ಶ್ರೀನಿವಾಸಪುರ 1 : ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಹಾಗೂ ನನ್ನ ಗೆಲುವಿಗೆ ಸಹಕರಿಸಿದ ಎಲ್ಲರಿಗೂ ನನ್ನ ಆನಂತ ಕೋಟಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಸೋಮವಾರ ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ಕೃತಜ್ಞತಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾನು ನನ್ನ ಜೀವನದಲ್ಲಿ ಎಂದಿಗೂ ದ್ವೇಷದ ರಾಜಕಾರಣ ಮಾಡುವುದಿಲ್ಲ. ನಾನು ದಿನದ 24 ಗಂಟೆಗಳಲ್ಲಿಯೂ ನಿಮ್ಮ ಸಂಪರ್ಕದಲ್ಲಿರುತ್ತೇನೆ. ಎಲ್ಲಾ ಸಮುದಾಯದವರ ಕಷ್ಟ ಸುಖಗಳಿಗೆ ಸ್ಪಂದಿಸಿ ಈ ಕ್ಷೇತ್ರದ ಜನರೊಂದಿಗೆ ಉತ್ತಮ ಬಾಂದವ್ಯವನ್ನು ಬೆಳಸಿಕೊಳ್ಳುವ ಜೊತೆಗೆ ಈ ಕ್ಷೇತ್ರವನ್ನು ಒಂದು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದರು.
ಯಲ್ದೂರಿನಲ್ಲಿ ಕೆಇಬಿ ಸರ್ಕಾರಿ ಶಾಲೆ, ಅಸ್ವತ್ರೆ ಹೀಗೆ ಅನೇಕ ಅಭಿವೃದ್ದಿ ಕೆಲಸಗಳು ನನ್ನ ಅವಧಿಯಲ್ಲಿ ಆಗಿದ್ದು ಮುಂದಿನ ದಿನಗಳಲ್ಲಿ ಬಹಳ ಅಭಿವೃದ್ದಿಯತ್ತ ಯಲ್ದೂರು ಗ್ರಾಮ ಸಾಗುತ್ತದೆ. ಎಲ್ಲಾ ಗ್ರಾಮಗಳಿಗೂ ಮೂಲಭೂತ ಸೌಲಭ್ಯಗಳಿಗೆ ನನ್ನ ಮೊದಲ ಆಧ್ಯತೆ ನೀಡುತ್ತೇನೆ. ನಿಮ್ಮ ಎಲ್ಲರ ಆಶೀರ್ವಾದದಿಂದ ಅತಿ ಹೆಚ್ಚು ಮತಗಳನ್ನು ನೀಡಿ ನನ್ನನ್ನು ಗೆಲ್ಲಿಸಿದ್ದೀರಿ ರಾಜ್ಯದಲ್ಲಿ ಯಾವುದೇ ಸರ್ಕಾರವಿರಲಿ ಅನುಧಾನವನ್ನು ತಂದು ಕೆಲಸ ಮಾಡುವ ಜವಾಬ್ದಾರಿ ನನ್ನದು ಎಲ್ಲಾ ಶಾಸಕರು ನನ್ನ ಮಿತ್ರರುರಾಗಿದ್ದಾರೆ. ಎಲ್ಲರೂ ವಿಶ್ವಾಸವನ್ನು ಗೆಲ್ಲಿಸಿ ಕೋಟ್ಯಾಂತರ ರೂಗಳನ್ನು ಅನುದಾನ ತಂದು ಈ ಕ್ಷೇತ್ರವನ್ನು ಅಭಿವೃದ್ದಿ ಮಾಡುತ್ತೇನೆ. ನಿಮಗೆ ಕೊಟ್ಟ ಭರವಸೆ ನಾನು ಉಳಿಸಿಕೊಳ್ಳುತ್ತೇನೆ. ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಈ ಕ್ಷೇತ್ರದ ಕಟ್ಟೆಕಡೆಯ ವ್ಯಕ್ತಿಗೂ ತಲುಪಿಸುತ್ತೇನೆ. ಕ್ಷೇತ್ರದಲ್ಲಿ ಹಂತ ಹಂvವಾಗಿ ಎಲ್ಲಾ ಕೆಲಸಗಳನ್ನು ಮಾಡುತ್ತೇನೆಂದರು.
ಇದೇ ವೇಳೆಯಲ್ಲಿ ಯಲ್ದೂರು ಕ್ಷೇತ್ರಕ್ಕೆ ಅಗಮಿಸಿದ ಶಾಸಕ ಜಿ..ಕೆ. ವೆಂಕಟಶಿವಾರೆಡ್ಡಿ ರವರನ್ನು ಅದ್ದೂರಿಯಾಗಿ ಪಟಾಕಿಗಳನ್ನು ಸಿಡಿಸಿ ಹೂ ಮಾಲೆಗಳನ್ನು ಹಾಕುತ್ತಾ ಬರಮಾಡಿಕೊಂಡರು.
ತಾಲ್ಲೂಕಿನ ಸೋಮಯಾಜಲಹಳ್ಳಿ, ರೋಣೂರು, ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ವೆಂಕಟಶಿವಾರೆಡ್ಡಿ ಪ್ರೀತಿ ಮತ್ತು ಸಹೋದರತ್ವದಿಂದ ಹೋರಾಡಿ ಗೆದ್ದಿದ್ದೇವೆ.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಇಂದಿರಾ ಭವನ್ ರಾಜಣ್ಣ, ತೂಪಲ್ಲಿ ಆರ್ ನಾರಾಯಣಸ್ವಾಮಿ. ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಗೊಟ್ಟಕುಂಟೆ ಕೃಷ್ಣಾರೆಡ್ಡಿ,ಹಿರಿಯ ಮುಖಂಡರಾದ ಶೇಷಾಪುರ ಗೋಪಾಲ್ ಲಕ್ಷ್ಮೀಸಾಗರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜುನಾಥ್, ಮಾಜಿ ಅಧ್ಯಕ್ಷ ವಿನೋದ್ಗೌಡ, ಕೊಳತೂರು ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಎನ್. ನಾರಾಯಣಗೌಡ, ಎನ್. ವೆಂಕಟೇಶ್, ಮುಖಂಡರಾದ ವಕೀಲ ಆಚಂಪಲ್ಲಿ ಜಯರಾಮೇಗೌಡ, ಮಣಿ, ಉಪ್ಪಕುಂಟೆ ಚಂಗಪ್ಪ, ಮಂಜಲನಗರ ವಿ. ಚಂದ್ರಪ್ಪ, ಚಿಂತಮಾಕನಹಳ್ಳಿ ಕೃಷ್ಣಪ್ಪ, ಇನ್ನೂ ಹಲವಾರು ಮುಖಂಡರು ಹಾಗೂ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.