ಮಂಗಳೂರು: 2023 ರ ಜುಲೈ 16 ರಂದು “ಉತ್ತರಿಕೆಯ ಹಬ್ಬ”ವೆಂದು ಕರೆಯಲ್ಪಡುವ ಕಾರ್ಮೆಲ್ ಮಾತೆಯ ಹಬ್ಬವನ್ನು ಬಾಲಯೇಸುವಿನ ಪುಣ್ಯಕ್ಷೇತ್ರದಲ್ಲಿ ಕಾರ್ಮೆಲ್ ಸಭೆಯ ಗುರುಗಳು ಬಹಳ ವಿಜೃಂಭಣೆಯಿಂದ ಆಚರಿಸಿದರು. ಉತ್ತರಿಕೆಯ ಹಬ್ಬ ಹಾಗು ಕಾರ್ಮೆಲ್ ಮಾತೆಯ ಹಬ್ಬದ ಗೌರವಾರ್ಥವಾಗಿ ಪುಣ್ಯಕ್ಷೇತ್ರದಲ್ಲಿ 9 ದಿನಗಳ ನೊವೇನವನ್ನು ನಡೆಸಲಾಯಿತು. ಈ 9 ದಿನಗಳಲ್ಲಿ, ಕಾರ್ಮೆಲ್ ಸಭೆಯ ಗುರುಗಳು ಆಧ್ಯಾತ್ಮಿಕ ಸುಧಾರಣೆಗಾಗಿ ಮತ್ತು ಹಬ್ಬಕ್ಕೆ ಸಿದ್ಧತೆಗಾಗಿ ವಿವಿಧ ವಿಷಯಗಳ ಕುರಿತು ಪ್ರಭೋದನೆಯನ್ನು ನೀಡಿದರು.
ಜುಲೈ 16 ಹಬ್ಬದ ದಿನದಂದು, ಧರ್ಮಗುರು ಫಾ. ರಿಚರ್ಡ್ ಅಲೋಶಿಯಸ್ ಕೊಯೆಲ್ಹೋ, ಮತ್ತು ಫಾ. ಮೆಲ್ವಿನ್ ಡಿ’ಕುನ್ಹಾ, ಸಂತ ಜೋಸೆಫ್ ಮಠದ ಮಠಾಧಿಪತಿಗಳು, ಫಾ. ಸ್ಟಿಫಾನ್ ಪಿರೇರಾ, ಬಾಲಯೇಸುವಿನ ಪುಣ್ಯಕ್ಷೇತ್ರದ ನಿರ್ದೇಶಕರು ಹಾಗು ಫಾ. ದೀಪ್ ಫೆರ್ನಾಂಡಿಸ್, ದೈವಶಾಸ್ತ್ರದ ವಿದ್ಯಾರ್ಥಿಗಳ ತರಬೇತುದಾರರು, ಇತರ ಗುರುವೃಂದದವರು ಸೇರಿ ‘ಮಾತೆ ಮರಿಯಳ ಸಹಭಾಗಿತ್ವವು ಮಾನವಕುಲಕ್ಕೆ ಒಂದು ದೊಡ್ಡ ವರದಾನ’ ಎಂಬ ವಿಷಯದ ಬಗ್ಗೆ ಹಬ್ಬದ ಆಡಂಬರ ದಿವ್ಯ ಬಲಿಪೂಜೆಯನ್ನು ಆರ್ಪಿಸಿದರು.
ಕಾರ್ಮೆಲ್ ಮಾತೆಯ ಹಬ್ಬಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು ಹಾಗು ಅನೇಕ ಗುರುವೃಂದದವರು ಮತ್ತು ಧಾರ್ಮಿಕ ಸಹೋದರ ಸಹೋದರಿಯರು ಕಾರ್ಮೆಲ್ ಮಾತೆಯ ಹಬ್ಬದ ದಿವ್ಯಬಲಿಪೂಜೆಯನ್ನು ಆರ್ಪಿಸಿ, ಮಾತೆಯ ಮಧ್ಯಸ್ಥಿಕೆಗಾಗಿ ಪ್ರಾರ್ಥಿಸಿದರು. ಕಾರ್ಮೆಲ್ ಮಾತೆಯ ರಕ್ಷಣೆ ಹಾಗು ಕಾರ್ಮೆಲ್ ಸಭೆಯ ಸಂಪತ್ತಿನ ಸಂಕೇತವಾದ ಉತ್ತರಿಕೆಯನ್ನು ಎಲ್ಲರಿಗೂ ವಿತರಿಸಲಾಯಿತು. ಇಡೀ ಪುಣ್ಯಕ್ಷೇತ್ರದ ಆವರಣದಲ್ಲಿ ಸಂಭ್ರಮದ ವಾತಾವರಣವು ಆವರಿಸಿತ್ತು.
The Carmelites of Infant Jesus Shrine, Bikkarnakatte, celebrated the feast of Our Lady of Mount Carmel
Mangalore: The Carmelites of Infant Jesus Shrine, Bikkarnakatte, celebrated the feast of Our Lady of Mount Carmel, also known as the Scapular Feast, on the 16th of July, 2023. The Carmelites are a religious Order that cherishes their spiritual legacy as the promoters of the Scapular devotion. The shrine held 9 days of novena in honour of the Blessed Virgin, and on each of these 9 days, priests offered reflection on different themes for spiritual edification and fruitful preparation for the feast. Carmelite priests celebrated three masses on the novena days and gave enlightening homilies, describing the accompaniment Mary offered to the entire domain of humanity in the past as in the present; to apostles, Church, migrants, youth and the persecuted.
On the feast day, the Solemn Mass was celebrated by Rev. Fr. Richard Aloysius Coelho, Director Fr Muller Institutions and was concelebrated by Rev. Fr. Melwin D’Cunha, the Superior of St. Joseph’s Monastery, Rev. Fr. Stifan Periera, the Director of Infant Jesus Shrine, Rev. Fr. Deep Fernandes, the Master of the Theology Students, among others priests. Reflecting on the theme ‘Mary’s accompaniment a Great Boon to Humankind’, Fr. Richard, emphasized her role in the redemptive action of Christ, and her continued assistance to humanity over the years.
The faithful gathered in great numbers for the feast, and the joy of the occasion was enhanced with the presence of many priests and religious. The Scapular, a sign of Mary’s protection and the wealth of the Carmelite Order, was distributed to everyone. The ambience of celebration hovered over the entire Shrine campus.