ಶ್ರೀನಿವಾಸಪುರ 1 : ನಿನ್ನೆಯಷ್ಟೆ (ಬುಧವಾರ) ಎಂಜಿರಸ್ತೆ ಬದಿಗಳಲ್ಲಿ ಅವರೇಕಾಯಿ ವ್ಯಾಪಾರ ವಹಿವಾಟು ಮಾಡದೆ, ಕೃಷಿ ಮಾರುಕಟ್ಟೆಯಲ್ಲಿ ಮಾಡುವಂತೆ ಎಚ್ಚರಿಕೆ ನೀಡಿದ್ದರೂ ಸಹ ಪುನಃ ಎಂಜಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವುದು ಸರಿಯಲ್ಲ ಎಂದು ತಹಶೀಲ್ದಾರ್ ಜಿ.ಎನ್.ಸುದೀಂದ್ರ ವ್ಯಾಪಾರಿಗಳ ವಿರುದ್ಧ ಗರಂ ಆಗಿ ರೇಗಾಡಿದರು.
ಪಟ್ಟಣದ ಎಂಜಿ ರಸ್ತೆಯಲ್ಲಿ ಗುರುವಾರ ಅವರೆಕಾಯಿ ವ್ಯಾಪಾರ ವಹಿವಾಟನ್ನು ಮಾಡುತ್ತಿದ್ದ ವ್ಯಾಪಾರಿಗಳಿಗೆ ಪುನಃ ಎಚ್ಚರಿಕೆ ಕೊಟ್ಟು ಮಾತನಾಡಿದರು.
ವ್ಯಾಪಾರಿಗಳು ಸಂಕ್ರಾತಿ ಹಬ್ಬದ ವರೆಗೂ ನಮಗೆ ಇಲ್ಲಿ ವ್ಯಾಪಾರ ವಹಿವಾಟು ಮಾಡಲು ಅವಕಾಶ ಕೊಡಿ ಎಂದು ಮನವಿ ಮಾಡಿದರು. ಆಗ ರಸ್ತೆಯಲ್ಲಿ ಲೈನ್ಒಳಗೆ ವ್ಯಾಪಾರ ವಹಿವಾಟು ಮಾಡಿಕೊಳ್ಳಿ ಎಂದು ಸೂಚಿಸಿದರು .
ಯಾವುದೇ ಕಾರಣಕ್ಕೂ ಲೈನ್ ಹೊರಗಡೆ ವ್ಯಾಪಾರ ವಹಿವಾಟು ಮಾಡುವಂತಿಲ್ಲ. ನೀವು ನನ್ನ ಸೂಚನೆಯನ್ನು ಮೀರಿದರೆ ನಾನು ಕಾನೂನು ರೀತ್ಯ ಕ್ರಮಕ್ಕೆ ಮುಂದಾಗುತ್ತೇನೆ ಎಂದು ಎಚ್ಚರಿಸಿದರು. ವ್ಯಾಪಾರಿಯೊಬ್ಬರು ಎರಡು ದಿನಗಳ ಅವಕಾಶ ಕೇಳಿದಾಗ , ಇಲ್ಲ ಎರಡು ಗಂಟೆಗಳ ಕಾಲವೂ ಅವಕಾಶ ನೀಡುವುದಿಲ್ಲ ಎಂದರು. ನನ್ನ ಪ್ರಕಾರವಾಗಿ ನಡೆದುಕೊಂಡರೆ ಸರಿ ಇಲ್ಲವಾದರೇ ನಿಮ್ಮ ವಿರುದ್ಧ ಕಾನೂನು ರೀತ್ಯ ಕ್ರಮಕೈಗೊಳ್ಳುತ್ತೇನೆ ಎಂದು ಎಚ್ಚರಿಸಿದರು. ನಾನೊಬ್ಬ ಸಾರ್ವಜನಿಕರ ಅಧಿಕಾರಿ ಸಾರ್ವಜನಿಕರಿಗೆ ಅನುಕೂಲ ಮಾಡುವುದೇ ನನ್ನ ಕರ್ತವ್ಯ ಎಂದರು.
ಸಾರ್ವಜನಿಕರೊಬ್ಬರ ದೂರಿನ್ವಯ ಸ್ಥಳಕ್ಕೆ ಬೇಟಿ ನೀಡಿರುವುದಾಗಿ ತಿಳಿಸಿದಾಗ ಅಲ್ಲಿಯೇ ಇದ್ದ ಸಾರ್ವಜನಿಕರೊಬ್ಬರು ತಹಶೀಲ್ದಾರ್ ರವರೊಂದಿಗೆ ಮಾತನಾಡುತ್ತಾ, ನಿನ್ನೆಯಷ್ಟೆ ಈ ಭಾಗದಲ್ಲಿ ಮಗುವಿಗೆ ಅಪಘಾತವಾಗಿದ್ದು, ಅವರಿಗೆ ಯಾರು ಆಗುತ್ತಾರೆ ಎಂದು ಪ್ರಶ್ನಿಸಿದರು ?
ಕೃಷಿ ಮಾರುಕಟ್ಟೆಯಲ್ಲಿ ಸ್ಥಳಾವಕಾಶ ನೀಡಲಿದ್ದು, ಅಲ್ಲಿ ನಿಮ್ಮ ವ್ಯಾಪಾರ ವಹಿವಾಟು ಮಾಡಿಕೊಳ್ಳಿ ಎಂದು ಸೂಚಿಸಿದರು.
ಆರ್ಐ ಮುನಿರೆಡ್ಡಿ, ಎಎಸ್ಐಗಳಾದ ನಂಜುಂಡಪ್ಪ, ರವೀಂದ್ರನಾಥ್, ಸಿಬ್ಬಂದಿಗಳಾದ ಆನಂದ್, ಸಂಪತ್ತು, ಶ್ರೀನಾಥ್ ಇದ್ದರು.