

ಶ್ರೀನಿವಾಸಪುರ : ತಾಲೂಕಿನ ಗೌನಿಪಲ್ಲಿ ಗ್ರಾಮದ ಶ್ರೀರಾಮಪ್ಪ ಎಂಬುವವರ ಗೋದಾಮಿನಲ್ಲಿ ಆಕ್ರಮವಾಗಿ ಸಂಗ್ರಹಿಸಲಾಗಿದ್ದ ಪಟಾಕಿಗಳನ್ನು ಭಾನುವಾರ ತಹಶೀಲ್ದಾರ್ ಜಿ.ಎನ್.ಸುದೀಂದ್ರ ವಶಕ್ಕೆ ಪಡೆದುಕೊಂಡಿದ್ದಾರೆ.
ಶ್ರೀರಾಮಪ್ಪ ಎಂಬುವವರು ದೀಪಾವಳಿ ಹಬ್ಬದ ಪ್ರಯುಕ್ತ ಚೀಟಿ ಹಾಕಿದ ಗ್ರಾಹಕರಿಗೆ ಪಟಾಕಿ ನೀಡಲು 100 ಬಾಕ್ಸ್ಗಳ ಗೋಡನ್ ನಲ್ಲಿ ಆಕ್ರಮವಾಗಿ ಇರಿಸಿದ್ದರು . ಖಚಿತ ಮಾಹಿತಿಯ ಮೇರೆಗೆ ಗೋಡನ್ ಮೇಲೆ ದಾಳಿ ನಡೆಸಿ ಅಕ್ರವಾಗಿ ಇರಿಸಿದ್ದ ಪಟಾಕಿ ಬಾಕ್ಸ್ಗಳನ್ನು ಪೋಲಿಸ್ ವಶಕ್ಕೆ ನೀಡಲಾಗಿದೆ ಎಂದು ತಹಶೀಲ್ದಾರ್ ಜಿ.ಎನ್.ಸುದೀಂದ್ರ ಮಾಹಿತಿ ನೀಡಿದರು.