ಕುಂದಾಪುರದ ಗಾಂಧಿ ಮೈದಾನದಲ್ಲಿ ತಾಲೂಕು. ಆಡಳಿತದ ನೇತೃತ್ವದಲ್ಲಿ ಸ್ವಾತಂತ್ರದ ಅಮೃತ ಮಹೋತ್ಸವ

ಕು೦ದಾಪುರ, ಆ. 15: ಕುಂದಾಪುರದ ಗಾಂಧಿ ಮೈದಾನದಲ್ಲಿ ತಾಲೂಕು. ಆಡಳಿತದ ನೇತೃತ್ವದಲ್ಲಿ ಸ್ವಾತಂತ್ರದ ಅಮೃತ ಮಹೋತ್ಸವ  ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ. ಕೆ.ರಾಜು ದ್ವಜಾರೋಹಣ ಮಾಡಿದರು.

   ಈ ಸಂದರ್ಭದಲ್ಲಿ ಅವರು “ಸ್ವಾತಂತ್ರ್ಯದ. ಹೋರಾಟವನ್ನು ಪ್ರತಿಯೊಬ್ಬ. ಭಾರತೀಯರ ಹೋರಾಟವನ್ನಾಗಿಸಿದ ಗಾಂಧೀಜಿಯವರಿಂದ ಹಿಡಿದು. ಆಸಂಖ್ಯಾಕ. ಜನರೆ. ಹೋರಾಟ, ತ್ಯಾಗವನ್ನು ಸ್ಮರಿಸಿದರೆ ಅಮ್ರತ ಮಹೋತ್ಸವದ ಮಹತ್ವ ಆರವಾಗುತ್ತದೆ. ಅವರೆಲ್ಲರ ತ್ಯಾಗ-ಬಲಿದಾನ ಬಗ್ಗೆ. ಮುಂದಿನ. ಜನಾಂಗಗಳಿಗೆ ತಿಳಿಸಿಕೊಳ್ಳುವಾಗ ಮಾತ್ರ ದೇಶದ ಖ್ಯಾತಿ ವೈಭವ ಅರಿವಾಗಲು ಸಾಧ್ಯವಾಗುತ್ತೆ ಇರುತ್ತದೆ.ನಮ್ಮ ದೇಶದ ಚರಿತ್ರೆ ಶ್ರೀಮಂತ, ಶ್ರೇಷ್ಠ ಪರಂಪರೆ, ಸಾಂಸ್ಯತಿಕ, ವೈವಿಧ್ಯತೆ ಹೊಂದಿರುವ. ದೇಶದ. ಸ್ವಾತಂತ್ರದ ಅಮೃತ ಮಹೋತ್ಸವದ ಈ ಕ್ಷಣ ಬಹಳ ಮಹತ್ವದಾಗಿದೆ.

   ಪುರಸಭೆಯ ಅಧ್ಯಕ್ಷೆ ವೀಣಾ ಅಧ್ಯಕ್ಷೆತೆ ಈ ವರ್ಷ ಇಸ್ಟೊಂದು ಮಕ್ಕಳು ನಾಗರಿಕರು ಸೇರಿದ್ದು ತುಂಬಾ ಆನಂದ ಉಂಟಾಗಿದೆ ಎಂದು ಶುಭ ಕೋರಿದರು. ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ. ವಿಜಯ ಎಸ್‌. ಪೂಜಾರಿ, ಪುರಸಭೆ ಮುಖ್ಯಾಧಿಕಾರಿ ಕೆ.ಗೋಪಾಲಕ್ರಷ್ಣ ಶೆಟ್ಟಿ, ಗೋಪಾಲಕೃಷ್ಣ ಶೆಟ್ಟಿ. ಪುರಸಭೆಯ ಉಪಾಧ್ಯಕ್ಷ ಸಂದೀಪ್ ಖಾರ್ವಿ, ಸದಸ್ಯರು ಜನಪ್ರತಿನಿಧಿಗಳು, ಕ್ರೀಡಾ ಇಲಾಖೆಯ ಕುಸುಮಾಕರ್‌ ಶೆಟ್ಟಿ ಕರು  ಡಿ ವೈ.ಎಸ್ ಪಿ ಶ್ರೇಕಾಂತ್ ಕೆ, ಕುಂದಾಪುರ ತಾಲೂಕು ಪಂಚಾಯತ್ ಇಒ ಮಹೇಶ್ ಹೊಳ್ಳ್ಸ್, ತಾಲೂಕು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ   ಯೋಜನಾಧಿಕಾರಿ ಶ್ವೇತಾ ಎನ್‌. ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ನಗರ ವ್ಯಾಪ್ತಿಯ ಶಾಲಾ- ಕಾಲೇಜುಗಳ ಶಿಕ್ಷರು, ವಿದ್ಯಾರ್ಥಿಗಳು ಮೆರುಗು ತಂದ ಮೆರವಣಿಗೆಯ ಸಂಭ್ರಮದಲ್ಲಿ ಭಾಗಿಯಾದರು.

     ಧ್ವಜಾರೋಹಣಕ್ಕೂ ಮುನ್ನ ಕುಂದಾಪುರದ. ಜೂನಿಯರ್‌ ಕಾಲೇಜಿನಿಂದ ಗಾಂಧಿ ಮೈದಾನದವರೆಗೆ ಎವಿಧತಂಡಗಳ ಬೃಹತ್‌ ಮೆರವಣಿಗೆಯು ಮತ್ತಷ್ಟು ಮೆರುಗು ತಂದಿತು. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟ ಧ್ವಾರೋಹಣಗೈದು, ಚಾಲನೆ. ನೀಡಿದರು. ಕುಂದಾಪುರ. ಪೊಲೀಸ್‌ ತಂಡ, ಎನ್‌ಸಿಸಿ ತಂಡ, ಸ್ಟೆಂಟ್‌ ಜೋಸೆಫ್‌ ಪ್ರೌಢಶಾಲೆಯ ಎನ್‌ಸಿಸಿ ಬ್ಯಾಂಡ್‌ ಸೆಟ್‌, ಭಾರತಾಂಬೆ ಟ್ಯಾಬ್ಲೋ, ಜೂನಿಯರ್‌ ಕಾಲೇಜು. ಪ್ರೌಢಶಾಲೆಯ ಎನ್‌ಸಿಸಿ ಪೌರ ಕಾರ್ಮಿಕರಿಂದ ಆಕರ್ಷಕ ಪಥಸಂಚಲನ ಮತ್ತು ಕೀಲು ಕುದುರೆ, ಚೆಂಡೆ ವಾದನ, ವಿದ್ಯಾರ್ಥಿಗಳ ತಂಡ, ಜನಪ್ರತಿನಿಧಿಗಳು, ಪೌರ ಕಾರ್ಮಿಕರು, ಶಾಲಾ- ಕಾಲೇಜು ಎಲ್ಲ ಇಲಾಖೆಯ ಅಧಿಕಾರಿ, ಸಿಬಂದಿ ತಂಡ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಆಕರ್ಷಕ ಪಥ ಸಂಚಲನ ಧ್ವಜಾರೋಹಣದ ಅನಂತರ ಆಕರ್ಷಕ ಪಥ ಸಂಚಲನ ಮತ್ತಷ್ಟು ಕಳೆ ತಂದಿತು.

    ಕೆ.’ರಾಜು ಗೌರವ ವಂದನೆ ಸ್ವೀಕರಿಸಿದರು.  ಕುಂದಾಪುರ ಎಸ್‌ಐ ಸದಾಶಿವ ಗರರೋಜಿ  ಖಡ್ಗಧಾರಿಯಾಗಿ ಕಮಾಂಡ್‌ ನೀಡಿದರು. ಪೊಲೀಸ್‌ ತಂಡ, ಗೃಹ ರಕ್ಷಕದಳ, ಸೈಂಟ್‌ ಮೇರಿಸ್‌, ವೆಂಕಟರಮಣ, ಸ್ಟೆಂಟ್‌ ಜೋಸೆಫ್‌, ಹೋಲಿ ರೋಜರಿ ಶಿಕ್ಷಣ ಸಂಸ್ಥೆಗಳ ಶಾಲೆ, ವಡೇರಹೋಬಳಿ ಶಾಲೆ, ಗರ್ಲ್. ಶಾಲೆಗಳ: ಎನ್‌ಸಿಸಿ, ಸ್ಕೌಟ್‌- ಗೈಡ್ಸ್‌ ತಂಡಗಳು ಹಾಗೂ ಪೌರಕಾರ್ಮಿಕರತಂಡ ಪಥಸಂಚಲನದಲ್ಲಿ ಭಾಗಿಯಾದರು. ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.