ಕುಂದಾಪುರ, ಫೆ.1: ಕುಂದಾಪುರ ರೋಜರಿ ಚರ್ಚ್ ವ್ಯಾಪ್ತಿಗೆ ಒಳಪಟ್ಟ ಹೇರಿಕುದ್ರು ಸೇತುವೆ ಹತ್ತಿರದಲ್ಲಿ ಒಂದು ಬಡ ಕ್ರೈಸ್ತ ಕುಟುಂಬ ಹರಕಲು ಮುರುಕಲು ಮನೆಯಲ್ಲಿ ವಾಸಿಸುತಿತ್ತು. ಮನೆಯ ಅರ್ಧ ಗೋಡೆಗಳ, ಛಾವಣಿ ಇಲ್ಲದೆ ಪ್ಲಾಸ್ಟಿಕ್ ಹೊದಿಕೆ ಮಾತ್ರ ಇದ್ದು, ಮಣ್ಣಿನ ಜಗುಲಿಯಿದ್ದು, ಮಳೆ ಬಿಸಿಲಿನಲ್ಲಿ ಮನೆಯವರು ವಾಸಿಸುತಿದ್ದರು. ಇದು ರೋಜರಿ ಚರ್ಚಿನ ಆಡಳಿತ ಮಂಡಳಿಯ ಗಮನಕ್ಕೆ ಬಂದ ಮೇಲೆ ಇವರ ಮನೆಗೆ ಹೊಸ ರೂಪ ಕೊಡಲು ಶ್ರಮಿಸತೊಡಗಿತು. ಮೊದಲು ರೋಜರಿ ಚರ್ಚಿನ ಐ.ಸಿ.ವೈ.ಎಮ್ (ಯುವ ಸಂಘಟನೆ) ಶ್ರಮದಾನದ ಮೂಲಕ ಮನೆಯನ್ನು ನವೀಕರಿಸುವ ಕೆಲಸಕ್ಕೆ ತೊಡಗಿತು.
ಚರ್ಚಿನ ಪ್ರಧಾನ ಧರ್ಮಗುರು ವಂ|ಸ್ಟ್ಯಾನಿ ತಾವ್ರೊ ಅವರ ನಿರ್ದೇಶನದಂತೆ ಈ ಹಿಂದಿನ ಪಾಲನ ಮಂಡಳಿ ಉಪಾಧ್ಯಕ್ಷ ಎಲ್.ಜೆ.ಫೆರ್ನಾಂಡಿಸ್ ಮತ್ತು ಚರ್ಚಿನ ಹಣಕಾಸು ಸಮಿತಿ ಹಣಕಾಸನ್ನು ವ್ಯವಸ್ಥೆ ಮಾಡಿ ನವೀಕರಣಕ್ಕೆ ತೊಡಗಿ ಕೆಲಸಕ್ಕೆ ವೇಗ ಕೊಟ್ಟಿತು. ಬಡ ಬಗ್ಗರಿಗಾಗಿ ಶ್ರಮಿಸುತಿರುವ ಸಂತ ವಿಶೆಂತ್ ಪಾವ್ಲ ಸಮಿತಿ ತಮ್ಮ ನೆರವನ್ನು ನೀಡಲು ಆರಂಭಿಸಿತು. ನಂತರ ಚರ್ಚ್ ಮೂಲಕ ಸಮಾಜ ಬಾಂಧವರಲ್ಲಿ ಹಣಕಾಸಿನ ನೆರವು ಕೇಳಿತು. ಈ ವಿನಂತಿಯನ್ನು ರೋಜರಿ ಚರ್ಚಿನ ಬಾಂಧವರು ಉತ್ತಮವಾಗಿ ಸ್ಪಂದಿಸಿ ಹಣಕಾಸಿನ ನೆರವು ನೀಡಿದರು. ಈ ಉತ್ತಮ ಕಾರ್ಯಕ್ಕೆ ಕ್ರೈಸ್ತರಲ್ಲದೆ ಹಿಂದು ಬಾಂಧವರು ಸ್ಪಂದಿಸಿ ಹಣಕಾಸು ಇನ್ನಿತರ ನೆರವು ನೀಡಿ ಸಹಕರಿಸಿತು. ಅದರಂತೆ ಸುಮಾರು 4 ಲಕ್ಷದ ವೆಚ್ಚದಲ್ಲಿ ಮನೆಯನ್ನು ನಿರ್ಮಿಸಿ ಜನವರಿ 31 ರಂದು ಮನೆಯನ್ನು ವಂ|ಸ್ಟ್ಯಾನಿ ತಾವ್ರೊ ಆಶಿರ್ವದಿಸಿ ಮನೆಯವರಿಗೆ ಹಸ್ತಾಂತರಿಸಿದರು.
“ಈ ಮೊದಲು ಈ ಮನೆಯವರು ವಾಸಿಸಲು ಅಯೋಗ್ಯವಾದ ಮನೆಯಲ್ಲಿ ವಾಸಿಸುತ್ತಿದ್ದರು. ಈ ಮನೆಯಲ್ಲಿ ಪ್ರಾಯಸ್ಥೆಯಾದ ಜುಲಿಯಾನ ಡಿಆಲ್ಮೇಡಾ, ಮಗ ಅಸ್ಟಿನ್ ಇವರ ಪತ್ನಿ ಲವೀನಾ ಮತ್ತು ಚಿಕ್ಕ ಮಗಳು ವಾಸಿಸುತ್ತಿದ್ದು, ಅಸ್ಟಿನ್ ಚಿಕ್ಕ ಮನೆ ಕಟ್ಟಬೇಕೆಂದು ಅಡಿಪಾಯ ಹಾಕಿ ಅರ್ಧ ಗೋಡೆಗಳು ಮೇಲಕ್ಕೆ ಬಂದಿದ್ದವಷ್ಟೆ, ದುಡಿದು ಜೀವನ ಸಾಗಿಸುತಿದ್ದ ಅಸ್ಟಿನ್ ಬರಸಿಡಿಲನಂತೆ, ಕೆನ್ಸರ್ ಎಂಬ ಮಹಾ ಮಾರಿಗೆ ಒಳಗಾಗಿ ಸಂಕಷ್ಟಕ್ಕೆ ಸಿಲುಕಿದರು. ಚಿಕಿತ್ಸೆಗೆ ಹಣ, ಮತ್ತು ಮನೆ ನಿರ್ಮಾಣ ಮಾಡಲು ಹಣಕ್ಕೆ ಬಹಳ ಅಡಚಣೆಯಾಗಿ, ಮನೆ ಅರ್ಧದಲ್ಲೆ ನಿಂತಿತು. ಇದೀಗ ನಮ್ಮ ಬಾಂಧವರು ಮತ್ತು ಹಿಂದು ಬಾಂಧವರು ಮಾನವೀಯತೆ ಮೆರೆದು ಈ ಮನೆಯ ಯೋಜನೆ ಸಾಕಾರವಾಗಿದೆ. ದುಡಿಯವರು ಯಾರು ಇಲ್ಲದ ತರುಣ ಅಸ್ಟಿನ್‍ಗೆ ಈ ಮೊದಲೇ ಎರಡು ಮೂರು ಶಸ್ತ್ರ ಚಿಕಿತ್ಸೆ ಆಗಿದ್ದು, ಮತ್ತೊಂದು ಬಾಕಿ ಇದೆ. ಈ ಮನೆಯವರಿಗೆ ಮನೆ ಕಟ್ಟಲು ಅನೇಕರು ಸಹಾಯ ಧನ, ಮನೆಗೆ ಉಪಯೋಗಕ್ಕೆ ಬೀಳುವ ಉಪಕರಣಗಳು, ಉಚಿತ ಪೈಟಿಂಗ್ ಹೀಗೆ ಹಲಾವಾರು ಜನರ್‍ಉ ಧರ್ಮ ಭೇದವಿಲ್ಲದೆ ಸಹಕರಿಸಿದ್ದಾರೆ, ನಿಮ್ಮೆಲ್ಲರ ಸಹಕಾರದಿಂದ ಅತೀ ಶೀಘ್ರದಲ್ಲಿ ಈ ಮನೆಯ ಯೋಜನೆನ್ನು ಸಾಕಾರ ಗೊಳಿಸಿ ಹಸ್ತಾಂತರ ಮಾಡಲು ಸಹಕರಿಸಿದ, ಎಲ್ಲರಿಗೂ ಅವರು ಕ್ರತ್ಞತೆ ಸಲ್ಲಿಸಿದರು.
ಈ ಮನೆಯ ನಿರ್ಮಾಣದಲ್ಲಿ ಮೊದಲಿನಿಂದಲೂ ತೊಡಗಿಸಿಕೊಂಡ ಈ ಹಿಂದಿನ ಚರ್ಚಿನ ಉಪಾಧ್ಯಕ್ಷರಾದ ಎಲ್.ಜೆ.ಫೆರ್ನಾಂಡಿಸ್ ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಈ ಸಾಲಿನ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ ಶುಭ ಕೋರಿದರು. ಪಾಲನ ಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ, ವಾಳೆಯ ಗುರಿಕಾರ್ ಜೂಲಿಯಾನ ಮಿನೆಜೆಸ್, ದಿನಕರ ಆರ್. ಶೆಟ್ಟಿ, ಗಂಗಾದರ ಶೆಟ್ಟಿ, ಅಭಿಜಿತ್ ಪೂಜಾರಿ, ವಿಶೆಂತ್ ಪಾವ್ಲ್ ಸಮಿತಿಯ ಅಧ್ಯಕ್ಷೆ ಸೆರಾಫಿನ್ ಡಿಸಿಲ್ವಾ ಮತ್ತು ಸದಸ್ಯರು, ಐ.ಸಿ.ವೈ.ಎಮ್ ಸದಸ್ಯರು, ಇಂಜಿನಿಯರ್ ವಾಲ್ಟರ್ ಡಿಸೋಜಾ, ಎಮ್.ಸಿ.ಸಿ. ಬ್ಯಾಂಕಿನ ನಿರ್ದೇಶಕ ಕಿರಣ್ ಕ್ರಾಸ್ತಾ, ಹಿಂದಿನ ಮತ್ತು ಈ ಸಾಲಿನ ಫೈನಾನ್ಸ್ ಕಮಿಟಿಯ ಸದಸ್ಯರು, ದಾನಿಗಳು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು. ಲಯನ್ಸ್ ರೇಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು. ವಾಳೆಯ ಪ್ರತಿನಿಧಿ ಒಲಿವೀಯಾ ಫೆರ್ನಾಂಡಿಸ್ ವಂದಿಸಿದರು.