JANANUDI.COM NETWORK
ಮೂಡುಬೆಳ್ಳೆ: ಶಿಕ್ಷಕರು ಮಕ್ಕಳ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಾರೆ. ಒಂದು ಮಗುವನ್ನು ಮಾನವನನ್ನಾಗಿ ಮಾಡುವ ಸಂಪೂರ್ಣ ಜವಾಬ್ದಾರಿ ಶಿಕ್ಷಕರಿಗೆ ಇದೆ .ಪ್ರತಿಯೊಂದು ಮಗುವಿನ ಸಾಮರ್ಥ್ಯವನ್ನು ಅರಿತು ಮಗುವಿನ ಬೆಳವಣಿಗೆಗೆ ಪೂರಕ ವಾತಾವರಣವನ್ನು ನಿರ್ಮಿಸುವುದು ಶಿಕ್ಷಕರ ಮಹತ್ತರ ಜವಾಬ್ದಾರಿಯಾಗಿದೆ ಎಂದು ಮೂಡುಬೆಳ್ಳೆ ಸಂತ ಲಾರೆನ್ಸ್ ಸಮಾ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂದನೀಯ ಜಾರ್ಜ್ ಡಿಸೋಜಾ ಹೇಳಿದರು . ಅವರು ಮೂಡುಬೆಳ್ಳೆ ಸಂತ ಲಾರೆನ್ಸ್ ಸಮೂಹ ಶಿಕ್ಷಣಸಂಸ್ಥೆಗಳ ಶಿಕ್ಷಕರ ದಿನಾಚರಣೆ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು .ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಜೆರಾಲ್ಡ್ ಫೆರ್ನಾಂಡಿಸ್ ಹಳೆ ವಿದ್ಯಾರ್ಥಿ ಸಂಘದ ಸ್ಥಾಪಕ ಅಧ್ಯಕ್ಷರಾದ ದೇವದಾಸ್ ಹೆಬ್ಬಾರ್ ಮೂಡುಬೆಳ್ಳೆ ಲಯನ್ಸ್ ಕ್ಲಬ್ ಅಧ್ಯಕ್ಷರಾದ ವಲೇರಿಯನ್ ನರೋನ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಲಕ್ಷ್ಮೀನಾರಾಯಣ ಭಟ್ ಹಾಗೂ ಪ್ರೆಸಿಲ್ಲಾ ರೊಡ್ರಿಗಸ್ ಇವರನ್ನು ಅಭಿನಂದಿಸಲಾಯಿತು .ಸಭಾಕಾರ್ಯಕ್ರಮದಲ್ಲಿ ಆಂಗ್ಲಭಾಷಾ ವಿಭಾಗದ ಪ್ರಾಂಶುಪಾಲರಾದ ಬ್ರದರ್ ಫೀಲಿಪ್ ನೊರೊನ್ಹಾ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಿಕ್ಷಕ ಶಿಕ್ಷಕೇತರ ವೃಂದದವರಿಗೆ ಅಭಿನಂದನೆ ಸಲ್ಲಿಸಲಾಯಿತು. ವಿದ್ಯಾರ್ಥಿಗಳ ಪರವಾಗಿ ಕುಮಾರಿ ಲಿಜ಼್ವಿಟಾ ಮತ್ತು ಕಾರ್ತಿಕ್ ಶಿಕ್ಷಕರ ದಿನಾಚರಣೆಯ ಮಹತ್ವದ ಕುರಿತು ಮಾತನಾಡಿದರು. ಪ್ರಾಂಶುಪಾಲರಾದ ಎಡ್ವರ್ಡ್ ಲಾರ್ಸನ್ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿದರು .ಶ್ರೀಮತಿ ಸುನೀತಾ ಕಾಮತ್ ಅತಿಥಿ ಪರಿಚಯ ಮಾಡಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಎಲಿಯಾಸ್ ಡಿಸೋಜ ಸ್ವಾಗತಿಸಿ , ಶ್ರೀ ಚಾಲ್ಸ್ ಕ್ವಾಡ್ರಸ್ ವಂದಿಸಿದರು .ಶ್ರೀಮತಿ ಸುಜಾತ ಸುವರ್ಣ ಕಾರ್ಯಕ್ರಮ ನಿರೂಪಿಸಿದರು ಸ್ವಾತಂತ್ರೋತ್ಸವದ ಸ್ಪರ್ಧೆಗಳ ವಿಜೇತರ ಹೆಸರನ್ನು ಸಂಖ್ಯಾಶಾಸ್ತ್ರ ಉಪನ್ಯಾಸಕರಾದ ಶ್ರೀ ಶ್ರೀನಾಥ್ ರವರು ವಾಚಿಸಿದರು .ಸಭಾ ಕಾರ್ಯಕ್ರಮದ ನಂತರ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ರಕ್ಷಕ ಶಿಕ್ಷಕ ಸಂಘ ಹಳೆವಿದ್ಯಾರ್ಥಿ ಸಂಘ ಮತ್ತು ಲಯನ್ಸ್ ಕ್ಲಬ್ ಮೂಡುಬೆಲ್ಲೆ ಇವರ ಸಹಯೋಗದೊಂದಿಗೆ ಆಯೋಜಿಸಲಾಯಿತು. ಕಾರ್ಯಕ್ರಮಕ್ಕೆ ಊಟೋಪಚಾರದ ವ್ಯವಸ್ಥೆ ಮಾಡಿದ ಎಲಿಯಾಸ್ ಡಿಸೋಜ ,ಉಡುಗೊರೆಗಳನ್ನು ಪ್ರಾಯೋಜಿಸಿದ ಡೆನಿಸ್ ಮಾರ್ಟಿಸ್ ,ಬಹುಮಾನಗಳ ಪ್ರಾಯೋಜಕರಾದ ಶ್ರೀಮತಿ ಸುಜಾತ ಸುವರ್ಣ, ಸ್ಪರ್ಧೆಗಳ ಸಂಯೋಜಕರಾದ ಶ್ರೀ ಮ್ಯಾಕ್ಸಿಮ್ ಡೇಸಾ ಇವರನ್ನು ಹೂ ನೀಡಿ ಗೌರವಿಸಲಾಯಿತು.