ಕೋವಿಶೀಲ್ಡ್-ಕೋವಾಕ್ಸಿನ್ ಲಸಿಕೆಗಳ ಮಿಶ್ರಣ ಹೆಚ್ಚು ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಾಯವಾಗಿದೆ ಅಧ್ಯಯನದಲ್ಲಿ ಬಯಲು

JANANUDI.COM NETWORK


ಉತ್ತರ ಪ್ರದೇಶದಲ್ಲಿ ಅಜಾಗರೂಕತೆಯಿಂದ ಈ ಎರಡು ಲಸಿಕೆ ಮಿಶ್ರಣ ಪಡೆದು ಕೊಂಡ 18 ಮಂದಿ ಸೇರಿದಂತೆ 98 ಜನರ ಮೇಲೆ ಈ ಲಸಿಕೆ ಮಿಶ್ರಣ ಪ್ರಯೋಗ ನಡೆಸಲಾಗಿದ್ದು.ಇದರ ಮೇಲೆ ಅಧ್ಯಯನ ನಡೆಸಿದ್ದು ಮಿಶ್ರ ಲಸಿಕೆ ಪಡೇದುಕೊಂಡವರಲ್ಲಿ ಎರಡು ಲಸಿಕೆಗಳ ವಿಶ್ರಣ ಮಾಡಿ ನೀಡುವ ಒಂದೇ ಲಸಿಕೆಯು ಎರಡು ಡೋಸ್ಗಳಿಗಿಂತಲೂ ಹೆಚ್ಚು ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಾಯವಾಗಿದೆ ಎಂಬುದು ಅಧ್ಯಯನದಿಂದ ಬಯಲಾಗಿದೆ.


ಕೊರೋನಾ ಸೋಂಕಿನ ವಿರುದ್ಧ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಎರಡು ಲಸಿಕೆ ಮಿಶ್ರಣ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ ತಿಳಿಸಿದೆ. ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಎರಡು ಲಸಿಕೆಗಳ ವಿಶ್ರಣ ಮಾಡಿ ನೀಡುವ ಒಂದೇ ಲಸಿಕೆಯು ಎರಡು ಡೋಸ್ಗಳಿಗಿಂತಲೂ ಹೆಚ್ಚು ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಾಯವಾಗಿದೆ ಎಂಬುದು ಅಧ್ಯಯನದಿಂದ ಬಯಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ.
ಪುಣೆ ಮೂಲಕ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ವೈರಾಲಜಿ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆ ಸಂಯೋಜಿಸಿ ನೀಡಿದಾಗ ರೋಗ ನಿರೋಧಕ ಶಕ್ತಿ ಅಭಿವೃದ್ಧಿ ಹೊಂದಿದೆ ಎಂದು ತಿಳಿಸಿದೆ, ಅಲ್ಲದೆ, ಈ ಲಸಿಕೆ ಮಿಶ್ರಣ ಕೋವಿಡ್ 19 ಮತ್ತು ರೂಪಾಂತರ ತಳಿಗಳಿಗ ವಿರುದ್ಧ ಇಮ್ಯೂನಿಟಿ ಪವರ್ ಹೆಚ್ಚಿಸುತ್ತದೆ ಎಂದು ತಿಳಿಸಿದೆ
ಉತ್ತರ ಪ್ರದೇಶದಲ್ಲಿ ಅಜಾಗರೂಕತೆಯಿಂದ ಈ ಎರಡು ಲಸಿಕೆ ಮಿಶ್ರಣ ಪಡೆದು ಕೊಂಡ 18 ಮಂದಿ ಸೇರಿದಂತೆ 98 ಜನರ ಮೇಲೆ ಈ ಲಸಿಕೆ ಮಿಶ್ರಣ ಪ್ರಯೋಗ ನಡೆಸಲಾಗಿದೆ. ಭಾರತದಲ್ಲಿ ಪ್ರಸ್ತುತ ಕೋವಾಕ್ಸಿನ್ ಅಥವಾ ಕೋವಿಶೀಲ್ಡ್ ಎರಡರಲ್ಲಿ ಒಂದನ್ನು ಮಾತ್ರ ಒಬ್ಬ ವ್ಯಕ್ತಿಗೆ ಎರಡು ಡೋಸ್ ಲಸಿಕೆ ನೀಡಲಾಗುತ್ತಿದೆ. ದೇಶದ್ಯಾಂತ ಕಳೆದ ಜನವರಿಯಿಂದ ಆರಂಭವಾಗಿರುವ ಈ ಲಸಿಕೆ ನೀಡುವಿಕೆ ಕಾರ್ಯಕ್ರಮ ನಡೆಯುತ್ತಿದೆ..
ಮಿಶ್ರಣ ಲಸಿಕೆ ಪಡೆದವರ ಮೇಲಿನ ಅಧ್ಯಯನ ಆರಂಭಿಸಲಾಗಿದ್ದು, ಇದರ ಅಂತಿಮ ವಿಶ್ಲೇಷಣೆ ಇನ್ನು ನಡೆಯಬೇಕಿದೆ. ಒಂದೇ ಲಸಿಕೆಯ ಎರಡು ಡೋಸ್ ಪಡೆದವರು ಮತ್ತು ಎರಡು ಲಸಿಕೆಯ ಮಿಶ್ರಣವನ್ನು ಪಡೆದವರ ಮೇಲೆ ನಡೆದ ಅಧ್ಯಯನದ ವೇಳೆ ಇಬ್ಬರ ನಡುವೆ ರೋಗ ನಿರೋಧಕ ಶಕ್ತಿ ಕುರಿತು ಅಧ್ಯಯನ ನಡೆಸಲಾಯಿತು. ಈ ವೇಳೆ ಅಲ್ಫಾ, ಬೀಟಾ ಮತ್ತು ಡೆಲ್ಟಾ ರೂಪಾಂತರ ತಳಿಗಳ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ಅಷ್ಟೆ ಅಲ್ಲದೇ, ಏಕರೂಪದ ಗುಂಪುಗಳಿಗೆ ಹೋಲಿಸಿದರೆ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಅಧ್ಯಯನದಲ್ಲಿ ಬಯಲಾಗಿದೆ.