ರಿಷಬ್ ಪಂತ್‌ಚಲಾಯಿಸುತಿದ್ದ ಕಾರು ಅಪಘಾತ ಕಾರು,ಸುಟ್ಟು ಕರಕಲು- ರಿಷಬ್ ತೀವ್ರ ಗಾಯಾಳು

ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ರಿಷಬ್ ಪಂತ್ ಉತ್ತರಖಂಡ ರಾಜ್ಯದಲ್ಲಿ ಕಾರು ಚಲಾಯಿಸುತ್ತಿದ್ದಾಗ ಡಿವೈಡರ್‌ಗೆ ನುಗ್ಗಿದ ಪರಿಣಾಮ ಭಾರೀ ಅಪಘಾತ ಸಂಭವಿಸಿದೆ. ತೀವ್ರ ಗಾಯಗಳಾಗಿರುವ ಅವರನ್ನು ಡೆಹ್ರಾಡೂನ್‌ನ ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಈ ನಡುವೆ ಅವರ ಮರ್ಸಿಡೆಸ್ ಬೆಂಚ್ ಕಾರು ಸುಟ್ಟು ಕರಕಲಾಗಿದೆ.  

   ಇಂದು ಬೆಳಿಗ್ಗೆ ನವದೆಹಲಿಯಿಂದ ಉತ್ತರಖಂಡಕ್ಕೆ ಪ್ರಯಾಣಿಸುತ್ತಿದ್ದಾಗ ಉತ್ತರಾಖಂಡದ ರೂರ್ಕಿ ಬಳಿ ಅಪಘಾತ ಸಂಭವಿಸಿದೆ. ರಿಷಬ್ ಪಂತ್ ಸ್ವತಹ ಕಾರು ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದ್ದು, ವೇಗವಾಗಿ ಚಲಿಸುವ ಕಾರು ಡಿವೈಡರ್‌ ಹಾರಿ ಹೋಗುವುದು ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.

ಗಾಯಗೊಂಡ ಅವರನ್ನು ಸಕ್ಷಮ್ ಆಸ್ಪತ್ರೆ ಮಲ್ಟಿಸ್ಪೆಷಾಲಿಟಿ ಮತ್ತು ಟ್ರಾಮಾ ಸೆಂಟರ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು,. ರಿಷಬ್ ಅವರ ಹಣೆಗೆ, ಬೆನ್ನಿಗೆ ಪೆಟ್ಟಾಗಿದೆ. ಅವರ ಬಲ ಮೊಣಕಾಲು ಮತ್ತು ಪಾದದ ಬೆರಳಿಗೆ ಗಾಯವಾಗಿವೆ ಎಂದು. ಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.

ಡ್ರೈವಿಂಗ್ ಮಾಡುವಾಗ ಪಂತ್ ತೂಕಡಿಸಿದ ಪರಿಣಾಮ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಆನಂತರ ವಾಹನಕ್ಕೆ ಬೆಂಕಿ ಹೊತ್ತಿಕೊಂಡಾಗ ತಪ್ಪಿಸಿಕೊಳ್ಳಲು ಕಾರಿನ ವಿಂಡ್‌ಸ್ಕ್ರೀನ್ ಅನ್ನು ಹೊಡೆದಿದ್ದಾರೆ. ಕಾರಿನಲ್ಲಿ ಪಂತ್ ಒಬ್ಬರೆ ಇದ್ದರು ಎಂದು ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ತಿಳಿಸಿದ್ದಾರೆ.