ಕುಂದಾಪುರ; ಟೀಚರ್ ಟ್ರೈನಿಂಗ್ ಅಕಾಡೆಮಿ, ಕುಂದಾಪುರ ಇಲ್ಲಿನ ಶಿಕ್ಷಕ ವಿದ್ಯಾರ್ಥಿಗಳಿಗೆ “ಗಣಿತ ವಿಷಯ” ಕುರಿತ ವಿಶೇಷ ತರಬೇತಿ (ಜ.16) ಕಾರ್ಯಾಗಾರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಿರಣ್ ಕೊಠಾರಿ ಮತ್ತು ಭಾಗ್ಯ ರವರು ಪಾಲ್ಗೊಂಡು ತಮ್ಮ ಅನುಭವನ್ನು ಹಂಚಿಕೊಂಡರು.
ಪ್ರೀಸ್ಕೂಲ್ ಶಿಕ್ಷಕರಿಗೆ ಮಕ್ಕಳಿಗೆ ಗಣಿತ ಕಲಿಸುವುದು ಹೇಗೆ ಸರಳ ಮತ್ತು ಆಕರ್ಷಕವಾಗಿರಬಹುದು ಎಂಬುದರ ಬಗ್ಗೆ ತರಬೇತಿ ನೀಡುವುದರ ಮೂಲಕ ತಮ್ಮ ಪ್ರಸ್ತುತಿಯಲ್ಲಿ, “ಚಿಕ್ಕ ಮಕ್ಕಳಿಗೆ ಕಲಿಕೆ ಪ್ರಕ್ರಿಯೆ ಆಟದ ಆಧಾರದಲ್ಲಿ ನಡೆಯಬೇಕು” ಎಂಬುದನ್ನು ಒತ್ತಿಹೇಳಿ, ಕಲಿಕೆಯ ಸಲಕರಣೆಗಳ ರೂಪುರೇಷೆ, ಆಕರ್ಷಕ ಚಟುವಟಿಕೆಗಳ ಮಹತ್ವವನ್ನು ಕಿರಣ್ ಕೊಠಾರಿ ರವರು ವಿವರಿಸಿದರು.
ಭಾಗ್ಯ ಇವರು ತಮ್ಮ ಅನನ್ಯ ಶೈಲಿಯ ಮೂಲಕ, ಚಿಕ್ಕ ಮಕ್ಕಳ ಮನಸ್ಸನ್ನು ಸೃಜನಶೀಲತೆಯಿಂದ ತುಂಬಿಸುವಂತೆ ಪ್ರಾಯೋಗಿಕ ಚಟುವಟಿಕೆಗಳನ್ನು ಹಾಗೂ
ಗಣಿತ ಕಲಿಕೆಯ ವಿಧಾನಗಳು, ಪಾಠಗಳ ಸರಳೀಕರಣ, ಮಕ್ಕಳಿಗೆ ಗಣಿತವನ್ನು ಮನರಂಜನೆಗೊಳಿಸುವ ಉಪಾಯಗಳು ಮುಂತಾದ ವಿಷಯಗಳನ್ನು ಒಳಗೊಂಡಿರಬೇಕು ಎನ್ನುವುದರ ಕುರಿತು ಪ್ರಸ್ತುತಪಡಿಸಿದರು. ಇಂತಹ ಕಾರ್ಯಗಾರಗಳು ಶಿಕ್ಷಕರಿಗೆ ಹೊಸ ತಂತ್ರಗಳನ್ನು ಕಲಿಯಲು ಮತ್ತು ತಮ್ಮ ಪಾಠವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವಲ್ಲಿ ಸಹಾಯ ಮಾಡುತ್ತವೆ.
ಸಂಸ್ಥೆಯ ಪ್ರಾಂಶುಪಾಲೆಯಾಗಿರುವ ಡಾ. ಚಿಂತನಾ ರಾಜೇಶ್ ಹಾಗೂ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಕ ವಿದ್ಯಾರ್ಥಿನಿಯರಾದ ಚೈತ್ರ, ಸುಜಾತ ಮತ್ತು ಪ್ರಿಯಲತಾ ಕಾರ್ಯಕ್ರಮವನ್ನು ನಿರೂಪಿಸಿದರು.