ಕುಂದಾಪುರ/ತಲ್ಲೂರು: ಶಾಲೆಗೆ ತೆರಳಲು ಬಸ್ಸಿಗಾಗಿ ಕಾಯುತ್ತಿದ್ದ ವೇಳೆ 7ನೇ ತರಗತಿಯ ವಿದ್ಯಾರ್ಥಿ ಪೃಥ್ವಿರಾಜ್ ಶೆಟ್ಟಿ (13) ಮೃತ ಪಟ್ಟ ದಾರುಣ ಘಟನೆ ಕುಂದಾಪುರದ ತಲ್ಲೂರಿನಲ್ಲಿ ನಡೆದಿದೆ. ದುರ್ದೈವಿ ಪೃಥ್ವಿರಾಜ್ ಶೆಟ್ಟಿಯ ಅಕ್ಕ ಕೂಡ ಕಳೆದ ವರ್ಷ ಪೃಥ್ವಿರಾಜ್ ಅವರ ಅಕ್ಕ ಅನುಶ್ರೀ ಕೂಡ ಮನೆಯಲ್ಲಿ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಳು. ಅಕ್ಕನ ಸಾವಿನ ನೋವು ಮಾಸುವ ಮೊದಲೇ ಪೋಷಕರಿಗೆ ಮಗನ ಸಾವು ಮತ್ತಷ್ಟು ಆಘಾತ ಜೊತೆ ಬಹಳ ಸಂಗತಿಯಾಗಿದೆ.
ಅಕ್ಷರ ದಾಸೋಹ ಯೋಜನೆ ಕುಂದಾಪುರದ ಸಹಾಯಕ ನಿರ್ದೇಶಕ ಅರುಣ್ಕುಮಾರ ಶೆಟ್ಟಿ ಹಾಗೂ ಹಕ್ಲಾಡಿ ಪ್ರೌಢ ಶಾಲಾ ಶಿಕ್ಷಕಿ ಭಾರತಿ ದಂಪತಿ ಪುತ್ರ ಪೃಥ್ವಿರಾಜ್ ಶನಿವಾರ ಬೆಳಗ್ಗೆ ಮನೆಯ ಬಳಿ ಶಾಲೆಯ ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಆಕಸ್ಮಿಕವಾಗಿ ಕುಸಿದು ಬಿದ್ದಿದ್ದಾರೆ. ಇದನ್ನು ಗಮನಿಸಿದ ಪೃಥ್ವಿರಾಜ್ ಪೋಷಕರು ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಿ, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದರು ಆದರೆ ಚಿಕಿತ್ಸೆ ಫಲಿಸಲಿಲ್ಲ. ಪೃಥ್ವಿರಾಜ್ ಹಟ್ಟಿಯಂಗಡಿ ಸಿದ್ದಿವಿನಾಯಕ ವಸತಿ ಶಾಲೆಯ ೭ ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಕಲಿಕೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಚುರುಕಾಗಿದ್ದ.
ಮಾನವನ ಜೀವಿತದಲ್ಲಿ ಕೆಲವೊಂದು ಸಲ ಅಸಮಾನ್ಯ ಮಾನವನಿಗೆ ನುಲುಕದ ಘಟನೆಗಳು ಸಂಭವಿಸುತ್ತವೆ:ಕಳೆದ ವರ್ಷ ಮಗಳನ್ನು ಕಳೆದುಕೊಂಡ ದಂಪತಿ
ಅರುಣ್ಕುಮಾರ ಶೆಟ್ಟಿ ಹಾಗೂ ಭಾರತಿ ಶೆಟ್ಟಿ ದಂಪತಿಗೆ ಓರ್ವ ಪುತ್ರಿ ಹಾಗೂ ಪುತ್ರ ಇದ್ದು ಮಗಳು ಕಳೆದ ವರ್ಷ,ಕುಸಿದು ಬಿದ್ದು ಮೃತ ಪಟ್ಟಾಗ ಎನೋ ತಿಂದಿದ್ದರಿಂದ ಎಂದು ಸುದ್ದಿ ಹಬ್ಬಿತ್ತು. ನಂತರ ಹ್ರದಯದ ತೊಂದರೆಯಿಂದ ಹೃದಯಾಘಾತದಿಂದ ಮೃತಪಟ್ಟಿದ್ದು ಎಂದು ತಿಳಿದು ಬಂದಿತ್ತು. ಈಗ ಇವರ ಮನೆಯಲ್ಲಿ ಸಂಭವಿಸಿದ ಎರಡನೇ ದುರಂತ ಇದಾಗಿದೆ. ಪೃಥ್ವಿರಾಜ್ ನ ಸಾವು ಹೇಗಾಗಿದೆಯೆಂದು ಇನ್ನು ವೈಧ್ಯಕೀಯ ವರದಿಯಿಂದ ತಿಳಿಯಬೇಕಿದೆ.
ಅ.20 ಪೃಥ್ವಿರಾಜ್ ಶೆಟ್ಟಿ ತನ್ನ ಸಾವಿನ ಹಿಂದಿನ ದಿನ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಕಳೆದ ವರ್ಷ ತಮ್ಮನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ ಅಕ್ಕ ಅನುಶ್ರೀ ತಮ್ಮನ ಹುಟ್ಟುಹಬ್ಬದ ಸಂಭ್ರಮ ಮುಗಿದ ಒಂದು ವಾರದ ಒಳಗೆ ಇಹಲೋಕ ತ್ಯಜಿಸಿದ್ದರು. ಅಕ್ಕನ ನೆನಪಿನಲ್ಲೇ ದುಖಃದಿಂದ ಹುಟ್ಟುಹಬ್ಬ ಆಚರಿಸಿದ್ದ ಪ್ರಥ್ವಿರಾಜ್, ಮನುಷ್ಯನ ಉಹೆಗೂ ನಿಲುಕದಂತೆ ಸಾವಿಗೆ ಓ ಕೊಟ್ಟಿದ್ದು ವಿಸ್ಮಿತವೇ ಸರಿ. ಈಗ ಪ್ರಥ್ವಿರಾಜ್ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿರುವುದು ತಂದೆ ತಾಯಿ ಸಂಬಂಧಿಕರಿಗೆ ತೀವ್ರವಾದ ಅಘಾತ ಮತ್ತು ದುಖವನ್ನುಂಟು ಮಾಡಿದೆ.