ಕುಂದಾಪುರ,ಸೆ.8: ರೋಜಾರಿ ಅಮ್ಮನವರ ಇಗರ್ಜಿಯಲ್ಲಿ ಮಾತೆ ಮೇರಿಯ ಹುಟ್ಟು ಹಬ್ಬವನ್ನು “ಮೊಂತಿ ಫೆಸ್ತ್” ಬಹಳ ಶ್ರದಾ ಭಕ್ತಿ ಗೌರವ ಹಾಗೂ ವಿಜ್ರಂಭಣೆಯಿಂದ ಆಚರಿಸಲಾಯಿತು ಮೊದಲಿಗೆ ಮೇರಿ ಮಾತೆಯ ಗ್ರೊಟ್ಟೊ ಎದುರುಗಡೆ ಹೊಸ ಬೆಳೆ ಭತ್ತದ ತೇನೆಗಳನ್ನು ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಆಶಿರ್ವದಿಸುವ ಮೂಲಕ ಚಾಲನೆಯನ್ನು ನೀಡಿದರು. ನಂತರ ಅಲಂಕ್ರತ ಬಾಲ ಮೇರಿ ಮಾತೆಯ ಪುಥ್ಥಳಿಗೆ ಚಿಕ್ಕ ಮಕ್ಕಳು ಪುಷ್ಪಗಳನ್ನು ಆರ್ಚನೆ ಮಾಡುತ್ತಾ, ಬ್ಯಾಂಡು ವಾದ್ಯದೊಂದಿಗೆ ಭಕ್ತಿ ಗಾಯನನ ಮೂಲಕ ಮೆರವಣಿಗೆ ಮೂಲಕ ಇಗರ್ಜಿಗೆ ಬಂದು ದಿವ್ಯ ಬಲಿದಾನವನ್ನು ಅರ್ಪಿಸಲಾಯಿತು.
ದಿವ್ಯ ಬಲಿದಾನ ಅರ್ಪಿಸಿದ ಉಡುಪಿ ಧರ್ಮಪ್ರಾಂತ್ಯದ ದಿವ್ಯ ಜ್ಯೋತಿಯ ನಿರ್ದೇಶಕರರಾದ ವಂ|ಧರ್ಮಗುರು ಸಿರಿಲ್ ಲೋಬೊ ‘ಮೇರಿ ಮಾತೆಯ ಜೀವನವೊಂದು, ಸುಂದರ ವರ” ಇವ್ ಪ್ರಥಮ ಜಗತ್ತಿನ ಪ್ರಥಮ ಸ್ತ್ರೀಯಾದರೆ, ಅವಳು ದೇವರ ಕ್ರಪೆಯನ್ನು ಹೊಗಲಾಡಿಸಿಕೊಂಡಳು, ಮೇರಿ ಮಾತೆಯು ನಮಗೆ ರಕ್ಷಕನಾದ ಯೇಸುವಿನ ತಾಯಿಯಾಗಲು ಒಪ್ಪಿ ನಮಗೆ ಪುನರ್ಜೀವನ ನೀಡಿದ ಮಹಾತಾಯಿದಳು, ಮೇರಿ ದೇವ ಪುತ್ರನನ್ನು ಹಡೆದು, ಸ್ವರ್ಗವನ್ನೆ ದರೆಗೆ ಇಳಿಸಿದ ಪಾವನೆ. ತಾನು ಗರ್ಭಿಣಿಯಾಗುವೇನೆಂದು ತಿಳಿದ ಪ್ರಥಮ ಸ್ತ್ರೀ, ನಾನು ಗಂಡು ಮಗನಿಗೆ ತಾಯಿಯಾಗುವೆಂದು ತಿಳಿದ ತಾಯಿ, ಈಗೆ ಹಲವು ವಿಷಯಗಳಲ್ಲಿ ಮೇರಿ ಮಾತೆ ಪ್ರಥಮ ಸ್ತ್ರೀ. ಮೇರಿ ಮಾತೆ ಏನೆಂದು ತಿಳಿದುಕೊಳ್ಳಬೇಕಿದ್ದರೆ, ನಾವು ಯೇಸುನ್ನು ಹೆಚ್ಚು ಅರಿಯಬೇಕು. ಪ್ರತಿಯೊಬ್ಬ ಹೆಣ್ಣು ಮೇರಿ ಮಾತೆಯಂತೆ ಸಚ್ಚಾರಿತ್ರದ ಹೆಣ್ಣಾಗಬೆಕು. ಮೇರಿ ಮಾತೆ ಗೋದಲಿಯಿಂದ ಹಿಡಿದು, ಕಾಲ್ವಾರಿ ಪರ್ವತದ ಶಿಲುಭೆಯ ತನಕ ಯೇಸುವಿಗೆ ಜೊತೆ ನೀಡಿದಳು. ನಾವು ಈ ಮಹಾ ಮಾತೆಯ ಜನ್ಮ ದಿನಕ್ಕೆ ಹೊಸ ಬೆಳೆಯನ್ನು ದೇವರಿಗೆ ಕ್ರತ್ಞತಾ ಪುರ್ವಕವಾಗಿ ಸಮರ್ಪಿಸಿ ತೇನೆಹಬ್ಬವನ್ನು ಆಚರಿಸುತ್ತೇವೆ, ನಾವು ಈ ಹಬ್ಬವನ್ನು, ನಮ್ಮ ನಾಡಿನ ಭಾಶೆಗೆ, ನಮ್ಮ ಭೂಮಿಗೆ ನಮ್ಮ ಜಲ ನದಿಗಳಿಗೆ ಗೌರವ ಕೊಟ್ಟು ಈ ಹಬ್ಬ ಆಚರಿಸೋಣ. ಮೇರಿ ಮಾತೆ ಅಥವ ಸಂತರುಗಳ ಕೇವಲ ನಾವು ಮೂರ್ತಿ ಪೂಜೆ ಮಾಡುವುದು ಬೇಡ, ಅವರಿಗೆ ಗೌರವ ನೀಡಿ ಬೇಡಿರಿ, ಅವರು ನಮ್ಮ ನಿವೇದನೆ ಯೇಸು ಸ್ವಾಮಿಯಿಯ ಮೂಲಕ ಬಗೆಹರಿಸುತ್ತಾರೆ ಎಂಬುದು ಅರಿಯೋಣ. ಈ ಹಬ್ಬ ಹೆಣ್ಣುಮಕ್ಕಳ ಹಬ್ಬವೆಂದೂ ಆಚರಿಸುತ್ತಾರೆ ಕಾರಣ ಮೇರಿ ಮಾತೆ ಪಾಪ ಕಳಂಕರಹಿತಳು, ಮೇರಿ ಮಾತೆ ಎಲ್ಲರಿಗೂ ಆದರ್ಶೆ, ಅವಳ ಆದರ್ಶವನ್ನು ನಮ್ಮ ಹೆಣ್ಣು ಮಕ್ಕಳು ಪಾಲಿಸಬೇಕು” ಎಂದು ಅವರು ಸಂದೇಶ ನೀಡಿದರು.
ಚರ್ಚಿನ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ ಹಬ್ಬದ ಶುಭಾಶಯಗಳನ್ನು ಕೋರಿ ವಂದನಾರ್ಪಣೆ ಮಾಡಿದರು. ಎಲ್ಲಾ ಕುಟುಂಬದವರಿಗೆ ತೆನೆಗಳನ್ನು ಹಂಚಲಾಯಿತು. ಮಕ್ಕಳಿಗೆ ಕಬ್ಬುಗಳನ್ನು ಹಂಚಲಾಯಿತು. ಹಬ್ಬದಲ್ಲಿ ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ವಾಳೆಯ ಗುರಿಕಾರರು, ಪ್ರತಿನಿಧಿಗಳು, ಧರ್ಮಭಗಿನಿಯರು ಮತ್ತು ಬಹು ಸಂಖ್ಯೆಯಲ್ಲಿ ಭಕ್ತಾಧಿಗಳು ಇದ್ದರು.