ಕುಂದಾಪುರ,ನ.25: ಉಡುಪಿ ಧರ್ಮ ಪ್ರಾಂತ್ಯದಲ್ಲೆ ಅಂತ್ಯಂತ ಪುರಾತನವಾದ ಕುಂದಾಪುರದ “ಪವಿತ್ರ ರೋಜರಿ ಮಾತಾ” ಇಗರ್ಜಿಯಲ್ಲಿ ಕ್ರಿಸ್ತ ರಾಜನ ಹಬ್ಬದಂದು, ತೆರಾಲಿ ಹಬ್ಬದ ಅಚರಣೆಯ ಪ್ರಯುಕ್ತ ಪೂರ್ವಭಾವಿಯಾಗಿ ನೆಡೆಯುವ “ಕೊಂಪ್ರಿ ಆಯ್ತಾರ್” ಭ್ರಾತೃತ್ವ ಬಾಂಧವ್ಯ ದಿನವನ್ನು “ಪವಿತ್ರ ಬಲಿದಾನ ಮತ್ತು ಪರಮ ಪ್ರಸಾದದ ಆರಾಧನೆ ನ.24 ರಂದು ನೆಡೆಯಿತು.ಪವಿತ್ರ ರೋಜರಿ ಮಾತಾ ದೇವಾಲಯಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಿ, ಪರಮ ಪ್ರಸಾದದ ಆರಾಧನೆ ನೆಡೆಯಿತು.
ತರುವಾಯ ಅಪಾರ ಭಕ್ತಾದಿ ಜನ ಮತ್ತು ಅನೇಕ ಧರ್ಮ ಭಗಿನಿಯರೊಡನೆ ಬೆಳೆಗಿಸಿದ ಬಣ್ಣದ ಮೇಣದ ಬತ್ತಿಗಳನ್ನು ಹಿಡಿದುಕೊಂಡು ಭಕ್ತಿ ಗಾಯನ, ಸಂಗೀತ, ಬ್ಯಾಂಡು, ಬಣ್ಣ ಬಣ್ಣದ ಕೊಡೆಗಳ ಜೊತೆ, ಗಾಯನ ಮಂಡಳಿಯೊಡನೆ ವಿದ್ಯುತ್ ದೀಪಗಳ ಅಲಕ್ರಂತದೊಂದಿಗೆ ಪರಮ ಪ್ರಸಾದದ ಪುರ ಮೆರವಣಿಗೆಯನ್ನು ವೈಭವದ ಜೊತೆ ಭಕ್ತಿ ಮತ್ತು ಶಿಸ್ತಿನಿಂದ ನೆಡೆಸಲಾಯಿತು.
ನಂತರ ಪುನಹ ಚರ್ಚಿಗೆ ಆಗಮಿಸಿ ಪರಮಪ್ರಸಾದದ ಆಶಿರ್ವಾದವನ್ನು ನೀಡಲಾಯಿತು ಈ ಧಾರ್ಮಿಕ ಆಚರಣೆಯನ್ನು ಬೈಂದೂರು ಚರ್ಚಿನ ಸಹಾಯಕ ಧರ್ಮಗುರು ವಂ।ಜೊಸ್ವಿನ್ ಪಿರೇರಾ ನೆಡ್ಸಿಕೊಟ್ಟು ‘ಪ್ರಪಂಚದಲ್ಲಿ ಅನೇಕ ರಾಜರು ಇದ್ದಿದ್ದರು, ಅವರೆಲ್ಲಾ ಅಳಿದರು, ಅವರ ಆಧಿಪತ್ಯವೂ ಅಳಿದು ಹೋಗಿದೆ, ಆದರೆ ನಮಗೆ ಮತ್ತೊಬ್ಬ ರಾಜನಿದ್ದಾನೆ, ಅವನು ಈಗ ನಮ್ಮ ಕಣ್ಣಿಗೆ ಕಾಣುವುದಿಲ್ಲ, ಆದರೆ ಅವನ ಆಧಿಪತ್ಯಕ್ಕೆ ಕೊನೆಯಿಲ್ಲ, ಆತ ಈ ಲೋಕದ ರಾಜನಲ್ಲ, ಸ್ವರ್ಗಲೋಕದ ರಾಜನಾಗಿದ್ದಾನೆ. ಆತನ ಜೊತೆ ಜೀವಿಸಲು ನಾವು ಸತ್ಯ ನೀತಿ ಮಾರ್ಗದಲ್ಲಿ ನಡೆಯಬೇಕು, ದಯೆ, ಪ್ರೀತಿ, ಕ್ಷಮೆ ಇಂತಹ ಗುಣಗಳಿಂದ ಜೀವಿಸಬೇಕು” ಎಂದು ಸಂದೇಶ ಆಶಿರ್ವಾದವನ್ನು ನೀಡಿದರು.
ಈ ಧಾರ್ಮಿಕ ವಿಧಿಯಲ್ಲಿ ಕುಂದಾಪುರ ರೋಜರಿ ಮಾತಾ ಇಗರ್ಜಿಯ ಧರ್ಮಗುರು ಅ|ವಂ।ಪೌಲ್ ರೇಗೊ ಮಾರ್ಗದರ್ಶನದಲ್ಲಿ ನಡೆದಿದ್ದು ಅವರು ಎಲ್ಲರನ್ನು ವಂದಿಸಿದರು. ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಅಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ಧರ್ಮಭಗಿನಿಯರು, ವಾಳೆಯ ಗುರಿಕಾರರು ಪಾಲನ ಮಂಡಳಿ ಸದಸ್ಯರು, ಇಗರ್ಜಿಯ ಹಲವು ಸಂಘ ಸಂಸ್ಥೆಯ ಪದಾಧಿಕಾರಿಗಳು ಸದಸ್ಯರು ಹಾಗೂ ಸಹಸ್ರಾರು ಭಕ್ತರು ಪಾಲ್ಗೊಂಡರು.