ಪ್ಯಾಲೇಸ್ಟಿನಿಯನ್ ಪರ ಹಮಾಸ್ ದಂಡು ಇಸ್ರೇಲ್ನೊಂದಿಗೆ ತಾತ್ಕಾಲಿಕ ಕದನ ವಿರಾಮವನ್ನು ಘೋಷಿಸಿದೆ. ನಾಲ್ಕು ದಿನಗಳ ಕಾಲ ಘೋಷಿಸಲ್ಪಟ್ಟ ಕದನ ವಿರಾಮವು ಕತಾರ್ ಮತ್ತು ಈಜಿಪ್ಟ್ ವತಿಯಿಂದ ನಡೆದ ಸಂಕೀರ್ಣವಾದ ಮಾತುಕತೆಗಳ ನಂತರ ಘೋಷಿಸಲ್ಪಟ್ಟಿದೆ.
ಒಪ್ಪಂದದ ನಿಯಮಗಳು ಗಾಜಾ ಪಟ್ಟಿಯಲ್ಲಿ ಇಸ್ರೇಲಿ ಪಡೆಗಳ ಎಲ್ಲಾ ಮಿಲಿಟರಿ ಕ್ರಮಗಳನ್ನು ನಿಲ್ಲಿಸುವುದು. ಮಾನವೀಯ ನೆರವು ಪ್ರವೇಶ, ಬಂಧಿತ ಮಹಿಳೆಯರನ್ನು ಮತ್ತು ಮಕ್ಕಳನ್ನು ಬಿಡುಗಡೆ ಮಾಡುವುದು. ಇಸ್ರೇಲಿ ವಾಯು ಸಂಚಾರದ ಮೇಲಿನ ನಿರ್ಬಂಧಗಳನ್ನು ಒಳಗೊಂಡಿದೆ. ಕದನ ವಿರಾಮವು ಗಾಜಾದ ಜನರಿಗೆ ಪರಿಹಾರವನ್ನು ಒದಗಿಸುವ ಗುರಿಯನ್ನು ಹೊಂದಿದೆ.ಅಗತ್ಯ ಸಾಮಗ್ರಿಗಳ ವಿತರಣೆಯನ್ನು ಈ ಮೂಲಕ ಅನುಮತಿಸುತ್ತದೆ. ಅದರೊಂದಿಗೆ ತಕ್ಷಣದಲ್ಲಿ ಗಾಝಾ ಪ್ರದೇಶದಲ್ಲಿ ತಲೆದೋರಿರುವ ಮಾನವೀಯ ಬಿಕ್ಕಟ್ಟನ್ನು ಸ್ವಲ್ಪ ಮಟ್ಟಿಗೆ ಪರಿಹರಿಸಲಿದೆ.
ಒಪ್ಪಂದದ ಪ್ರಮುಖ ಅಂಶಗಳು:
1. ಎರಡೂ ಕಡೆಗಳಲ್ಲಿ ಕದನ ವಿರಾಮ, ಗಾಜಾದಲ್ಲಿ ಇಸ್ರೇಲಿ ಪಡೆಗಳ ಎಲ್ಲಾ ಮಿಲಿಟರಿ ಕ್ರಮಗಳನ್ನು ನಿಲ್ಲಿಸುವುದು.
2. ಗಾಜಾ ಪಟ್ಟಿಯ ಎಲ್ಲಾ ಪ್ರದೇಶಗಳಿಗೆ ಮಾನವೀಯ ಪರಿಹಾರ, ವೈದ್ಯಕೀಯ ಮತ್ತು ಇಂಧನ ಸಹಾಯದ ಪ್ರವೇಶ.
3. ಇಸ್ರೇಲಿ ಜೈಲುಗಳಿಂದ 150 ಪ್ಯಾಲೇಸ್ಟಿನಿಯನ್ ಮಹಿಳೆಯರು ಮತ್ತು ಮಕ್ಕಳ ಬಂಧಿತರ ಬಿಡುಗಡೆಯ ಬದಲಾಗಿ 50 ಬಂಧಿತ ಇಸ್ರೇಲಿ ಮಹಿಳೆಯರು ಮತ್ತು ಮಕ್ಕಳ ಬಿಡುಗಡೆ ಮಾಡುವುದು.
4. ಗಾಜಾದ ದಕ್ಷಿಣ ಮತ್ತು ಉತ್ತರ ಎರಡರಲ್ಲೂ ಇಸ್ರೇಲಿ ವಾಯು ಸಂಚಾರದ ಮೇಲೆ ತಾತ್ಕಾಲಿಕ ನಿರ್ಬಂಧಗಳು.
5. ಕದನ ವಿರಾಮದ ಸಮಯದಲ್ಲಿ ಗಾಜಾದಲ್ಲಿ ಯಾರ ಮೇಲೂ ದಾಳಿ ಮಾಡಬಾರದು ಅಥವಾ ಬಂಧಿಸಬಾರದು ಎಂದು ಇಸ್ರೇಲ್ನಿಂದ ಬದ್ಧತೆ.
6. ಉತ್ತರದಿಂದ ದಕ್ಷಿಣಕ್ಕೆ ಸಲಾಹ್ ಎಲ್-ದಿನ್ ಸ್ಟ್ರೀಟ್ನಲ್ಲಿ ಜನರಿಗೆ ಚಲನೆಯ ಸ್ವಾತಂತ್ರ್ಯವನ್ನು ಖಾತರಿಪಡಿಸುವುದು.
ಕದನ ವಿರಾಮದ ಹೊರತಾಗಿಯೂ ತಮ್ಮ ಪಡೆಗಳು ಜಾಗರೂಕವಾಗಿರುತ್ತವೆ. ಯಾವುದೇ ದಾಳಿಗೆ ಪ್ರತಿಕ್ರಿಯಿಸಲು ಸಿದ್ಧವಾಗಿರುತ್ತವೆ ಎಂದು ಹಮಾಸ್ ಈ ಸಂದರ್ಭದಲ್ಲಿ ತಿಳಿಸಿದೆ.