ಷ್ಮಿಕೀರ್ತಿನಾಗೇಶ್, ಪಿಡಿಒ ಚಿನ್ನಪ್ಪ, ಕಾರ್ಯದರ್ಶಿ, ಶಂಕರಪ್ಪ, ಮಾಜಿ ಅಧ್ಯಕ್ಷ ಶಂಕರಪ್ಪ,
ಚಲ್ದಿಗಾನಹಳ್ಳಿ ಪ್ರಾಥಮಿಕ ಶಾಲಾವರಣದಲ್ಲಿನ ಬೈಲುರಂಗಮಂದಿರ ಗ್ರಾ.ಪಂ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷೆ ನಾಗರತ್ನಮ್ಮ, ಸದಸ್ಯ ಆನಂತ್, ಲಕ್ಷ್ಮಣರೆಡ್ಡಿ, ಪಿಡಿಒ ಜಗದೀಶ್,ಕಾರ್ಯದರ್ಶಿ ಅಮರನಾರಾಯಣ, ಮುಖಂಡರಾದ ರಾಮಾಂಜಮ್ಮ, ಮುನೆವೆಂಕಟಪ್ಪ, ಈರಪ್ಪ, ಸುರೇಶ್ನಾಯಕ್,ರಾಮಮೂರ್ತಿ, ಗೋಪಾಲರೆಡ್ಡಿ, ಶಿಕ್ಷಕರಾದ ಶಿವಮೂರ್ತಿ, ಗೋವಿಂದರೆಡ್ಡಿ ಇದ್ದರು.