ಕೊಡಗು : ಫೆ.14: ಜಿಲ್ಲೆಯಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ನರಭಕ್ಷಕ ವ್ಯಾಘ್ರನನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ ಪೊನ್ನಂಪೇಟೆ ನಾಣಚ್ಚೆಗೇಟ್ ಬಳಿ ಅರವಳಿಕೆ ಚುಚ್ಚುಮದ್ದು ನೀಡಿ ನರಭಕ್ಷಕ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸಾಹಸದಿಂದ ಸೆರೆ ಹಿಡಿದಿದ್ದಾರೆ.
ದಸರಾ ಅನೆ ಅಭಿಮನ್ಯು ನೇತೃತ್ವದಲ್ಲಿ ಇಂದು ಬೆಳಗ್ಗೆಯಿಂದ ಕಾರ್ಯಾಚರಣೆ ನಡೆಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಸಾಕಾನೆಗಳನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಿ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ನರಭಕ್ಷಕ ವ್ಯಾಘ್ರನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಅಲ್ಲಿನ ಜನ ಈಗ ನಿಟ್ಟುಸಿರು ಬಿಡುವಂತೆ ಆಗಿದೆ.
ನರಭಕ್ಷಕ ವ್ಯಾಘ್ರ ಮೊದಲು ಜಾನುವಾರುಗಳನ್ನು ಭೇಟೆಯಾಡಿ ಕೊಲ್ಲುತಿತ್ತು, ಇದೀಗ ಜನರ ಮೇಲೆ ಆಕ್ರಮಣ ಮಾಡತೊಡಗಿದ್ದು, ೧೮ ಗಂಟೆಗಳ ಅಂತರದಲ್ಲಿ ಮೊಮ್ಮೊಗ ಮತ್ತು ಅಜ್ಜನನ್ನು ಕೊಂದು ಹಾಕಿತ್ತು. ಮಗನ ಶವವನ್ನು ಹುಡಕಲು ಹೋದ ತಂದೆಯ ಮೇಲೆ ಕೂಡ ಆಕ್ರಮಣ ಮಾಡಿದ್ದು. ನರಭಕ್ಷಕ ವ್ಯಾಘ್ರನಿಂದ ಹತರಾದ ಕುಟುಂಬಕ್ಕೆ ತುಂಬಲಾರದ ನಶ್ಟವಾಗಿದೆ.