ಗಂಗೊಳ್ಳಿಯ ಕೊಸೆಸಾಂವ್ ಮಾತೆಯ ಚರ್ಚಿನ ಶಿಕ್ಷಣ ಆಯೋಗದ ಆಶ್ರಯದಲ್ಲಿ “ಶಿಕ್ಷಕರ ದಿನಾಚರಣೆ” ಯನ್ನು ಗಂಗೊಳ್ಳಿಯ ಸಂತ ಜೋಸೆಫ್ ವಾಜ್ ಸಭಾಂಗಣದಲ್ಲಿ ಆಚರಿಸಲಾಯಿತು.
ಗಂಗೊಳ್ಳಿ ಚರ್ಚಿನ ಧರ್ಮಗುರುಗಳಾದ ಫಾ. ತೋಮಸ್ ರೋಶನ್ ಡಿಸೋಜರವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ತ್ರಾಸಿ ಡೊನ್ ಬೊಸ್ಕೊ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಫಾ. ಮಾಕ್ಸಿಮ್ ಡಿಸೋಜ ರವರು ಮುಖ್ಯ ಅತಿಥಿಯಾಗಿ ಆಗಮಿಸಿ ಶಿಕ್ಷಕರು ಹಾಗೂ ವಿದ್ಯಾರ್ಥಿ ಗಳ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲಿ, ಇಂದಿನ ಕಾಲದ ಶಿಕ್ಷಣದ ಮಹತ್ವದ ಬಗ್ಗೆ ಮಾತನಾಡಿದರು.
ಶಿಕ್ಷಕರ ಪರವಾಗಿ ಗಂಗೊಳ್ಳಿ ಕಾರ್ಮೆಲ್ ಕಾನ್ವೆಂಟ್ ನ ಮುಖ್ಯಸ್ಥರಾದ ಸಿ| ಡಯಾನಾ ಎ. ಸಿ. ಮಾತನಾಡಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಾಯಕದಲ್ಲಿ ಶಿಕ್ಷಕರ ಶ್ರಮ ಬಹಳ ಮಹತ್ವವಹಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದಂತಹ ಫಾ. ತೋಮಸ್ ರೋಶನ್ ಡಿಸೋಜ ಮಾತನಾಡಿ ಶಿಕ್ಷಣ ನಮ್ಮ ತಂದೆ ತಾಯಿಗಳಿಂದ ಆರಂಭವಾಗುತ್ತದೆ. ನಾವೆಲ್ಲರೂ ಶಿಕ್ಷಕ ವೃತ್ತಿಯಲ್ಲಿ ವಿದ್ಯಾರ್ಥಿಗಳಾಗಿ ಕಲಿಯುವುದು ಬಹಳ ಇದೆಯೆಂದು ಸಂದೇಶ ನೀಡಿದರು.
ಗಂಗೊಳ್ಳಿ ಚರ್ಚ್ ನ ಗಾಯನ ಮಂಡಳಿ ಸದಸ್ಯರು ಶುಭಾಶಯ ಗೀತೆಯನ್ನು ಹಾಡಿದರೆ, ಶಿಕ್ಷಣ ಆಯೋಗದ ಸಂಚಾಲಕರಾದ ಶ್ರೀಮತಿ ಆನ್ನಿ ಕ್ರಾಸ್ತಾ ಹಾಗೂ 20 ಆಯೋಗದ ಸಂಯೋಜಕರಾದ ಶ್ರೀಮತಿ ರೆನಿಟಾ ಬಾರ್ನೆಸ್ ರವರ ನೇತೃತ್ವದಲ್ಲಿ ವಿವಿಧ ಸ್ಪರ್ಧೆಗಳನ್ನು ನಡೆಸಿ , ಬಹುಮಾನಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಇತ್ತೀಚೆಗೆ ನಿವೃತ್ತಿ ಹೊಂದಿದಂತಹ ಶಿಕ್ಷಕಿ ಶ್ರೀಮತಿ ಆನ್ನಿ ಕ್ರಾಸ್ತಾರವರನ್ನು ಸನ್ಮಾನಿಸಲಾಯಿತು ಹಾಗೂ ಎಲ್ಲಾ ಶಿಕ್ಷಕರನ್ನು ನೆನಪಿನ ಕಾಣಿಕೆಯೊಂದಿಗೆ ಗೌರವಿಸಲಾಯಿತು.
ಶಿಕ್ಷಣ ಆಯೋಗದ ಸದಸ್ಯರಾದ ಶ್ರೀಮತಿ ಫೆಲ್ಸಿ ಡಿಸಿಲ್ವ ಸರ್ವರನ್ನು ಸ್ವಾಗತಿಸಿದರೆ, ಶ್ರೀಮತಿ ಆನ್ನಿ ಕ್ರಾಸ್ತಾ ವಂದಿಸಿದರು. ಶಿಕ್ಷಕಿ ಶ್ರೀಮತಿ ಆಶಾ ಡಿಕೋಸ್ತಾ ಕಾರ್ಯಕ್ರಮ ನಿರೂಪಿಸಿದರು.
ವೇದಿಕೆಯಲ್ಲಿ ಗಂಗೊಳ್ಳಿ ಸ್ಟೆಲ್ಲಾ ಮಾರಿಸ್ ಹೈಸ್ಕೂಲ್ ಇದರ ಮುಖ್ಯೋಪಾಧ್ಯಾಯಿನಿ ಸಿ| ಕ್ರೆಸೆನ್ಸ್ ಎ. ಸಿ,ಚರ್ಚಿನ ಉಪಾಧ್ಯಕ್ಷರಾದ ಶ್ರೀ ಆಲ್ವಿನ್ ಕ್ರಾಸ್ತಾ, ಕಾರ್ಯದರ್ಶಿ ಶ್ರೀಮತಿ ಗ್ಲೋರಿಯಾ ಡಿಸೋಜ ಉಪಸ್ಥಿತರಿದ್ದರು.