

ಕುಂದಾಪುರ (ಡಿ. 6): ಟೀಚರ್ ಟ್ರೈನಿಂಗ್ ಅಕಾಡೆಮಿ, ಕುಂದಾಪುರ ಇಲ್ಲಿನ ಪ್ರಶಿಕ್ಷಣ ವಿದ್ಯಾರ್ಥಿಗಳಿಗೆ ಹಿಂದಿ ಭಾಷಾ ಪಠ್ಯ ಮಾದರಿಗಳನ್ನು ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಮಕ್ಕಳಿಗೆ ಒದಗಿಸುವ ಕುರಿತು ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪವಿತ್ರ ಎಸ್. ಪುತ್ರನ್ ಮತ್ತು ಭಾರತಿ ಸಂತೋಷ್ ಅವರು ಪಾಲ್ಗೊಂಡು, ತಮ್ಮ ಅಮೂಲ್ಯ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ, ಪ್ರಶಿಕ್ಷಣ ವಿದ್ಯಾರ್ಥಿಗಳು ತಾವು ಕಲಿಯುತ್ತಿರುವ ಕಲಾ ಮತ್ತು ಪಠ್ಯಕ್ರಮವನ್ನು ಮಕ್ಕಳಿಗೆ ಹೇಗೆ ಹತ್ತಿರವಾಗಿ ತಲುಪಿಸಬಹುದು ಎಂಬ ಕುರಿತು ಚರ್ಚಿಸಿದರು. ಭಾಷಾ ಶಿಕ್ಷಣದ ಹೊಸ ವಿಧಾನಗಳು ಮತ್ತು ಶಿಕ್ಷಕನ ಕೌಶಲ್ಯದ ಕುರಿತು ಅತಿಥಿಗಳು ಪ್ರಬೋಧನೆ ನೀಡಿದರು. ಇದು ಶಿಕ್ಷಕರಿಗಾಗಿ ಹೊಸ ಸಾದ್ಯತೆಗಳನ್ನು ತೆರೆದಿಡುವಂತಹ ಸ್ಪೂರ್ತಿದಾಯಕ ಮತ್ತು ಪ್ರಾಯೋಗಿಕ ಕಾರ್ಯಾಗಾರವಾಗಿತ್ತು.
ಅತಿಥಿಗಳು ತಮ್ಮ ಅನನ್ಯ ಶೈಲಿಯ ಮೂಲಕ ಚಿಕ್ಕ ಮಕ್ಕಳ ಮನಸ್ಸನ್ನು ಸೃಜನಶೀಲತೆಯಿಂದ ತುಂಬಿಸುವಂತೆ ಪ್ರಾಯೋಗಿಕ ಚಟುವಟಿಕೆಗಳ ಕುರಿತು ಮಾತನಾಡಿದರು.
ಸಂಸ್ಥೆಯ ಪ್ರಾಂಶುಪಾಲೆಯಾಗಿರುವ ಡಾ. ಚಿಂತನಾ ರಾಜೇಶ್ ಹಾಗೂ ಎಲ್ಲಾ ಶಿಕ್ಷಕರು ಉಪಸ್ಥಿತಿಯಲ್ಲಿದ್ದರು. ಶಿಕ್ಷಕ ವಿದ್ಯಾರ್ಥಿನಿಯರಾದ ಭಾರತಿ, ಸೀಮಾ ಮತ್ತು ನಾಗಶ್ವೇತಾ ಕಾರ್ಯಕ್ರಮವನ್ನು ನಿರೂಪಿಸಿದರು.

