REPORT / PHOTOS : JOHNSON MENEZES EDITOR : BERNARD DCOSTA
ಕುಂದಾಪುರಃ ತಲ್ಲೂರು, ಸಂತ ಫ್ರಾನ್ಸಿಸ್ ಆಸ್ಟಿಸಿ ಇಗರ್ಜಿಯಲ್ಲಿ ಡಿಸೆಂಬರ್ 8ರಂದು ಇಗರ್ಜಿಯ ತೆರಾಲಿ ಹಬ್ಬದ ಪೂರ್ವಭಾವಿಯಾಗಿ ಭ್ರಾತೃತ್ವ ಬಾಂಧವ್ಯ ದಿನದ (ಕೊಂಪ್ರಿ ಆಯ್ತಾರ್ ) ಪ್ರಯುಕ್ತ “ಪವಿತ್ರ ಬಲಿದಾನ, ಪರಮ ಪ್ರಸಾದದ ಆರಾಧನೆ ಮತ್ತು ಮೆರವಣಿಗೆ ” ಬಹಳ ವಿಜೃಂಭಣೆಯಿಂದ ನಡೆಯಿತು.
ಪ್ರಧಾನ ಗುರುಗಳಾಗಿ ಬೈಂದೂರು ಹೊಲಿ ಕ್ರಾಸ್ ಇಗರ್ಜಿಯ ಧರ್ಮಗುರುಗಳಾದ ವಂದನೀಯ ಫಾ.ವಿನ್ಸೆಂಟ್ ಕುವೆಲ್ಲೊ
ಧಾರ್ಮಿಕ ವಿಧಿಯನ್ನು ನಡೆಸಿಕೊಟ್ಟು ‘ಒಂದು ಕುಟುಂಬ ಯಾವಾಗ ಜೊತೆ ಜೊತೆಯಾಗಿ ಪ್ರಾರ್ಥನೆ ಮಾಡುವುದೋ, ಯಾವಾಗ ಜೊತೆಯಾಗಿ ಭೋಜನ ಮಾಡುವುದೋ ಆ ಕುಟುಂಬ ಜೊತೆಯಾಗಿ ಬಾಳುವುದು.ನಮ್ಮ ಕುಟುಂಬದಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೆ ಅದನ್ನು
ಸರಿಪಡಿಸಿಕೊಂಡು, ನಮ್ಮ ಮನಸ್ಸನ್ನು ಶುದ್ಧೀಕರಿಸಿ ,ಜೀವನ ಬದಲಾಯಿಸಿ, ಉತ್ತಮ ಭಾಂದವ್ಯದೊಂದಿಗೆ ಬಾಳಿ ದೇವರ ಸನಿಹ ಬರಲು ಪ್ರತಿಯೊಬ್ಬರು ಪ್ರಯತ್ನಿಸಬೇಕು’ ಎಂದು ಅವರು ಸಂದೇಶ ನೀಡಿದರು.
ಇದೇ ಸಂದರ್ಭದಲ್ಲಿ,ಧರ್ಮಗುರುಗಳು,ಅಪಾರ ಭಕ್ತಾದಿಗಳೊಂದಿಗೆ ಭಕ್ತಿ ಭಾವದಿಂದ ಪರಮ ಪ್ರಸಾದದ ಪುರ ಮೆರವಣಿಗೆ ನಡೆಸಿ
ಪರಮ ಪ್ರಸಾದದ ಆಶೀರ್ವಾದ ನೀಡಿದರು. ಪಾಲನಾ ಮಂಡಳಿಯ ಸದಸ್ಯರು ಹಾಗೂ ಕ್ರೈಸ್ತ ಶಿಕ್ಷಣ ಶಿಕ್ಷಕರು ಮೆರವಣಿಗೆಯಲ್ಲಿ ಸಹಕರಿಸಿದರು.
ಧಾರ್ಮಿಕ ವಿಧಿ ವಿಧಾನಗಳು ಇಗರ್ಜಿಯ ಧರ್ಮ ಗುರುಗಳಾದ ವಂದನೀಯ ಫಾ.ಎಡ್ವಿನ್ ಡಿಸೋಜರ ಯಲ್ಲಿ
ನಡೆಯಿತು. ಅವರು ಧ್ರರ್ಮಗುರುಗಳಿಗೆ, ದಾನಿಗಳಿಗೆ ಮೇಣದ ಬತ್ತಿ ನೀಡಿ ಗೌರವಿಸಿದರು ಹಾಗೂ ಪ್ರಾರ್ಥನಾ ವಿಧಿಯಲ್ಲಿ.
ಸಹಕರಿಸಿದ ಸರ್ವರಿಗೂ ವಂದಿಸಿದರು.