ಮಂಗಳೂರು, ದಿನಾಂಕ 03-09-2024ರಂದು ಶಾಂತಿಕಿರಣ್ ಸಭಾಭವನ ಬಜ್ಜೋಡಿ ಮಂಗಳೂರು ಇಲ್ಲಿ 2024ನೇ ವರ್ಷದ
ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ, ಕಥೊಲಿಕ್ ಶಿಕ್ಷಣ ಮಂಡಳಿ(ರಿ) ಮಂಗಳೂರು ಇದರ ಅಧೀನದ
ಪ್ರಾಥಮಿಕ, ಪೌಢ, ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ಸೇವೆ ನೀಡಿ ನಿವೃತ್ತಿ ಹೊಂದಿದ
ಶಿಕ್ಷಕ/ಶಿಕ್ಷಕೇತರರನ್ನು, 2023-2024ರ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ./ಪಿಯುಸಿ/ ಪದವಿ ಹಾಗೂ
ಸ್ನಾತ್ತಕೋತ್ತರ ಪರೀಕ್ಷೆಗಳಲ್ಲಿ ಅಧಿಕ ಅಂಕ/ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಮತ್ತು ಶೇಕಡಾ ನೂರು ಫಲಿತಾಂಶ
ಗಳಿಸಿದ ಸಂಸ್ಥೆಗಳನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಮಂಗಳೂರು ಕಥೊಲಿಕ್ ಧರ್ಮ ಧರ್ಮಪ್ರಾಂತ್ಯದ
ಧರ್ಮಾಧ್ಯಕ್ಷರೂ ಹಾಗೂ ಕಥೊಲಿಕ್ ಶಿಕ್ಷಣ ಮಂಡಳಿ ಅಧ್ಯಕ್ಷರೂ ಆದ ಪರಮ ಪೂಜ್ಯ ಡಾ.ಪೀಟರ್ ಪೌಲ್
ಸಲ್ಡಾನ್ಹಾ ಇವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಉರ್ವ ಇಲ್ಲಿಯ ವಿದ್ಯಾರ್ಥಿಗಳು ಪ್ರಾರ್ಥನಾ
ನೃತ್ಯದೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಶಿಕ್ಷಣ ಮಂಡಳಿಯ ಕಾರ್ಯದರ್ಶಿಯಾಗಿರುವ
ವಂ.ಡಾ.ಪ್ರವೀಣ್ ಲಿಯೊ ಲಸ್ರಾದೊ ಇವರು ಸ್ವಾಗತಿಸಿದರು. ವಂ.ಜೋನ್ಸನ್ ಸಿಕ್ವೇರಾ, ಪ್ರಾಂಶುಪಾಲರು,
ಸೆಂಟ್ರಲ್ ಸ್ಕೂಲ್ ಬಿಜೈ ಇವರು ಕಳೆದ ಶೈಕ್ಷಣಿಕ ವರ್ಷದಲ್ಲಿ ನಿಧನರಾಗಿರುವ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ
ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ಸುಮಾರು 55 ನಿವೃತ್ತ ಶಿಕ್ಷಕ/ಶಿಕ್ಷಕೇತರ
ಸಿಬ್ಬಂದಿಗಳನ್ನುs ಕಾರ್ರ್ಯಕ್ರಮದ ಅಧ್ಯಕ್ಷರಾಗಿರುವ ಅತೀ ವಂ.ಪೀಟರ್ ಪೌಲ್ ಸಲ್ಡಾನ್ಹಾ, ವಂ. ಪ್ರವೀಣ್ ಲಿಯೊ
ಲಸ್ರಾದೊ, ಕಾರ್ಯದರ್ಶಿ ಇವರು 25 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ವಂ.ಸಂತೋಷ್ ರೊಡ್ರಿಗಸ್,
ನಿರ್ದೇಶಕರು, ಪಾಲನಾ ಕೇಂದ್ರದ ನಿರ್ದೇಶಕರು ನೂರು ಶೇಕಡ ಫಲಿತಾಂಶ ಪಡೆದ 31 ಪ್ರೌಢಶಾಲೆಗಳನ್ನು
ಹಾಗೂ ಎರಡು ಪದವಿಪೂರ್ವ ಕಾಲೇಜುಗಳನ್ನು ಸನ್ಮಾನಿಸಿದರು.
ಸಭಾಧ್ಯಕ್ಷರು ತಮ್ಮ ಸಂದೇಶದಲ್ಲಿ ಶಿಕ್ಷಕರ ಸೇವೆಯನ್ನು ಸ್ಮರಿಸಿ ವಂದಿಸಿದರು. ನಮ್ಮ ಜೀವನದಲ್ಲಿ ಶಿಕ್ಷಕರ
ಪ್ರಭಾವ, ಶಿಕ್ಷಕರು ಇತರರಿಗೆ ದಾರಿದೀಪ, ಪ್ರೇರಣಾಶಕ್ತಿ ಎಂಬುದಾಗಿ ಶಿಕ್ಷಕರ ಸೇವೆಯನ್ನು ಸ್ಮರಿಸಿ ವಂದಿಸಿದರು.
ವಂದನೀಯ ಜೆರೋಮ್ ಡಿಸೋಜ, ಪ್ರಾಂಶುಪಾಲರು ಸೇಕ್ರೆಡ್ ಹಾರ್ಟ್ ಪದವಿಪೂರ್ವ ಕಾಲೇಜು, ಮಡಂತ್ಯಾರು
ಹಾಗೂ ಶ್ರೀಮತಿ ಗ್ರೆಟ್ಟಾ ಕೋಸ್ಟಾ, ಮುಖ್ಯ ಶಿಕ್ಷಕಿ, ಸೈಂಟ್ ರಫಾಯಲ್ ಹಿ.ಪ್ರಾ.ಶಾಲೆ, ತೆಂಕಕಾರಂದೂರು ಇವರು
ನಿವೃತ್ತ ಶಿಕ್ಷಕರ ಪರವಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕಥೊಲಿಕ್ ಶಿಕ್ಷಣ ಮಂಡಳಿಯ ಕಛೇರಿಯಲ್ಲಿ ಕಳೆದ 25 ವರ್ಷಗಳಿಂದ ಪ್ರಾಮಾಣಿಕ ಸೇವೆ ನೀಡಿದ ಶ್ರೀಮತಿ
ನಿರ್ಮಲಾ ಪಿಂಟೊ ಹಾಗೂ ಶ್ರೀ ವಿಜಯ್ ಫೆರ್ನಾಂಡಿಸ್ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಶ್ರೀ ಅಲೋಶಿಯಸ್ ಡಿಸೋಜ, ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಂತ ಅಲೋಸಿಯಸ್ ಆಂಗ್ಲ ಮಾಧ್ಯಮ
ಶಾಲೆ, ಉರ್ವ ಇವರು ಧನ್ಯವಾದರ್ಪಣೆಗೈದರು.
ಶ್ರೀಮತಿ ಮೆಟ್ಟಿಲ್ಡಾ ಡಿಕೋಸ್ಟಾ, ಮುಖ್ಯ ಶಿಕ್ಷಕಿ, ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆ, ಕಾಸಿಯ, ಮಂಗಳೂರು
ಇವರು ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಪೆಟ್ರಿಶಿಯಾ ಲೋಬೊ, ಶ್ರೀಮತಿ ಐರಿನ್ ಸಿಕ್ವೇರಾ, ಶ್ರೀಮತಿ ತೆರೆಜಾ
ಡಿಮೆಲ್ಲೊ, ಶ್ರೀಮತಿ ಆಲಿಸ್ ಕೆಜೆ ಹಾಗೂ ಶ್ರೀಮತಿ ಗ್ರೆಟ್ಟಾ ಲೋಬೊ ಇವರು ಶಿಕ್ಷಕರ, ವಿದ್ಯಾರ್ಥಿಗಳ ಮತ್ತು
ಶಿಕ್ಷಕರ ಹಾಗೂ ಸನ್ಮಾನಿತರ ಹೆಸರುಗಳನ್ನು ವಾಚಿಸಲು ಸಹಕರಿಸಿದರು. ಬಜಪೆ ಸೈಂಟ್ ಜೊಸೆಫ್ ಪ್ರೌಢಶಾಲಾ
ವಿದ್ಯಾರ್ಥಿಗಳು ನಿವೃತ್ತ ಶಿಕ್ಷಕರಿಗೆ ವಿದಾಯಗೀತೆ ಹಾಡಿ ನಮನಗಳನ್ನು ಸಲ್ಲಿಸಿದರು.