ಗಂಗೊಳ್ಳಿ ಸ್ಟೆಲ್ಲಾ ಮಾರಿಸ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

JANANUDI.COM NETWORK

ಗಂಗೊಳ್ಳಿ ಸೆ :6 ಅಪೋಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಅಧೀನದ ಸ್ಟೆಲ್ಲಾ ಮಾರಿಸ್ ಸಮೂಹ ಶಾಲೆಗಳಲ್ಲಿ ಶಿಕ್ಷಕರ ದಿನಾಚರಣೆಯಯನ್ನು ಸಂಭ್ರಮದಿಂದ ಆಚರಿಸಲಾಯಿತು.ಭ.ಜ್ಯೋತಿ ಪ್ರಿಯಾ ಸ್ವಾಗತಿಸಿದರು,ಆದರ್ಶ್ ಶಿಕ್ಷಕ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ರವರ ಜೀವನ ಮತ್ತು ಸಾಧನೆಗಳನ್ನು ವಿಡಿಯೋ ತುಣುಕನ್ನು ಪ್ರದರ್ಶಿಸಲಾಯಿತು. ಜಂಟಿ ಕಾರ್ಯದರ್ಶಿ ಭ. ಜ್ಯೋತಿ ಸಂದೇಶಗಳನ್ನು ತಿಳಿಸಿದರು. ಶಿಕ್ಷಕರಿಗೆ ವಿವಿಧ ವಿನೋದ ಆಟಗಳನ್ನು ಆಡಿಸಲಾಯಿತು.ಕೊನೆಯಲ್ಲಿ ಸಹಭೋಜನವನ್ನು ಏರ್ಪಡಿಸಲಾಯಿತು. ಮುಖ್ಯೋಪಾಧ್ಯಾಯಿನಿರಾ ದ ಭ. ಕ್ರೆಸೆನ್ಸ್, ಭ. ಡೋರಿನ್ ಉಪಸ್ಥಿತರಿದ್ದರು. ಗಣೇಶ ಹೆಬ್ಬಾರ್ ವಂದಿಸಿದರು.