ನಡೆಯಬೇಕಾಗಿದ್ದ ವಾಲ್ಮೀಕಿ ಜಯಂತಿ ಪೂರ್ವ ಬಾವಿ ಸಭೆಯನ್ನು, ಸಮುದಾಯದ ಮುಖಂಡರು ಬಹಿಷ್ಕರಿಸಿ ಮನವಿ ಪತ್ರ ಸಲ್ಲಿಕೆ

ಶ್ರೀನಿವಾಸಪುರ : ಸೋಮವಾರ ತಹಶೀಲ್ದಾರ್ ನೇತೃತ್ವದಲ್ಲಿ ನೌಕರರ ಭವನದಲ್ಲಿ ನಡೆಯಬೇಕಾಗಿದ್ದು, ವಾಲ್ಮೀಕಿ ಜಯಂತಿ ಪೂರ್ವ ಬಾವಿ ಸಭೆಯನ್ನು, ಸಮುದಾಯದ ಮುಖಂಡರು ಬಹಿಷ್ಕರಿಸಿ, ತಾಲೂಕು ಕಚೇರಿಯ ಮುಂಬಾಗದಲ್ಲಿ ಸರ್ಕಾರಕ್ಕೆ ಬೇಡಿಕೆಗಳ ಮನವಿ ಪತ್ರವನ್ನು ಶಿರಸ್ತೆದಾರ್ ಮನೋಹರ್ ಮಾನೆರವರಿಗೆ ಸಲ್ಲಿಸಿದರು.
ವಾಲ್ಮೀಕಿ ಸಂಘದ ತಾಲೂಕು ಅಧ್ಯಕ್ಷ ಆಂಜನೇಯಪ್ಪ ಮಾತನಾಡಿ ನಮ್ಮ ಸಮುದಾಯದ ಸ್ವಾಮಿಗಳಾದ ಪ್ರಸನ್ನಾನಂದ ಸ್ವಾಮಿಜಿಗಳ ನೇತೃತ್ವದಲ್ಲಿ ಬೆಂಗಳೂರಿನ ಪ್ರೀಡಂಪಾರ್ಕ್‍ನಲ್ಲಿ ಮೀಸಲಾತಿಗಾಗಿ ಹಲವು ದಿನಗಳಿಂದ ಸತ್ಯಾಗ್ರಹ ಮಾಡುತ್ತಿದ್ದಾರೆ. ಸರ್ಕಾರ ಇದುವರೆಗೂ ಸ್ಪಂದನೆ ಮಾಡಿಲ್ಲ. 9 ನೇ ತಾರೀಖು ಒಳಗೆ, ಮೀಸಲಾತಿ ಜಾರಿಮಾಡಿದಿದ್ದಲ್ಲಿ ನಾವು ಜಯಂತಿ ಬಹಿಷ್ಕಾರ ಮಾಡುತ್ತೇವೆ.ನೀವು ಸರ್ಕಾರದ ನಿಯಮಗಳಂತೆ, ಆಯಚರಣೆ ಮಾಡಿಕೊಳ್ಳಿ ಎಂದರು.
ಸರ್ಕಾರದಿಂದ ಮೀಸಲಾತಿ ಜಾರಿಮಾಡಿದ್ದಲ್ಲಿ ನಾವು ನಮ್ಮ ಸಂಘದ ವತಿಯಿಂದ ಜಯಂತಿಯನ್ನು ಅದ್ದೂರಿಯಾಗಿ ಮಾಡಲಾಗುವುದು. ನಮ್ಮ ಉದ್ದೇಶ ಎಸ್‍ಟಿ ಸಮುದಾಯಕ್ಕೆ 7.5% ಮೀಸಲಾತಿ, ಎಸ್‍ಸಿ ಜನಾಂಗಕ್ಕೆ 18% ಹೆಚ್ಚಳ ಆಗುವವರೆಗೂ ನಮ್ಮ ರಾಜ್ಯದ ವಾಲ್ಮೀಕಿ ಸಮುದಾಯ ಸಂಘಟನೆಗಳ ಆದೇಶದ ಮೇರೆಗೆ ಹಾಗೂ ಸರ್ಕಾರದ ಆದೇಶ ಹೊರಬರುವವೆರಗೂ ವಾಲ್ಮೀಕಿ ಜಯಂತಿ ಪೂರ್ವ ಬಾವಿ ಸಭೆಗಳನ್ನು , ಸಂಘದ ಕಾರ್ಯಕ್ರಮಗಳನ್ನು ಬಹಿಷ್ಕರಿಸುತ್ತೇವೆ ಎಂದು ಸಂಘಟನೆ ಮುಖಂಡರು ಎಚ್ಚರಿಕೆ ನೀಡಿದರು.
ಹಾಗೂ ಕೋಲಾರದಲ್ಲಿ ಇದೇ ತಿಂಗಳು 7ರಂದು ನಮ್ಮ ತಾಲ್ಲೂಕಿನಿಂದ 500 ಜನ ವಾಲ್ಮೀಕಿ ಸಮುದಾಯದ ಮುಖಂಡರೊಂದಿಗೆ, ಮೀಸಲಾತಿ ಜಾರಿಗಾಗಿ ಆಗ್ರಹಿಸಿ, ಜಿಲ್ಲಾಧಿಕಾರಿಗಳ ಕಚೇರಿಗೆ ಕಾಲ್ನಡಿಗೆ ಮುಖಾಂತರ ತೆರಳಿ ಮನವಿ ಸಲ್ಲಿಸಲಾಗುವುದು. ನಮ್ಮ ಎಸ್‍ಸಿ, ಎಸ್‍ಟಿ ಕುಲಬಾಂದವರು, ಹೆಚ್ಚಿನ ಸಂಖ್ಯೆಯಲ್ಲಿ ಭಾಘವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಸಿ ಎಂದು ಮನವಿ ಮಾಡಿದರು.
ಹೊಸಹಳ್ಳಿ ಗ್ರಾ.ಪಂ. ಸದಸ್ಯ ಮೋಹನ್‍ಬಾಬು ಎಪಿಎಂಸಿ ಮಾಜಿ ಉಪಾಧ್ಯಕ್ಷ ಕೃಷ್ಣಪ್ಪ, ಮುಖಂಡರಾದ ಗುಮ್ಮರೆಡ್ಡಿಪುರ ವೆಂಕಟೇಶ್‍ನಾಯಕ್, ಹರೀಶ್‍ನಾಯಕ್, ನರೇಶ್, ನರಸಿಂಹ , ಮಂಜುನಾಥ್, ಎಂ. ರಾಮಚಂದ್ರ ಇದ್ದರು.