ಕುಂದಾಪುರದಲ್ಲಿ ಶಿಕ್ಷಕರ ದಿನಾಚರಣೆ – ಶಿಕ್ಷಕರು ವಿದ್ಯಾರ್ಥಿಗಳಿಗೆ ಆದರ್ಶರಾಗಬೇಕು:ಫಾ|ಸ್ಟ್ಯಾನಿ ತಾವ್ರೊ

ಕುಂದಾಪುರ, ಸೆ.5: ಕುಂದಾಪುರ ರೋಜರಿ ಚರ್ಚಿನಲ್ಲಿ ಶಿಕ್ಷಕರ ದಿನಾಚರಣೆ ನಡೆಯಿತು. ಚರ್ಚಿನಲ್ಲಿ ಶಿಕ್ಷಕರೊಂದಿಗೆ ಪವಿತ್ರ ಬಲಿದಾನವನ್ನು ಅ|ವಂ| ಸ್ಟ್ಯಾನಿ ತಾವ್ರೊ ಬಲಿದಾನವನ್ನು ಅರ್ಪಿಸಿ “ಶಿಕ್ಷಕರು ವಿದ್ಯಾರ್ಥಿಗಳಿಗೆ ಆದರ್ಶರಾಗಬೇಕು. ವಿದ್ಯಾರ್ಥಿಗಳ ಜೀವನಲ್ಲಿ ಮೌಲ್ಯಗಳನ್ನು ಕಲಿಸಿಕೊಟ್ಟು ವಿದ್ಯಾರ್ಥಿಗಳನ್ನು ಸಮಾಜದ ಗೌರವಾನ್ವಿತ ನಾಗರಿಕರನ್ನಾಗಿ ರೂಪಿಸಬೇಕೆಂದು” ಹೇಳಿದರು.

     ಚರ್ಚಿನ ವೈ.ಸಿಎಸ್. ಸಂಘಟನೆಯಿಂದ ನಡೆದ ಕಾರ್ಯಕ್ರಮದಲ್ಲಿ ಅ|ವಂ| ಸ್ಟ್ಯಾನಿ ತಾವ್ರೊ ಎಲ್ಲಾ ಶಿಕ್ಷಕರಿಗೆ ಪುಷ್ಪಗಳನ್ನು ನೀಡಿ ಗೌರವಿಸಿದರು. ಉಪಾಧ್ಯಕ್ಷರಾದ ನಿವ್ರತ್ತ ಶಿಕ್ಷಕ ಎಲ್.ಜೆ.ಫೆರ್ನಾಂಡಿಸ್ ಶುಭ ಕೋರಿದರು. ಶಿಕ್ಷಕರಾದ ಸಿಸ್ಟರ್ ಆಶಾ ಮತ್ತು ಶಿಕ್ಷಕ ಜೋನ್ ಡಿಸೋಜಾ ತಮ್ಮ ಅನುಭವಗಳನ್ನು ಹಂಚಿಕೊಂಡರು. ವೈ.ಸಿ.ಎಸ್. ಸದಸ್ಯೆ ಶೈನಾ ವಾಜ್ ಶಿಕ್ಷಕರ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಳು. ವೈ.ಸಿ.ಎಸ್.  ಸದಸ್ಯರು ಶಿಕ್ಷಕರಿಗಾಗಿ ಲಘು ಆಡೋಟಗಳನ್ನು ನಡೆಸಿ ಗಾಯನದ ಮೂಲಕ ಶುಭ ಕೋರಿದರು.

    ಕಾರ್ಯಕ್ರಮದಲ್ಲಿ ಚರ್ಚ್ ವ್ಯಾಪ್ತಿಯ ಎಲ್ಲಾ ಶಿಕ್ಷಕರಿದ್ದು ವೇದಿಕೆಯಲ್ಲಿ ಕುಂದಾಪುರ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ವಂ|ಅಶ್ವಿನ್ ಅರಾನ್ಹಾ,, ಚರ್ಚಿನ ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ವೈ.ಸಿಎಸ್. ಪ್ರೇರಕಿ ಶೈಲಾ ಡಿಆಲ್ಮೇಡಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವೈ.ಸಿಎಸ್.ಅಧ್ಯಕ್ಷ ಪ್ರಜ್ವಲ್ ಪಾಯ್ಸ್ ನಿರೂಪಿಸದರು. ರೇಚೆಲ್ ಸಿಕ್ವೇರ ವಂದಿಸಿದರು.