ಉಡುಪಿ: ಉಡುಪಿ ಧರ್ಮಪ್ರಾಂತ್ಯದ ನೂತನ ಕಾರ್ಯಾಲಯ /ಬಿಷಪ್ ಹೌಸ್‌ನ ಆಶೀರ್ವಾದ ಮತ್ತು ಶಿಲಾನ್ಯಾಸವು ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್‌ನ ಏವ್ ಮರಿಯಾ ಹಾಲ್‌ನಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಿತು.
ವೇದಿಕೆಯಲ್ಲಿ ಉಡುಪಿಯ ಬಿಷಪ್ ಡಾ ಜೆರಾಲ್ಡ್ ಐಸಾಕ್ ಲೋಬೋ, ವಿಕಾರ್ ಜನರಲ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಶ್ರೀ ಮತ್ತು ಶ್ರೀಮತಿ ಮೈಕೆಲ್ ಮತ್ತು ಫ್ಲಾವಿಯಾ ಡಿಸೋಜಾ ಮತ್ತು ಡಾ ಜೆರಿ ವಿನ್ಸೆಂಟ್ ಡಯಾಸ್ ಉಪಸ್ಥಿತರಿದ್ದರು.
ಉಡುಪಿ ಧರ್ಮಪ್ರಾಂತ್ಯದ ಐದು ವಲಯ ಪ್ರಧಾನರಾದ, ಕಲ್ಯಾಣಪುರ ವಲಯದ ಅ|ವಂ| ಫಾದರ್ ವಲೇರಿಯನ್ ಮೆಂಡೋನ್ಕಾ, ಕಾರ್ಕಳವಲಯದ ಅ|ವಂ| ಪಾವ್ಲ್ ರೇಗೊ, ಕುಂದಾಪುರ ವಲಯದ ಅ|ವಂ| ಸ್ಟ್ಯಾನಿ ತಾವ್ರೊ, ಶಿರ್ವ ವಲಯದ ಅ|ವಂ| ಲೆಸ್ಲಿ ಕ್ಲಿಫರ್ಡ್ ಡಿಸೋಜಾ, ಉಡುಪಿ ವಲಯದ ಅ|ವಂ| ಚಾರ್ಲ್ಸ್ ಮೆನೇಜಸ್ ಮತ್ತು ಅ.ವಂ. ವಲೇರಿಯನ್ ಡಿಸೋಜ, ಕನ್ಸಲ್ಟರ್ಸ್ ಕಾಲೇಜಿನ ಸದಸ್ಯರು, ಶ್ರೀ ಲೆಸ್ಲಿ ಅರೋಜಾ, ಕಾರ್ಯದರ್ಶಿ, ಧರ್ಮಪ್ರಾಂತ್ಯದ ಪಾಲನಾ ಮಂಡಳಿ, ಫಾದರ್ ರೋಮಿಯೋ ಲೂಯಿಸ್, ಎಸ್ಟೇಟ್ ಇತರ ಪ್ರತಿನಿಧಿಗಳು ಉಪಸ್ಥಿತರಿದ್ದರು. ಮ್ಯಾನೇಜರ್ ಶ್ರೀಮತಿ ಐರಿನ್ ನೊರೊನ್ಹಾ ಮತ್ತು ಚಾರಿಟಿ ಟ್ರಸ್ಟ್‌ನ ಸದಸ್ಯರು.
ಶಿಲಾನ್ಯಾಸವನ್ನು ಬಿಷಪ್ ಅವರು ಆಶೀರ್ವದಿಸಿದರು, ಶ್ರೀ ಮತ್ತು ಶ್ರೀಮತಿ ಮೈಕೆಲ್ / ಫ್ಲಾವಿಯಾ ಡಿಸೋಜಾ, ಡಾ ಜೆರ್ರಿ ವಿನ್ಸೆಂಟ್ ಡಯಾಸ್ ಮತ್ತು ಶ್ರೀ ಲೆಸ್ಲಿ ಅರೂಜಾ ಅವರು ಶಿಲಾನ್ಯಾಸ ಗೈದರು
ಬಿಷಪ್ ರವರ ಆಶೀರ್ವಾದದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಂಡಿತು