

“ಬದುಕಿನಲ್ಲಿ ಗುರುಗಳ ಪಾತ್ರ ಅತ್ಯಂತ ಮಹತ್ವವಾದುದು, ಭವ್ಯ ಭವಿಷ್ಯದ ಭದ್ರಬುನಾದಿ ಇಕ್ಕುವ ಶಿಕ್ಷಕ ವೃತ್ತಿ ಇತರ ವೃತ್ತಿಗಳಿಗಿಂತ ಪಾವನವಾದುದ’ ಎಂದು. ಸಾಹಿತಿಹಾಗೂ ಮಾಜಿ ಸಿಂಡಿಕೇಟ್. ಸದಸ್ಯ ಡಾ| ಸೈಯದ್ ಜಮೀರುಲ್ಲಾ ಶರೀಫ್ ಅವರು
ಹೇಳಿದರು. ಡೆಕ್ಕನ್ ವೆಲ್ಫೇರ್ ಅಸೋಸಿಯೇಶನ್ (ರಿ.) ಭಟ್ಕಳ ಇದರ ಆಶ್ರಯದಲ್ಲಿ ಜರಗಿದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಅಕಾಡೆಮಿ ಆಫ್ ಎಜ್ಯುಕೇಶನಲ್‌ಡೆವಲಫ್‌ಮೆಂಟ್ ಟ್ರಸ್ಟ್ (ರಿ) ಉಡುಪಿ ಇದರ ಅಧ್ಯಕ್ಷ ಅಮ್ಜದ್ ಅಲಿ ಇಬ್ರಾಹಿಂ ಶೇಖ್ ಅವರು ಐಎಎಸ್, ಐಪಿಎಸ್, ಐಎಫ್‌ಎಸ್ ಮುಂತಾದ ಶಿಕ್ಷ ಣದ ಪರೀಕ್ಷೆಗಳನ್ನು ಎದುರಿಸುವ ಬಗ್ಗೆ ಪೂರಕವಾದ ಮಾಹಿತಿ ಹಾಗೂ ಸಲಹೆಗಳನ್ನು ನೀಡಿದರು. ಸಭೆಯ ಅಧ್ಯಕ್ಷ ಸ್ಥಾನವನ್ನು ಸಂಸ್ಥೆಯ ಉಪಾಧ್ಯಕ್ಷ ಡಾ। ನಸೀಮ್ ಅಹ್ಮದ್ ಖಾನ್ ವಹಿಸಿದ್ದರು.
“ಮುಖ್ಯ ಅತಿಥಿಗಳಾಗಿ ಆನಂದ್ ಆಶ್ರಮ್ ಪಿಯು ಕಾಲೇಜಿನ ಪ್ರಾಂಶುಪಾಲ ಸಿಸ್ಟರ್ ವಿನೂತಾ ಡಿ’ ಸೋಜಾ, ಪ್ರಧಾನ ಕಾರ್ಯದರ್ಶಿ ನಜೀರ್ ಅಹ್ಮದ್ ಶೇಖ್, ಖಜಾಂಚಿ ಇಫ್ತಿಖಾರ್, ಮೊಹಮ್ಮದ್ ಫಾರೂಖ್ ಶೇಖ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸ೦ದರ್ಭದಲ್ಲಿ ಶಿಕ್ಷಕ ಶಿಕ್ಷಕಿಯರಾದ ಐ.ಡಿ. ಖಾನ್, ಅನುರಾಧ ಹೆಬ್ಬಾರ್, ಕೆ ಮಾಲತಿ, ಸಿಸ್ಟರ್ ವಿನೂತಾ ಡಿ’ಸೋಜಾ, ಹಸೀನಾ ಬಾನು ಶೇಖ್, ಜ್ಯೋತಿ ಬಿ. ಆಚಾರಿ, ಮೊಹಮ್ಮದ್ ಇಸಾಕ್ ಖಾನ್ ಹಾಗೂ ಶಾಹಬುದ್ದೀನ್ ಶೇಖ್ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾಧ್ಯಮಿಕ ಮತ್ತು ಹಿರಿಯ ಮಾಧ್ಯಮಿಕ ಪರೀಕ್ಷೆಗಳಲ್ಲಿ ಉತ್ತೀರ್ಣ ಹೊಂದಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ನೀಡಲಾಯಿತು.
ಕಾರ್ಯದರ್ಶಿ ಖಾಜಾ ಶೇಖ್ ಕೃತಜ್ಞತೆಗಳನ್ನು ಅರ್ಪಿಸಿದರು.





