ಶ್ರೀನಿವಾಸಪುರ : ದೇವಾಲಯಗಳು ಮನುಷ್ಯನ ಜೀವನಕ್ಕೆ ದಾರಿದೀಪವಾಗಿದ್ದು, ದೇವರ ಆರಾಧನೆಯಿಂದ ನೆಮ್ಮದಿಯ ಬದುಕು ಪ್ರಾಪ್ತಿಯಾಗುತ್ತದೆ ಎಂದು ಗ್ರಾಮದ ಮುಖಂಡ ತೂಪಲ್ಲಿ ಮಧುಸೂದನರೆಡ್ಡಿ ಹೇಳಿದರು.
ಶ್ರೀನಿವಾಸಪುರ ತಾಲೂಕಿನ ನೆಲವಂಕಿ ಹೋಬಳಿ ತೂಪಲ್ಲಿ ಗ್ರಾಮದಲ್ಲಿ ನಡೆದ ಶ್ರೀ ಕೋದಂಡರಾಮಸ್ವಾಮಿ ದೇವಾಲಯದ ವಾರ್ಷಿಕೋತ್ಸವ ಹಾಗು ಲೋಕಾಕಲ್ಯಾಣರ್ಥವಾಗಿ ಕಲ್ಯಾಣೋತ್ಸವ, ರಾಮಕೋಟಿ ಕಾರ್ಯಕ್ರಮಗಳ ಅಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮದ ಶ್ರೀಕೋದಂಡರಾಮಸ್ವಾಮಿ ದೇವಾಲಯವು ಪುರತಾನವಾಗಿದ್ದು , ಕಳೆದ ಎರಡು ವರ್ಷಗಳಿಂದ ಪುನಃಪ್ರತಿಷ್ಟಾಪಿಸಲಾಗಿದ್ದು, ದೇವಾಲಯಕ್ಕೆ ಉತ್ಸವ ಮೂರ್ತಿಗಳನ್ನು ತಂದು ಅವುಗಳಿಗೆ ವಿಶೇಷ ಪೂಜೆಗಳನ್ನು ಮಾಡಿ ನಂತರ ಕಲ್ಯಾಣೋತ್ಸವವನ್ನು ಹಾಗು ಲೋಕಕಲ್ಯಾಣರ್ಥವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದೇವರ ನಮ್ಮ ನಾಡಿನ ಜನತೆಗೆ ಸಕಾಲದಲ್ಲಿ ಮಳೆ ಬೆಳೆಯಾಗಿ ನೆಮ್ಮದಿ ಜೀವನ ನಡೆಸಿಕೊಂಡು ಹೋಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಲಾಗಿದೆ ಎಂದರು.
ಪೂಜಾ ಕಾರ್ಯಕ್ರಮಗಳನ್ನು ಗನಿಬಂಡೆ ವೈ.ಆರ್.ಶ್ರೀನಾಥಾಚಾರಿ ನಡೆಸಿಕೊಟ್ಟರು. ರಾಮಕೋಟಿಯನ್ನು ಪಾಂಡುರಂಗ ಜಾನಪದ ಮತ್ತು ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ ತೂಪಲ್ಲಿ ಬಸವರಾಜ್ ನೇತೃತ್ವದಲ್ಲಿ ರಾಮಕೋಟಿ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಯಿತು.
ಗ್ರಾಮದ ಮುಖಂಡರಾದ ರಾಮರೆಡ್ಡಿ, ನರೇಂದ್ರಕುಮಾರ್, ಶ್ರೀನಿವಾಸರೆಡ್ಡಿ, ಜಯರಾಮರೆಡ್ಡಿ, ಎಂ.ಶೋಭಾ, ಅಶೋಕ್ ಹಾಗೂ ಗ್ರಾಮಸ್ಥರು ಇದ್ದರು.