ಕುಂದಾಪುರ-ಇಲ್ಲಿನ ಗಾಂಧಿ ಮೈದಾನದಲ್ಲಿ ಟಿ.ಸಿ.ಎ ಉಡುಪಿ ಇವರ ಆಶ್ರಯದಲ್ಲಿ ಶಾಲಾ-ಕಾಲೇಜು ಮಟ್ಟದ ವಿದ್ಯಾರ್ಥಿಗಳ ಕ್ರಿಕೆಟ್ ಪಂದ್ಯಾಟ ನಡೆಯಿತು.
ಟಿ.ಸಿ.ಎ ಕಾಲೇಜು ಮಟ್ಟದ ಕ್ರಿಕೆಟ್ ಪಂದ್ಯಾಟದ ಫಲಿತಾಂಶ
ಜಿ.ಪಿ.ಟಿ ಮಣಿಪಾಲ ಪ್ರಥಮ
ಎಮ್.ಎಸ್.ಆರ್.ಎಸ್ ಶಿರ್ವ-ದ್ವಿತೀಯ
ನವೆಂಬರ್ 6 ರಿಂದ 10 ರ ವರೆಗೆ ಸತತ 5 ದಿನಗಳ ಕಾಲ ನಡೆದ ಈ ಪಂದ್ಯಾಟದಲ್ಲಿ 64 ಹೈಸ್ಕೂಲ್ ಮತ್ತು ಕಾಲೇಜು ತಂಡಗಳು ಭಾಗವಹಿಸಿದ್ದರು.ಅಂತಿಮವಾಗಿ ಫೈನಲ್ ನಲ್ಲಿ ಜಿ.ಪಿ.ಟಿ ಮಣಿಪಾಲ-ಎಮ್.ಎಸ್.ಆರ್.ಎಸ್ ಶಿರ್ವ ಕಾಲೇಜು ತಂಡವನ್ನು ಸೋಲಿಸಿ ಪ್ರಥಮ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಲಕ್ಷ್ಮೀ ಸೋಮ ಬಂಗೇರ ಕಾಲೇಜು ಪಡುಕರೆ ಮತ್ತು ಎಸ್.ಕೆ.ವಿ.ಎಮ್. ಎಸ್ ಕೋಟೇಶ್ವರ ತೃತೀಯ ಸ್ಥಾನ ಪಡೆದರು. ಫೈನಲ್ ಪಂದ್ಯಶ್ರೇಷ್ಟ ಹರ್ಷಿತ್,ಬೆಸ್ಟ್ ಬ್ಯಾಟರ್ ಅಕ್ಷಯ್,ಬೆಸ್ಟ್ ಬೌಲರ್ ಮಹೇಶ್,ಸರಣಿ ಶ್ರೇಷ್ಠ ಪ್ರಶಸ್ತಿ ಪ್ರೀತೇಶ್ ಜಿ.ಪಿ.ಟಿ ಮಣಿಪಾಲ ಪಡೆದುಕೊಂಡರು.
ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಟಿ.ಸಿ.ಎ ಅಧ್ಯಕ್ಷ ಗೌತಮ್ ಶೆಟ್ಟಿ “ಯುವಕರು ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯ. ಅಂತರಾಷ್ಟ್ರೀಯ ಆಟಗಾರರು ಕೂಟ ಟೆನಿಸ್ಬಾಲ್ ಕ್ರಿಕೆಟ್ ನಿಂದಲೇ ಕ್ರಿಕೆಟ್ ಜೀವನ ಪ್ರಾರಂಭಿಸಿದ್ದಾರೆ. ಅಳಿವಿನಂಚಿನಲ್ಲಿರುವ ಈ ಟೆನಿಸ್ಬಾಲ್ ಕ್ರಿಕೆಟ್ ಉಳಿಸಬೇಕಾದರೆ ಯುವಕರು ಈಗಿನಿಂದಲೇ ಜಾಗೃತರಾಗಬೇಕಿದೆ.
ಆದ್ದರಿಂದ ಟಿ.ಸಿ.ಎ ಉಡುಪಿಯ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರ ಸಹಕಾರದೊಂದಿಗೆ ಶಾಲಾ-ಕಾಲೇಜು ಮಟ್ಟದ ಪಂದ್ಯಾಟ ಯಶಸ್ವಿಯಾಗಿದೆ.ಮುಂದಿನ ದಿನಗಳಲ್ಲಿ ಟಿ.ಸಿ.ಎ ಉಡುಪಿ ಪ್ರತಿಭಾವಂತ ಆಟಗಾರರಿಗೆ ಭವಿಷ್ಯದಲ್ಲಿ ಶಿಕ್ಷಣ,ಉದ್ಯೋಗ,ಕ್ರೀಡಾ ಜೀವನ ಕಟ್ಟಿಕೊಡಲು ಸಹಕಾರ ನೀಡಲಿದ್ದೇವೆ ಎಂದರು.”
ಈ ಸಂದರ್ಭ 2023 ರ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕ್ರಿಕೆಟ್ ಪಟು ಪೃಥ್ವಿರಾಜ್ ಶೆಟ್ಟಿ ಹುಂಚನಿ,14 ರ ವಯೋಮಾನದ ಬಾಲಕಿಯರ ಕ್ರಿಕೆಟ್ ನಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ರಚಿತಾ ಹತ್ವಾರ್ ಮತ್ತು ಪ್ರಾಚಿ,17 ಮತ್ತು 14 ರ ವಯೋಮಾನ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಚಾರಿತ್ರ್ಯ ಮತ್ತು ತ್ರಿಶಾ.ಐ.ನಾಯಕ್ ಸನ್ಮಾನಿಸಲಾಯಿತು.
ಶಾಲಾ-ಕಾಲೇಜು ಮಟ್ಟದ ಕ್ರಿಕೆಟ್ ಪಂದ್ಯಾಟದ ಪರಿಕಲ್ಪನೆಯನ್ನು ಕಂಡು ಯಶಸ್ವಿಯಾಗಿ ನಿರ್ವಹಿಸಿದ ಟಿ.ಸಿ.ಎ ಅಧ್ಯಕ್ಷ ಗೌತಮ್ ಶೆಟ್ಟಿ ಇವರನ್ನು ಟಿ.ಸಿ.ಎ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ಬಹುಮಾನ ವಿತರಣಾ ಸಮಾರಂಭದಲ್ಲಿ ಯುವ ಜನ ಸಬಲೀಕರಣ ಕ್ರೀಡಾ ಇಲಾಖೆಯ ಕುಸುಮಾಕರ್ ಶೆಟ್ಟಿ, ಟಿ.ಸಿ.ಎ ಉಡುಪಿ ಗೌರವಾಧ್ಯಕ್ಷರಾದ ಶ್ರೀಧರ್ ಶೆಟ್ಟಿ ಪ್ಯಾರಡೈಸ್ ಬನ್ನಂಜೆ,ರಮೇಶ್ ಶೇರಿಗಾರ್,ಜಗದೀಶ್ ಕಾಮತ್ ಕಟಪಾಡಿ,ಸದಾನಂದ ಶಿರ್ವ,ಯಾದವ್ ನಾಯ್ಕ್ ಕೆಮ್ಮಣ್ಣು,ಅಮರನಾಥ್ ಭಟ್,ಶರತ್ ಶೆಟ್ಟಿ ಪಡುಬಿದ್ರಿ,ಆಸಿಫ್ ಕೆಮ್ಮಣ್ಣು,ನಿತ್ಯಾನಂದ ಮುನ್ನ,ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್ ಬೈಲೂರು,ದಿನೇಶ್ ಗಾಣಿಗ ಬೈಂದೂರು,ನಾರಾಯಣ ಶೆಟ್ಟಿ ಮಾರ್ಕೋಡು,ಮನೋಜ್ ನಾಯರ್,ಕೆ.ಪಿ.ಸತೀಶ್,ಪ್ರವೀಣ್ ಪಿತ್ರೋಡಿ,ಕೋಟ ರಾಮಕೃಷ್ಣ ಆಚಾರ್,ಚೇತನ್ ಕುಮಾರ್ ದೇವಾಡಿಗ,ಅಶೋಕ್ ಹೆಗ್ಡೆ,ಸುಕೇಶ್ ಶೆಟ್ಟಿ,ನಾಗೇಶ್ ನಾವಡ,ಭಾಸ್ಕರ್ ಆಚಾರ್,ಮನೋಜ್,ಉಮೇಶ್ ಕುಂದಾಪುರ,ವಿದ್ಯಾರ್ಥಿಗಳು ಮುಂತಾದವರು ಉಪಸ್ಥಿತರಿದ್ದರು.