ಕೃಷಿ ವಿಜ್ಞಾನ ಕೇಂದ್ರದಿಂದ ತಾಂತ್ರಿಕತೆ ಹಸ್ತಾಂತರ ಸಮಾರಂಭ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ


ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ, ಟಮಕ ಕೋಲಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ಚಿಕ್ಕಣ್ಣ ಜಿ.ಎಸ್, ವಿಜ್ಞಾನಿ (ಗೃಹ ವಿಜ್ಞಾನ) ರವರು ಸಂಶೋಧನೆ ಮಾಡಿರುವ “ಕಬ್ಬಿಣಾಂಶಭರಿತ ಸಿರಿಧಾನ್ಯದ ಆರೋಗ್ಯ ಪೇಯ’ದ ತಾಂತ್ರಿಕತೆಯನ್ನು ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಡಾ. ಕೆ.ಎಂ. ಇಂದಿರೇಶ್ ರವರು, ಶ್ರೀಮತಿ ರತ್ನಮ್ಮ, ವ್ಯವಸ್ಥಾಪಕರು, ವೇದಿಕ್ ಎಂಟರ್‍ಪೈಜಸ್‍ರವರಿಗೆ ತಾಂತ್ರಿಕತೆಯನ್ನು ಹಸ್ತಾಂತರಿಸಿದರು.
ಈ ಆರೋಗ್ಯ ಪೇಯವನ್ನು ಸಿರಿಧಾನ್ಯವಾದ ಸಾಮೆ, ನೆಲ್ಲಿಕಾಯಿ ಪುಡಿ, ದ್ವಿದಳ ಧಾನ್ಯಗಳು ಮತ್ತು ಡ್ರೈಫ್ರೂಟ್ಸ್‍ಗಳನ್ನು ಬೆರೆಸಿ ತಯಾರಿಸಿದ್ದು, ಇದು ರೋಗನಿರೋಧಕ ಶಕ್ತಿ ಮತ್ತು ಕಬ್ಬಿಣಾಂಶವನ್ನು ಹೆಚ್ಚಿಸಲು ಹಾಗೂ ಅನಿಮಿಯವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಇದನ್ನು ಎಲ್ಲ ವಯಸ್ಸಿನವರು ಉಪಯೋಗಿಸಬಹುದಾಗಿದೆ. ಒಂದು ಚಮಚ (25 ಗ್ರಾಂ) 300 ಮಿ.ಲೀ. ಹಾಲು ಅಥವಾ ನೀರಿನಲ್ಲಿ ಬೆರೆಸಿ ಕುಡಿಯಬಹುದು. ಈ ಆರೋಗ್ಯ ಪೇಯವನ್ನು ಮಾನ್ಯ ಜಿಲ್ಲಾಧಿಕಾರಿಗಳ ಅನುಮತಿಯೊಂದಿಗೆ ಅಂಗನವಾಡಿಗಳಿಗೆ ವಿತರಿಸಲು ಕೋರಲಾಗಿದೆ.
ಸಮಾರಂಭದಲ್ಲಿ ಡಾ. ಎಸ್.ಐ. ಅಥಣಿ, ವಿಸ್ತರಣಾ ನಿರ್ದೇಶಕರು, ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ, ಬಾಗಲಕೋಟೆ, ಡಾ. ಟಿ.ಬಿ. ಬಸವರಾಜ, ಸಹ ವಿಸ್ತರಣಾ ನಿರ್ದೇಶಕರು (ದಕ್ಷಿಣ), ತೋ.ಮ.ವಿ, ಕೋಲಾರ, ಡಾ. ಬಿ.ಜಿ. ಪ್ರಕಾಶ್, ಡೀನ್, ತೋ.ಮ.ವಿ, ಕೋಲಾರ, ಕೆ. ತುಳಸಿರಾಮ್, ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು, ಡಾ. ಚಿಕ್ಕಣ್ಣ ಜಿ.ಎಸ್, ವಿಜ್ಞಾನಿ (ಗೃಹ ವಿಜ್ಞಾನ) ಹಾಗೂ ಇನ್ನೀತರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಉಪಸ್ಥಿತರಿದ್ದರು.