ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ : – ಬೀದರ್ ಜಿಲ್ಲೆಯ ಹುಮಾನಬಾದ್ ತಾಲ್ಲೂಕಿನ ತಹಶೀಲ್ದಾರ್ ಮೇಲೆ ಹಲ್ಲೆ ಮಾಡಿರುವ ತಪ್ಪಿತಸ್ಥರನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಮತ್ತು ನೌಕರರು ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಲು ಪೂರಕವಾದ ವಾತಾವರಣ ಸೃಷ್ಟಿಗೆ ಆಗ್ರಹಿಸಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್ಬಾಬು ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು . ಶನಿವಾರ ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಸುರೇಶ್ಬಾಬು , ಜ .೨೮ ರಂದು ಹುಮನಾಬಾದ್ ತಹಸೀಲ್ದಾರ್ ಡಾ.ಪ್ರದೀಪ್ಕುಮಾರ್ ಹಿರೇಮಠ ಅವರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಲ್ಲದೇ ಕಚೇರಿಗೆ ನುಗ್ಗಿ ಹಲ್ಲೆ ನಡೆಸಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಸರ್ಕಾರಿ ನೌಕರರು ಆತ್ಮಸ್ಥೆರ್ಯದಿಂದ ಕೆಲಸ ಮಾಡಲು ಅಗತ್ಯ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು . & ಬೀದರ್ ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ದಂಡಾಧಿಕಾರಿ ಹಾಗೂ ತಹಶೀಲ್ದಾರ್ ಆಗಿರುವ ಡಾ.ಪದೀಪ್ ಕುಮಾರ್ ಹಿರೇಮಠರವರು ಕಛೇರಿಯಲ್ಲಿ ಸಭೆ ನಡೆಸುತ್ತಿದ್ದಾಗ ಕೆಲವು ವ್ಯಕ್ತಿಗಳು ಏಕಾಏಕಿ ಸಭಾಂಗಣವನ್ನು ಪ್ರವೇಶಿಸಿ ತಹಶೀಲ್ದಾರ್ ರವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ , ಎಳೆದಾಡಿ ದೈಹಿಕ ಹಲ್ಲೆ ಮಾಡಿದ್ದಾರೆ . ಈ ದಾಂಧಲೆಯ ದೃಶ್ಯಗಳು ದೂರದರ್ಶನ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ ಎಂದು ತಿಳಿಸಿದರು . ಇಂತಹ ಕೃತ್ಯವನ್ನು ಸರ್ಕಾರಿ ನೌಕರರ ಸಂಘವು ತೀವ್ರವಾಗಿ ಖಂಡಿಸುತ್ತದೆ . ಸದರಿ ಘಟನೆಗೆ ಸ ೦ ಬ ೦ ಧಿಸಿದ ೦ ತೆ ತಹಶೀಲ್ದಾರ್ ರವರ ಮೇಲೆ ಹಲ್ಲೆ ಮಾಡಿರುವ ತಪ್ಪಿಸ್ಟರನ್ನು ಗೂಂಡಾ ಕಾಯಯಡಿ ಬ೦ಧಿಸಬೇಕು ಹಾಗೂ ಹಲ್ಲೆಗೊಳಗಾದ ತಹಶೀಲ್ದಾರ್ ರವರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದರು .
ಕಳೆದ ವರ್ಷ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನಲ್ಲಿ ತಹಶೀಲ್ದಾರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ದಿವಂಗತ ಚಂದ್ರಮೌಳೇಶ್ವರರನ್ನು ಕರ್ತವ್ಯದ ಸಮಯದಲ್ಲಿ ಹತ್ಯೆ ಮಾಡಿರುವ ದುರ್ಘಟನೆ ಇನ್ನು ಹಸಿಯಾಗಿರುವ ಸಂದರ್ಭದಲ್ಲೇ ಇಂತಹ ಪ್ರಕರಣಗಳು ಮರುಕಳಿಸುತ್ತಿರುವುದು ಸರ್ಕಾರಿ ನೌಕರರಲ್ಲಿ ಆತ್ಮಸ್ಥೆರ್ಯ ಕುಂಸಿಸುವಂತವುದ್ದಾಗಿದೆ ಎಂದು ತಿಳಿಸಿದರು . ಜಿಲ್ಲೆಯಲ್ಲೂ ಸರ್ಕಾರಿ ಕೆಲಸವನ್ನು ಭಯದ ವಾತಾವರಣದಲ್ಲಿ ನಿರ್ವಹಿಸುವಂತಹ ಪರಿಸ್ಥಿತಿ ಇದೆ . ಕೋಲಾರ ಜಿಲ್ಲೆಯಲ್ಲಿ ಸರ್ಕಾರಿ ನೌಕರರ ಕೆಲಸಕ್ಕೆ ಆಗಿಂದಾಗ್ಗೆ ಅಡ್ಡಿಪಡಿಸುವ ಹಾಗೂ ನೌಕರರ ಮೇಲೆ ಪದೇ ಪದೇ ಹಲ್ಲೆ ನಡೆಯುತ್ತಿರುವುದರ ಜೊತೆಗೆ ಮಾನಸಿಕ ಕಿರುಕುಳ ನೀಡುತ್ತಿರುವುದು ಜಿಲ್ಲಾಡಳಿತ ಗಮನಕ್ಕೆ ತಂದಾಗ ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು . ಸರ್ಕಾರಿ ನೌಕರರು ನಿರ್ಭೀತಿಯಿಂದ ಕೆಲಸ ಮಾಡಲು ನೌಕರರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಮತ್ತು ಯಾವುದೇ ಸರ್ಕಾರಿ ನೌಕರರ ವಿರುದ್ಧ ಬೆದರಿಕೆ , ಹಲ್ಲೆ , ಅವಾಚ್ಯ ಶಬ್ದಗಳಿಂದ ನಿಂದನೆ ಇತರೇ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುವ ಯಾವುದೇ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನಿಗೆ ಸೂಕ್ತ ತಿದ್ದುಪಡಿ ತಂದು ಹೊಸ ಕಾಯ್ದೆಯನ್ನು ಜಾರಿಗೆ ತರಲು ಜಿಲ್ಲೆಯ ಸಮಸ್ತ ನೌಕರರ ಪರವಾಗಿ ಮನವಿ ಮಾಡುತ್ತಿರುವುದಾಗಿ ತಿಳಿಸಿದರು . ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ವೆಂಕಟರಾಜು , ನೌಕರರ ಸಂಘದ ಮನವಿಯನ್ನು ಮುಖ್ಯಮಂತಿಗಳಿಗೆ ಕಳುಹಿಸುವುದಾಗಿಯೂ , ಜಿಲ್ಲೆಯಲ್ಲಿ ನೌಕರರ ಕರ್ತವ್ಯ ನಿರ್ವಹಣೆಗೆ ಅಗತ್ಯ ರಕ್ಷಣೆ ನೀಡಲು ಸೂಚಿಸುವುದಾಗಿಯೂ ತಿಳಿಸಿದರು .
ಈ ಸಂದರ್ಭದಲ್ಲಿ ನೌಕರರ ಸಂಘದ ಗೌರವಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ , ಖಜಾಂಚಿ ಕೆ.ವಿಜಯ್ , ಹಿರಿಯ ಉಪಾಧ್ಯಕ್ಷ ಸುಬ್ರಮಣಿ , ಉಪಾಧ್ಯಕ್ಷರಾದ ಪುರುಷೋತ್ತಮ್ , ಎಂ.ನಾಗರಾಜ್ , ಕಾರ್ಯದರ್ಶಿ ಶಿವಕುಮಾರ್ , ಸಂಘದ ಪದಾಧಿಕಾರಿಗಳಾದ ಪ್ರೇಮಾ , ನವೀನಾ , ಹರೀಶ್ , ಕಿರಣ್ , ವಿ.ಮುರಳಿಮೋಹನ್ , ನಾಗಾನಂದ್ ಕೆಂಪರಾಜ್ , ಇಂಚರ ನಾರಾಯಣಸ್ವಾಮಿ , ಶ್ರೀರಾಮ್ , ಆರ್.ನಾಗರಾಜ್ , ಎಸ್.ನಾರಾಯಣಸ್ವಾಮಿ ರವಿ , ಚಂದಪ್ಪ , ರತ್ನಪ್ಪಕದಿರಪ್ಪ , ಕೋರ್ಟ್ ನಾಗರಾಜ್ , ಶಿಕ್ಷಕ ಸಂಘದ ಪದಾಧಿಕಾರಿಗಳಾದ ಮುನಿಯಪ್ಪ , ವೈ.ವೆಂಕಟೇಶ್ , ರಮೇಶ್ಬಾಬು , ಬಿ.ಮುನಿರಾಜು , ಕೃಷ್ಣಪ್ಪ , ಸೋಮಶೇಖರ್ , ಕೃಷ್ಣಮೂರ್ತಿ , ರಾಮಕೃಷ್ಣಪ್ಪ , ಎಂ.ಮುನಿರಾಜ್ ಮತ್ತಿತರರಿದ್ದರು .