

ಕುಂದಾಪುರ (ನ.27): ಟೀಚರ್ ಟ್ರೈನಿಂಗ್ ಅಕಾಡೆಮಿ, ಕುಂದಾಪುರ ಇಲ್ಲಿನ ಶಿಕ್ಷಕ ವಿದ್ಯಾರ್ಥಿಗಳಿಗೆ “ಒಂದಾನೊಂದು ಕಾಲದಲ್ಲಿ” ಎನ್ನುವ ಕಥೆ ಹೇಳುವ ಕೌಶಲ್ಯದ ಕುರಿತು
ಉಪನ್ಯಾಸ ಕಾರ್ಯಕ್ರಮವು ಆಯೋಜಿಸಲ್ಪಟ್ಟಿತ್ತು. ಈ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ದಿವ್ಯ ಎಚ್ ಮತ್ತು ಆಶಾ ಶೆಟ್ಟಿ ಉಪಸ್ಥಿತರಿದ್ದರು .
ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ ಸಂಬಂಧಿಸಿದಂತೆ ದಿವ್ಯ ಎಚ್ ಅವರು ಕಥೆ ಹೇಳುವ ಶೈಲಿಯ ಮೂಲಕ ಮಕ್ಕಳನ್ನು ತಲುಪುವ ಕಲೆ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಆಶಾ ಶೆಟ್ಟಿ ಅವರು ಕಥೆಯ ಭಾಷೆಯ ವೈಶಿಷ್ಟ್ಯತೆ ಮತ್ತು ಅದರ ಪರಿಣಾಮಕಾರಿ ವಿನ್ಯಾಸ ಕುರಿತು ಚರ್ಚೆ ನಡೆಸಿದರು.
ಸಂಸ್ಥೆಯ ಪ್ರಾಂಶುಪಾಲೆಯಾಗಿರುವ ಡಾ. ಚಿಂತನಾ ರಾಜೇಶ್ ಹಾಗೂ ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಆಗಿರುವ ಲತಾ ಜಿ ಭಟ್ ಹಾಗೂ ಎಲ್ಲಾ ಶಿಕ್ಷಕರು ಉಪಸ್ಥಿತಿಯಲ್ಲಿದ್ದರು.


