ಗಂಗೊಳ್ಳಿ ಡಿ.1: ಗಂಗೊಳ್ಳಿ ಕೊಸೆಸಾಂವ್ ಮಾತಾ ಇಗರ್ಜಿಯಲ್ಲಿ ತೆರಾಲಿ ಹಬ್ಬದ ಅಚರಣೆಯ ಪ್ರಯುಕ್ತ ಪೂರ್ವಭಾವಿಯಾಗಿ ನೆಡೆಯುವ “ಕೊಂಪ್ರಿ ಆಯ್ತಾರ್” ಭ್ರಾತೃತ್ವ ಬಾಂಧವ್ಯ ದಿನದ ಪ್ರಯುಕ್ತ “ಪವಿತ್ರ ಬಲಿದಾನ ಮತ್ತು ಪರಮ ಪ್ರಸಾದದ ಆರಾಧನೆ ಡಿ.1 ರಂದು ನೆಡೆಯಿತು.
ತರುವಾಯ ಅಪಾರ ಭಕ್ತಾದಿ ಜನ ಮತ್ತು ಅನೇಕ ಧರ್ಮ ಭಗಿನಿಯರೊಡನೆ ಭಕ್ತಿ ಗಾಯನ, ಸಂಗೀತ, ಬ್ಯಾಂಡಿನೊಂದಿಗೆ ಪರಮ ಪ್ರಸಾದದ ಪುರ ಮೆರವಣಿಗೆಯನ್ನು ಭಕ್ತಿ ನೆಡೆಸಲಾಯಿತು. ನಂತರ ಪುನಹ ಚರ್ಚಿಗೆ ಆಗಮಿಸಿ ಪರಮಪ್ರಸಾದದ ಆಶಿರ್ವಾದವನ್ನು ನೀಡಲಾಯಿತು. ಈ ಧಾರ್ಮಿಕ ಆಚರಣೆಯನ್ನು ಕಟ್ಕೆರೆ ಬಾಲ ಯೇಸುವಿನ ಆಶ್ರಮದ ಧರ್ಮಗುರು ವಂ।ಜೊಸ್ವಿ ಡಿಸೋಜ ಇವರ ನೇತ್ರದ್ವದಲ್ಲಿ ನಡೆಯಿತು. ‘ಮೇರಿ ಮಾತೆ ದೇವರ ಇಚ್ಚೆಯಂತೆ ನೆಡದುಕೊಂಡವಳು, ನಾವು ದೇವರ ವಾಕ್ಯಗಳನು ಕೇಳಿ ಪರಿವರ್ತನೆಯಾಗ ಬೇಕು, ನಾವು ಅದೇ ಕೊಳಚೆಯಲ್ಲಿ ಬಿದ್ದಿರಬಾರದು ” ಎಂದು ಅವರು ಸಂದೇಶ ನೀಡಿ ಪರಮ ಪ್ರಸಾದದ ಆಶಿರ್ವಾದವನ್ನು ನೀಡಿದರು.
ಈ ಧಾರ್ಮಿಕ ವಿಧಿಯಲ್ಲಿ ಗಂಗೊಳ್ಳಿ ಇಗರ್ಜಿಯ ಧರ್ಮಗುರು ವಂ।ಪೌಲ್ ತೊಮಸ್ ರೋಶನ್ ಡಿಸೋಜಾ ಇವರ ಮಾರ್ಗದರ್ಶನದಲ್ಲಿ ನಡೆದಿದ್ದು ಅವರು ಎಲ್ಲರನ್ನು ವಂದಿಸಿದರು. ಗಂಗೊಳ್ಳಿಯವರೆ ಆದ ವಂ।ವಿಸನ್ಸೆಂಟ್ ಡಿಸೋಜಾ, ಸೆವಾದರ್ಶಿ ಪ್ರೀತೆಶ್, ಹಬ್ಬದ ಪ್ರಾಯೋಜಕರಾದ ರೋಹನ್ ಲೋಬೊ, ಜೆಸ್ವಿನ್ ಲೋಬೊ ಮತ್ತು ಜೊನ್ಸನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಹಬ್ಬದ ಪ್ರಾಯೋಜಕರಿಂದ ಭಕ್ತಾಧಿಗಳಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಪಾಲನ ಮಂಡಳಿ ಉಪಾಧ್ಯಕ್ಷ, ಕಾರ್ಯದರ್ಶಿ, ಆಯೋಗಗಳ ಸಂಚಾಲಕಿ ಧರ್ಮಭಗಿನಿಯರು, ವಾಳೆಯ ಗುರಿಕಾರರು ಪಾಲನ ಮಂಡಳಿ ಸದಸ್ಯರು, ಇಗರ್ಜಿಯ ಹಲವು ಸಂಘ ಸಂಸ್ಥೆಯ ಪದಾಧಿಕಾರಿಗಳು ಸದಸ್ಯರು ಹಾಗೂ ಸಹಸ್ರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡರು.