ಕಾಪು ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೀನಾ ಡಿ’ಸೋಜಾಳ ಕೊಲೆ ಯತ್ನ

JANANUDI.COM NETWORK

ಪಡುಬಿದ್ರಿ, . 22: ಕಾಪು ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಿಳೆಗೆ ಚೂರಿಯಿಂದ ಇರಿದು ಗಂಭೀರವಾಗಿ ಹಲ್ಲೆ ನಡೆದಿದೆ.
ರೀನಾ ಡಿ’ಸೋಜಾ(35) ಅವರಿಗೆ ಚೂರಿಯಿಂದ ಹಲ್ಲೆಗೆ ಗುರಿಯಾದವರು.
ಗಾಯಾಳು ರೀನಾ ಡಿ’ಸೋಜಾಳನ್ನು ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ
ರೀನಾ ಡಿ’ಸೋಜಾ ಹೆಜಮಾಡಿಯಲ್ಲಿರುವ ತಮ್ಮ ಮನೆ ಬಳಿ ಬೇರೊಬ್ಬರ ಜೊತೆ ಮಾತನಾಡುತ್ತಿರುವಾಗ ಏಕಾಏಕಿ ಬಂದ ವ್ಯಕ್ತಿಯೊಬ್ಬ ರೀನಾ ಅವರ ಹೊಟ್ಟೆಗೆ ಇರಿದಿದ್ದಾನೆ. ಸಧ್ಯ ರೀನಾ ಡಿ’ಸೋಜಾ ಅಪಾಯದಿಂದ ಪಾರಾಗಿದ್ದು, ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.