

ಕಾರವಾರ : ಅಂಕೋಲ ಸಮೀಪ ಶಿರೂರಿನಲ್ಲಿ ಒಂದು ವಾರದ ಹಿಂದೆ ಸಂಭವಿಸಿದ ಭೀಕರ ಗುಡ್ಡ ಕುಸಿತ ಸಂದರ್ಭದಲ್ಲಿ
ನಾಪತ್ತೆಯಾಗಿದ್ದ ಓರ್ವ ಮಹಿಳೆಯ ಶವ ಸಮೀಪದ ಗಂಗಾವಳಿ ನದಿಯಲ್ಲಿ ಪತ್ತೆಯಾಗಿದ್ದು ಇದರೊಂದಿಗೆ ಇಷ್ಟರ ತನಕ 8 ಶವ
ಸಿಕ್ಕಿದಂತಾಗಿದೆ.
ಇಂದು ಮುಂಜಾನೆ ವೇಳೆ ನದಿ ಸಂಗಮದ ಮಂಜುಗುಣಿ ಎಂಬಲ್ಲಿ ಮಹಿಳೆಯ ಶವ ಸಿಕ್ಕಿದೆ. ಗುಡ್ಡ ಕುಸಿದಾಗ ನದಿಯ ಇನ್ನೊಂದು
ದಡದಲ್ಲಿರುವ ಉಳುವರೆ ಗ್ರಾಮದಲ್ಲೂ ಸಾಕಷ್ಟು ಅನಾಹುತ ಸಂಭವಿಸಿತ್ತು. ಈ ಸಂದರ್ಭ ಸಣ್ಣು ಎಂಬ ಮಹಿಳೆಯೊಬ್ಬರು.
ನಾಪತ್ತೆಯಾಗಿರುವ ಕುರಿತು ಅವರ ಮನೆಯವರು ದೂರು ನೀಡಿದ್ದರು. ಆದರೆ ಇಂದು ಪತ್ತೆಯಾದ ಶವ ಸಣ್ಣು ಅವರದ್ದೇ ಎನ್ನುವುದು.
ದೃಢವಾಗಿಲ್ಲ ಹೆಣ ಕೊಳೆತು ಹೋಗಿದ್ದು ಕೈಯಲ್ಲಿರುವ ಬಳೆ ಹಾಗೂ ಧರಿಸಿರುವ ಬಟ್ಟೆಯ ಸಹಾಯದಿಂದ ಗುರುತು ಪತ್ತೆಹಚ್ಚಲು
ಪ್ರಯತ್ನಿಸಲಾಗುತ್ತಿದೆ.
ಈ ಮಹಾದುರಂತದಲ್ಲಿ ಹಲವು ಮಂದಿ ನಾಪತ್ತೆಯಾಗಿರುವ ಶಂಕೆ ಇದೆ. ಕೇರಳದ ಲಾರಿ ಚಾಲಕ ಅರ್ಜುನನ್ ಎಂಬವರು ಲಾರಿ.
ಸಮೇತ ನಾಪತ್ತೆಯಾಗಿದ್ದು ಅವರ ಕುರುಹು ಇನ್ನೂ ಕೂಡ ಪತ್ತೆಯಾಗದಿರುವುದು ಕಳವಳ ಮೂಡಿಸಿದೆ.