ಆಲ್ಫ್ರೆಡ್ ಬೆನೀಸ್ ಕ್ರಿಯೇಷನ್ಸ್ ಆಯೋಜಿಸಲಾದ 15 ನೇ ಸ್ಟ್ಯಾನಿ ನೈಟ್ ನಡೆಯಿತು

ಮಂಗಳೂರು: 15 ನೇ ಸ್ಟ್ಯಾನಿ ನೈಟ್ ಕುಲಶೇಖರ್‌ನಲ್ಲಿರುವ ಚರ್ಚ್ ಮೈದಾನದಲ್ಲಿ, ಫೆಬ್ರುವರಿ 5,2023 ರಂದು ಕೆಲರಾಯ್, ನೀರುಮಾರ್ಗದ ಸೇಂಟ್ ಆನ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚಕ್ಕೆ ಸಹಯಾರ್ಥ  ಸಂಜೆ 6 ಗಂಟೆಗೆ ಕಾರ್ಯಕ್ರಮ ಆರಂಭವಾಯಿತು. ಕಲಾವಿದರಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆದವು.

ಸ್ಟ್ಯಾನಿ ಮೆಂಡೋನ್ಜಾ, ಜೋಸೆಫ್ ಮಥಿಯಾಸ್, ಎಲ್ಟನ್ ಪಿಂಟೋ, ಅಡ್ಲಿನ್ ಪಿಂಟೋ, ವರ್ಣ ಡಿಸೋಜಾ, ಬಿಂದು ಕುಟಿನ್ಹಾ, ಸಾಶಾ ಡಿಸೋಜಾ, ಜೋಸ್ವಿನ್ ಗಾಯಕರ ಜೊತೆ ಪಾಪನ್ ಕ್ಯಾಲಿಕಟ್ ಅವರು ತಮ್ಮ ಮೋಡಿಮಾಡುವ ಸಂಗೀತ ಮತ್ತು ಕೊಂಕಣಿ ಮಾಧುರ್ಯದ ರಸ ಮಂಜರಿಯನ್ನು ರಂಜಿಸಿದರು.

 ಹಾಸ್ಯ ಕಲಾವಿದರು ತಮ್ಮ ಹಾಸ್ಯಮಯ ನಟನೆಯಿಂದ ನಗುವ ವಾತಾವರಣವನ್ನು ಸ್ರಷ್ಟಿಸಿದರು. ದೀಪಕ್ ಬೆಂದೂರ್‌ವೆಲ್ ನೇತೃತ್ವದ ಡ್ಯಾನ್ಸ್ ಕ್ರಿಯೇಟರ್ ಅವರ ಅದ್ಭುತ ನೃತ್ಯ ಪ್ರದರ್ಶನಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದರು.

ಕೊರ್ಡೆಲ್ ಚರ್ಚ್‌ನ ಧರ್ಮಗುರು ರೆ.ಫಾ.ಕ್ಲಿಫರ್ಡ್ ಫೆರ್ನಾಂಡಿಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ರಾಯ್ ಕ್ಯಾಸ್ಟೆಲಿನೊ ಮುಖ್ಯ ಅತಿಥಿಯಾಗಿದ್ದರು ಮತ್ತು ಶ್ರೀ ಆಸ್ಟಿನ್ ಪೆರಿಸ್ (ಡಾ.ರೊನಾಲ್ಡ್ ಕೊಲಾಕೊ ಪ್ರತಿನಿಧಿ) ಶ್ರೀ ಅನಿಲ್ ಲೋಬೊ (ಅಧ್ಯಕ್ಷರು, ಎಂಸಿಸಿ ಬ್ಯಾಂಕ್), ಲೂಯಿಸ್ ಜೆ ಪಿಂಟೊ (ಅಧ್ಯಕ್ಷರು, ಮಾಂಡ್ ಸೊಭಾಣ್) ಶ್ರೀ ಜೋಸೆಫ್ ಮಥಿಯಾಸ್ (ಉದ್ಯಮಿ) ಶ್ರೀ ಪ್ರವೀಣ್ ತಾವ್ರೊ ಪ್ರತಿನಿಧಿ, ಡೈಜಿ ವರ್ಲ್ಡ್) ಶ್ರೀ ಆಲ್ಫ್ರೆಡ್ ಬೆನಿಸ್ (ಸಂಘಟಕರು), ಸ್ಟ್ಯಾನಿ ಮೆಂಡೋನ್ಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೀ ಆಲ್ಫ್ರೆಡ್ ಬೆನಿಸ್ (ಸಂಘಟಕರು), ಮತ್ತು ಸ್ಟ್ಯಾನಿ ಮೆಂಡೋನ್ಸಾ ಕೆಲರಾಯ್  ಅವರು .ಸೈಂಟ್ ಆನ್ನೆ ಚರ್ಚಿನ ಧರ್ಮಗುರು ವಂ| ಜೋಸೆಫ್ ಮಸ್ಕರೇನ್ಹಾಸ್ ಅವರಿಗೆ 5ಲಕ್ಷಗಳ ಚೆಕ್ನ್ನು ಹಸ್ತಾಂತರಿಸಿದರು.

     ರಸಮಂಜರಿಯನ್ನು ವೀಕ್ಷಕರು ಮೆಚ್ಚಿದ ಈ ಕಾರ್ಯಕ್ರಮವನ್ನು ಶ್ರೀ ಲೆಸ್ಲಿ ರೆಗೊ ಮತ್ತು ಶೆಲ್ಡನ್ ಕ್ರಾಸ್ಟಾ ಸಂಯೋಜಿಸಿದರು. ಫೆಲಿಕ್ಸ್ ಮೊರಾಸ್ ವಂದಿಸಿದರು.