ಮಂಗಳೂರು: ದಿನಾಂಕ 02.09.2023ರಂದು ಸಂತರೇಮಂಡ್ ವಿದ್ಯಾಸಂಸ್ಥೆ ವಾಮಂಜೂರುಇಲ್ಲಿ ಬೆಥನಿ ಎಜ್ಯುಕೇಶನಲ್ ಸೊಸೈಟಿಯ75ನೇ ಅಮೃತ ಮಹೋತ್ಸವವು ಬಹಳ ವಿಜೃಂಭಣೆಯಿಂದ ನಡೆಯಿತು. ಬೆಥನಿ ಎಜ್ಯುಕೇಶನಲ್ ಸೊಸೈಟಿಯಕಾರ್ಪೊರೇಟ್ ಮ್ಯಾನೇಜರ್ ವಂದನೀಯ ಭಗಿನಿ ಸಿಸಿಲಿಯ ಮೆಂಡೋನ್ಸಾಅಧ್ಯಕ್ಷೀಯ ಸ್ಥಾನವನ್ನು ಅಲಂಕರಿಸಿದರು. ಧರ್ಮಗುರುಗಳಾದ ರೇವರೆಂಡ್ ಫಾದರ್ ಮ್ಯಾಕ್ಸಿಮ್ಎಲ್ ನೊರೊನ್ಹಾ, ವಿಕಾರ್ಜನರಲ್ ಮಂಗಳೂರು ಧರ್ಮಪ್ರಾಂತ್ಯ, ಬೆಥನಿ ಎಜ್ಯುಕೇಶನಲ್ ಸೊಸೈಟಿಯ76ನೇ ವರ್ಷದ ಸಂಭ್ರಮಕ್ಕೆಚಾಲನೆಯನ್ನು ನೀಡಿ ದೀಪ ಬೆಳಗಿಸಿ, ಆಶೀರ್ವಚನ ನೀಡಿದರು. ಮುಖ್ಯಅತಿಥಿಯಾಗಿ ಶ್ರೀಯುತ ಜೇಮ್ಸ್ ಕುಟಿನ್ಹೊ, ಕ್ಷೇತ್ರ ಶಿಕ್ಷಣಾಧಿಕಾರಿ, ಮಂಗಳೂರು ಉತ್ತರ ವಲಯ, ಶ್ರೀಮತಿ ಮರಿಯಮ್ಮತೋಮಸ್, ಮಾಜಿಕಾರ್ಪೊರೇಟರ್ ಹಾಗೂ ವಕೀಲರು ಮತ್ತುಡಾ| ಸತೀಶ್ಕುಮಾರ್-ಮಣಿಪಾಲ ವಾಣಿಜ್ಯ ವಿಭಾಗದ ಹಿರಿಯಆಧ್ಯಾಪಕರು ಹಾಗೂ ಭಗಿನಿ ಶುಭ, ಮಂಗಳೂರು ಪ್ರಾಂತ್ಯದ ಶಿಕ್ಷಣ ಸಂಯೋಜಕಿ ಹಾಗೂ ಸೈಂಟ್ರೇಮಂಡ್ ಸಂಸ್ಥೆಗಳ ಸಂಚಾಲಕಿ ಮತ್ತು ಸ್ಥಳೀಯ ಕಾನ್ವೆಂಟಿನಸುಪೀರಿಯರ್ ವಂದನೀಯ ಭಗಿನಿ ವಿತಾಲಿಸ್ ಉಪಸ್ಥಿತರಿದ್ದರು. ಡಾ| ಸತೀಶ್ಕುಮಾರ್ ಹಾಗೂ ಶ್ರೀಮತಿ ಮರಿಯಮ್ಮತೋಮಸ್ಇವರು ಬೆಥನಿ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾಗಿದ್ದು ತಮ್ಮ ಪ್ರಗತಿಗೆಕಾರಣಕರ್ತರಾದ ಬೆಥನಿ ಶಿಕ್ಷಣ ಸಂಸ್ಥೆಯನ್ನು ಶ್ಲಾಘಿಸಿದರು. ವಂದನೀಯ ಭಗಿನಿ ಶುಭಎಲ್ಲರನ್ನೂ ಸ್ವಾಗತಿಸಿದರು. ಶ್ರೀಮತಿ ಶರ್ಮಿಳ ಹಾಗೂ ಶ್ರೀಮತಿ ರೇಶ್ಮ ವಂದಿಸಿದರು. ಭಗಿನಿ ಜೆಸ್ಸಿ ಪ್ರೀಮ ಮತ್ತು ಶ್ರೀಮತಿ ಡೆಲ್ಸಿ ಡಿ’ಸೋಜಕಾರ್ಯಕ್ರಮ ನಿರೂಪಿಸಿದರು.
ವರದಿ : ನಯನ ಸಹಶಿಕ್ಷಕಿ